Junior Movie: ಗಾಲಿ ಜನಾರ್ಧನ್‌ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಎಲ್ಲಿಗೆ ಬಂತು? ಗುಡ್‌ನ್ಯೂಸ್‌ ಕೊಟ್ಟ ಕಿರೀಟಿ ತಂಡ!

Published : May 20, 2025, 09:05 AM IST

ಜನಾರ್ಧನ್‌ ರೆಡ್ಡಿ ಪುತ್ರ ಕಿರೀಟಿ ನಟನೆಯ ಮೊದಲ ಸಿನಿಮಾ ‘ಜೂನಿಯರ್’. ಇತ್ತೀಚಿಗೆ ಬಿಡುಗಡೆ ದಿನಾಂಕ ಘೋಷಣೆ‌ ಮಾಡಿದ್ದ ಸಿನಿಮಾ ತಂಡವು ಈಗ ಮೊದಲ ಹಾಡು ರಿಲೀಸ್ ಮಾಡಿದೆ. ಕನ್ನಡ, ತೆಲುಗು ಭಾಷೆಯಲ್ಲಿ ಈ ಹಾಡು ರಿಲೀಸ್‌ ಆಗಿದೆ.   

PREV
16
Junior Movie: ಗಾಲಿ ಜನಾರ್ಧನ್‌ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಎಲ್ಲಿಗೆ ಬಂತು? ಗುಡ್‌ನ್ಯೂಸ್‌ ಕೊಟ್ಟ ಕಿರೀಟಿ ತಂಡ!

ʼಜೂನಿಯರ್ʼ ಸಿನಿಮಾದ ಮೊದಲ ʼಲೆಟ್ಸ್ ಲಿವ್ ದಿಸ್ ಮೊಮೆಂಟ್ʼ ಎಂಬ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಹಾಡಿನ ರಿಲೀಸ್ ಕಾರ್ಯಕ್ರಮ ನಡೆದಿದೆ. ಈ ಸಮಾಂಭಕ್ಕೆ ನಟ ರವಿಚಂದ್ರನ್, ಬಾಹುಬಲಿ ಹಾಗೂ RRR Movie ಖ್ಯಾತಿಯ ಕ್ಯಾಮರಾಮ್ಯಾನ್ ಕೆ ಕೆ ಸೆಂಥಿಲ್ ಕುಮಾರ್, ಸಂಗೀತ ಸಂಯೋಜಕಿ ದೇವಿ ಶ್ರೀ ಪ್ರಸಾದ್, ನಿರ್ಮಾಪಕ ರಜನಿ ಕೊರಾಪಾಟಿ, ನಿರ್ದೇಶಕ ರಾಧಾಕೃಷ್ಣ ಸೇರಿ ಚಿತ್ರತಂಡ ಸಾಕ್ಷಿಯಾಗಿತ್ತು.
 

26

ನಟ ರವಿಚಂದ್ರನ್ ಮಾತನಾಡಿ, “ರಾಧಾಕೃಷ್ಣ ಅವರ ಬಳಿ ಒಳ್ಳೆ ಗುಣವಿದೆ. ಅವರು ಕಥೆ ಹೇಳುವಾಗ ಕಿವಿಯಲ್ಲಿ ಪಿಸುಗುಟ್ಟಿದ ರೀತಿ ಇದೆ.‌ ಆ ಕಥೆ ಮನಸ್ಸು ನಮ್ಮ ತಟ್ಟುತ್ತದೆ. ಇದು ನಿಮಗೆಲ್ಲ ಜೂನಿಯರ್. ನನಗೆ ಮಾತ್ರ ಇದು ಮೈ ಜೂನಿಯರ್. ಇದೊಂದು ಥರ ಲಾಂಗ್ ಜರ್ನಿ. ಡಬ್ ಮಾಡುವಾಗ ಇದು ಹ್ಯಾಪಿ ಜರ್ನಿ ಎನಿಸಿತು. ಒಂದು ಸಿನಿಮಾ ಎಷ್ಟು ಟೈಮ್ ತೆಗೆದುಕೊಳ್ಳುತ್ತದೆ ಎನ್ನೋದು ಮುಖ್ಯವಲ್ಲ, ಬದಲಿಗೆ ಹೇಗೆ ಪ್ರೇಕ್ಷಕರನ್ನು ಕೂರಿಸುತ್ತದೆ ಎನ್ನೋದು ಮುಖ್ಯ. ಕಿರೀಟಿಗೆ ಕಥೆ ಆರಿಸಿಕೊಳ್ಳುವ ಧೈರ್ಯ ಇದೆ, ತಾನು ಹೀರೋ ಆಗಬೇಕು ಎನ್ನೋದಿದೆ. ಪಾತ್ರದ ಮೇಕಿಂಗ್ ಮೂಲಕ ಹೀರೋ ಆಗಬೇಕು ಎನ್ನುವುದು ಕಿರೀಟಿಯಲ್ಲಿ ಇದೆ.‌ ಹೊಸಬರು ಈ ರೀತಿ ಸ್ಟ್ರಿಪ್ ಆಯ್ಕೆ ಮಾಡಿಕೊಳ್ಳುವುದು ತುಂಬಾ ಕಡಿಮೆ” ಎಂದರು.

36

ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮಾತನಾಡಿ, “ಈ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಕಿರೀಟಿ ಒಳ್ಳೆ ಕಥೆ ಆಯ್ಕೆ ಮಾಡಿದ್ದಾರೆ.‌ ಎಮೋಷನಲ್ ಕಥೆಯಿದೆ” ಎಂದರು.
 

46

ನಟ ಕಿರೀಟಿ ಮಾತನಾಡಿ, “ ನಮ್ಮ ಸಿನಿಮಾ ಮೂರು ವರ್ಷ ತಡವಾಗಿದೆ. ಫೈಟ್ ಮಾಡುವಾಗುವಾಗ ನನಗೆ ಬೆನ್ನು ಇಂಜೂರಿ ಆಗಿದ್ದರಿಂದ ಲೇಟ್‌ ಆಗಿದೆ. ಅದು ಬಿಟ್ಟು ಬೇರೆ ಕಾರಣವಿಲ್ಲ. ನನಗೆ ರವಿಚಂದ್ರನ್ ಸರ್ ಜೊತೆ 25 ದಿನ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದು ನನ್ನ ಪುಣ್ಯ. ಅವರ ಜೊತೆ ತುಂಬಾ ಕಲಿತುಕೊಂಡೆ. ಶ್ರೀಲೀಲಾ, ಜೆನಿಲಿಯಾ ಚಿತ್ರದಲ್ಲಿ ಒಳ್ಳೆ ಮಾತ್ರ ಮಾಡಿದ್ದಾರೆ” ಎಂದು ಹೇಳಿದ್ದಾರೆ. 

56

ʼಲೆಟ್ಸ್ ಲೀವ್ ದಿಸ್ ಮೂವೆಂಟ್ʼ ಎಂದು ಕಿರೀಟಿ, ನಟಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ  ಒದಗಿಸಿರುವ ಹಾಡಿಗೆ ಕನ್ನಡದಲ್ಲಿ ಪವನ್ ಭಟ್ ಸಾಹಿತ್ಯ ಬರೆದಿದ್ದು,‌ ನಕುಲ್ ಅಭಯಂಕರ್ ಧ್ವನಿಯಾಗಿದ್ದಾರೆ.

66

ʼಮಾಯಾಬಜಾರ್ʼ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಜೂನಿಯರ್ ಸಿನಿಮಾ ತಯಾರಾಗಿದೆ.‌ ಕಿರೀಟಿ ಮೊದಲ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಈ ಸಿನಿಮಾ ಜುಲೈ 18ರಂದು ರಿಲೀಸ್‌ ಆಗಲಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories