ಜೊತೆಗೆ, 'ಸದ್ಯ ಬಹಳಷ್ಟು ಮುಖ್ಯ ಅಂಶಗಳೂ ಇರುವ ಒಂದು ಉತ್ತಮ ಕಥೆಯ ಹುಡುಕಾಟದಲ್ಲಿದ್ದೇವೆ" ಎಂದು ಜ್ಯೇಷ್ಠವರ್ಧನ್ ತಿಳಿಸಿದ್ದಾರೆ. ಅಂದಹಾಗೆ, ಜ್ಯೇಷ್ಠವರ್ಧನ್ ಸದ್ಯ ಪಬ್ಲಿಕೇಶನ್ ಮತ್ತು ಅಡ್ವರ್ಟೈಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. 2026ರಲ್ಲಿಯೇ ತಮ್ಮ ಮೊದಲ ಸಿನಮಾವನ್ನು ಫೈನಲ್ ಮಾಡುವ ನಿರ್ಧಾರದಲ್ಲಿದ್ದು, ಈಗಾಗಲೇ ಕಥೆಗಳನ್ನು ಕೂಡ ಕೇಳುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿದ ಜ್ಯೇಷ್ಠವರ್ಧನ್ "ನನ್ನ ಮೊದಲ ಸಿನಿಮಾ ಯಾವುದೇ ಒಂದು ನಿರ್ದಿಷ್ಟ ಜಾನರ್‌ಗೆ ಸೀಮಿತವಾಗಬಾರದು. ಆ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುವಂತಿರಬೇಕು. ಹೆಚ್ಚಿನ ಮನೆಗಳಲ್ಲಿ ನನ್ನ ವಯಸ್ಸಿನ ಹುಡುಗರಿಗೆ 'ಓದು' ಎಂದು ಹೇಳಿದರೆ, ನಮ್ಮ ಮನೆಯಲ್ಲಿ ಮಾತ್ರ 'ಸಿನಿಮಾ ನೋಡು' ಎಂದು ಪ್ರೋತ್ಸಾಹಿಸುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅದೇ ನನ್ನ ಮೊದಲ ಕ್ಲಾಸ್‌ರೂಮ್" ಎಂದು ಜ್ಯೇಷ್ಠವರ್ಧನ್ ಹೇಳುತ್ತಾರೆ.