ಸಮೀರ್ ಸ್ಯಾಮ್ ಅವರು ಬಾವ ಪ್ರಶಾಂತ್ ಮೇಲೆ ಒಂದಷ್ಟು ಆರೋಪ ಮಾಡಿದ್ದರು. ಇದಕ್ಕೆ ಪ್ರಶಾಂತ್ ಅವರು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
“ಪ್ರಶಾಂತ್ ಅವರು ನನ್ನ ಅಕ್ಕನ ಹೆಸರಿನಲ್ಲಿ ಸಾಲ ಮಾಡಿದ್ದಾರೆ. ಬೇರೆ ಹುಡುಗಿಗೆ ನನ್ನ ಅಕ್ಕನ ದುಡ್ಡಲ್ಲಿ ಐಫೋನ್ ಕೊಡಿಸಿದ್ದಾರೆ. ಕಿಚ್ಚ ಸುದೀಪ್, ಡಿಕೆ ಶಿವಕುಮಾರ್ ಅವ್ರ ಪರಿಚಯ ಇದೆ ಅಂತ ಸುಳ್ಳು ಹೇಳಿ, ಫೋಟೋ ತೆಗೆಸಿಕೊಡ್ತೀನಿ ಅಂತ ಹೇಳಿ ದುಡ್ಡು ವಸೂಲಿ ಮಾಡ್ತಾರೆ. ಪ್ರಮೋಶನ್ ಮಾಡಿಕೊಡ್ತೀನಿ ಅಂತ ನನ್ನ ಹೆಸರು ಹೇಳಿ ಕೂಡ ದುಡ್ಡು ತಗೊಳ್ತಿದ್ದಾರೆ. ನನ್ನ ಅಕ್ಕನಿಗೆ ಆದ ಅನ್ಯಾಯ ಯಾರಿಗೂ ಆಗಬಾರದು” ಅಂತ ಸಮೀರ್ ಅವರು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಹೇಳಿದ್ದಾರೆ.