ನಟಿ ಅಮೃತಾ ಅಯ್ಯಂಗಾರ್ ಅವರು ತಮ್ಮ ವೃತ್ತಿಜೀವನದ ಸಾಧನೆಗಳನ್ನು ಕಡೆಗಣಿಸಿ, ಮಾಧ್ಯಮಗಳು ತಮ್ಮ ಹಿಂದಿನ ಬ್ರೇಕಪ್ ವಿಷಯವನ್ನೇ ನಿರಂತರವಾಗಿ ಹೈಲೈಟ್ ಮಾಡುವುದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಕಾರಾತ್ಮಕ ಪ್ರಚಾರವು ತಮ್ಮ ಗುರುತಾಗಿ ಬದಲಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ
ಸಾಮಾನ್ಯವಾಗಿ ವಿಷಯ ಯಾರದ್ದೇ ಇರಲಿ, ಅಲ್ಲಿ ಹೈಲೈಟ್ ಆಗುವುದು ನೆಗೆಟಿವ್ ವಿಷಯಗಳೇ ಮೊದಲು. ಅದರಲ್ಲಿಯೂ ಸೆಲೆಬ್ರಿಟಿಗಳ ಲೈಫ್ನಲ್ಲಿ ನೆಗೆಟಿವ್ ಬಂದುಬಿಟ್ಟರೆ, ಸೋಷಿಯಲ್ ಮೀಡಿಯಾಗಳಲ್ಲಿ ಅದರದ್ದೇ ಕಾರುಬಾರು. ಈ ಬಗ್ಗೆ ನಟಿ ಅಮೃತಾ ಅಯ್ಯಂಗಾರ್ ಕಿಡಿಕಾರಿದ್ದಾರೆ. ಇಂಥ ನೆಗೆಟಿವ್ ಮನಸ್ಥಿತಿಯ ಬಗ್ಗೆ ಅವರು ಹರಿಹಾಯ್ದಿದ್ದಾರೆ.
26
ನಟಿ ಗರಂ
ʻಲವ್ ಮಾಕ್ಟೇಲ್ 3’ ಸಕ್ಸಸ್ ಮೀಟ್ ಸಂದರ್ಭದಲ್ಲಿ ಹಲವು ಮಾಧ್ಯಮಗಳಲ್ಲಿ ನಟಿ ತಮ್ಮ ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ತಮ್ಮ ಜೀವನದ ಬ್ರೇಕಪ್ ಬಗ್ಗೆಯೂ ಅವರು ಹೇಳಿಕೊಂಡಿದ್ದು, ಹಲವು ಯುಟ್ಯೂಬ್ಗಳಲ್ಲಿ, ಅವರ ಬ್ರೇಕಪ್ ಬಗ್ಗೆಯೇ ಹೈಲೈಟ್ ಆಗಿದ್ದು, ನಟಿಯ ಸಾಧನೆ ಬಗ್ಗೆ ಅಷ್ಟಾಗಿ ಯಾರೂ ಮಾತನಾಡಲೇ ಇಲ್ಲ. ಇದೀಗ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ ಗರಂ ಆಗಿದ್ದಾರೆ.
36
ಬ್ರೇಕಪ್ ಅನ್ನೇ ಐಡೆಂಟಿಟಿ ಮಾಡ್ಕೊಂಡಿದ್ದಾರೆ
ನನ್ನ ಬ್ರೇಕಪ್ ಅನ್ನೇ ಎಲ್ಲರೂ ಐಡೆಂಟಿಟಿ ಮಾಡಿಕೊಂಡು ಬಿಟ್ಟಿದ್ದಾರೆ. ಎಲ್ಲಿ ನೋಡಿದರೂ ನನ್ನ ಬ್ರೇಕಪ್ ವಿಷ್ಯವೇ. ಅದನ್ನು ಬಿಟ್ಟರೆ ನನಗೆ ಬೇರೆ ಐಡೆಂಟಿಟಿನೇ ಇಲ್ವಾ ಎಂದು ಕೋಪದಿಂದ ನುಡಿದಿದ್ದಾರೆ ನಟಿ. ನಾನು ಯಾವಾಗಲೂ ಓಪನ್ ಆಗಿಯೇ ಇರುವವಳು. ಅದೇ ಕಾರಣಕ್ಕೆ ಬ್ರೇಕಪ್ ಬಗ್ಗೆ ಮಾತನಾಡಿದ್ದೆ. ಯಾರಿಗೆ ಬ್ರೇಕಪ್ ಆಗಲ್ಲ ಹೇಳಿ, ಎಲ್ಲರ ಲೈಫ್ನಲ್ಲಿಯೂ ಇದು ಕಾಮನ್. ಸಾಧನೆ ಬಿಟ್ಟು ಬರೀ ಅದರ ಬಗ್ಗೆ ಮಾತನಾಡ್ತಿರೋದನ್ನು ನೋಡಿದರೆ ತುಂಬಾ ಕೋಪ ಬರುತ್ತದೆ ಎಂದಿದ್ದಾರೆ ನಟಿ.
ನಾನು ಎಷ್ಟೊಂದು ಸಿನಿಮಾಗಳನ್ನ ಮಾಡಿದ್ದೇನೆ. ಎಷ್ಟೊಂದು ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೆ ಎಲ್ಲರೂ ಬ್ರೇಕಪ್ ವಿಷ್ಯ ಮಾತನಾಡ್ತಾರೆ. ಸಂದರ್ಶನಕ್ಕೆ ಹೋದ್ರೆ ಅಲ್ಲಿ ಕೇಳೋದೂ ಇದೇ ವಿಷಯವನ್ನು. ನನ್ನ ಅಮ್ಮ ಕೂಡ ತುಂಬಾ ಬೇಜಾರು ಮಾಡಿಕೊಳ್ತಾರೆ. ಅವರು ನನ್ನ ಸಂದರ್ಶನ ನೋಡಿದಾಗಲೆಲ್ಲಾ ಶೀರ್ಷಿಕೆ ಸೇರಿ ಎಲ್ಲದರಲ್ಲಿಯೂ ಬ್ರೇಕಪ್ ಬಗ್ಗೆನೇ ಇರೋದು ಅವರಿಗೂ ನೋವು ತಂದಿದೆ ಎಂದಿದ್ದಾರೆ ನಟಿ.
56
ಎಲ್ಲರ ಹಾಗೆ ನಾನೂ ಮಾಡ್ಬೋದಿತ್ತು
ನೀವು ಯಾರನ್ನಾದರೂ ಪ್ರೀತಿ ಮಾಡಿದ್ದೀರಾ ಅಂತ ಕೇಳ್ತಾರೆ. ಅದು ಎಲ್ರಿಗೂ ಆಗುವಂತಹ ಸಹಜ ವಿಷಯ. ನನಗೂ ಪ್ರಶ್ನೆ ಕೇಳಿದಾಗ ನೋ ಕಮೆಂಟ್ಸ್ ಅಂತ ಹೇಳಿ ಸುಮ್ಮನಾಗಬಹುದು. ಆದರೆ ನಾನು ಎಲ್ಲವನ್ನೂ ನೇರಾನೇರ ಹೇಳುವವಳು. ಅದರ ಬಗ್ಗೆಯೂ ಮಾತನಾಡಿದ್ದೆ ಅಷ್ಟೇ. ಆದರೆ, ತುಂಬಾ ಇರಿಟೇಟ್ ಆಗುವ ರೀತಿಯಲ್ಲಿ ಎಲ್ಲರೂ ಮಾಡ್ತಾರೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
66
ಬ್ರೇಕಪ್ ಬಗ್ಗೆ ನಟಿ ಏನ್ ಹೇಳಿದ್ರು?
ಅಷ್ಟಕ್ಕೂ ನಟಿ, ಈ ಹಿಂದೆ ಸಂದರ್ಶನವೊಂದರಲ್ಲಿ ಬ್ರೇಕಪ್ ಬಗ್ಗೆ ಮಾತನಾಡುತ್ತಾ, ಹಾರ್ಟ್‌ಬ್ರೇಕ್ ಯಾರಿಗೆ ಆಗಲ್ಲ? ಎಲ್ರಿಗೂ ಆಗುತ್ತೆ. ನನಗೂ ಆಗಿದೆ. ನಾನು ಕೂಡ ಚೈಲ್ಡ್ ತರಹ ಸ್ಟೇಟಸ್ ಹಾಕಿಕೊಂಡಿದ್ದು ಇದೆ. ಕಾಲೇಜಿನಲ್ಲೂ ಆಗಿದೆ, ಆಗ ಏನೇನೋ ಹುಚ್ಚಾಟ ಮಾಡ್ತಿದ್ದೆ. ಆದ್ರೆ ಈಗ ಅದನ್ನು ನೆನಪಿಸಿಕೊಂಡರೆ ಇಂಥದ್ದಕ್ಕೆಲ್ಲಾ ನಾನು ಕಣ್ಣೀರು ಹಾಕಿದ್ನಾ ಅನ್ಸತ್ತೆ. ಕೆಲವೊಂದು ಸಲ ಬ್ರೇಕಪ್‌ಗಳು ಆಗೋದು ಬ್ಯೂಟಿಫುಲ್ ಮತ್ತು ನನಗೆ ಇಷ್ಟ. ಅಂದರೆ, ದೇವರು ನಮಗೆ ಇನ್ನೊಂದು ಚಾನ್ಸ್ ಕೊಟ್ಟಂಗೆ. ಮದುವೆ ಆಗದೇ ಬ್ರೇಕಪ್ ಆಗೋದು ಒಳ್ಳೇದು ತಾನೆ ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.