ಅಂದು ಲಕ್ಷ ಲಕ್ಷ ಹಣ ಬರುತ್ತಿದ್ದ ಉದ್ಯೋಗಕ್ಕೆ ಗುಡ್‌ಬೈ ಹೇಳಿದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ; Wedding Anniversary Photos

Published : May 19, 2025, 12:36 PM ISTUpdated : May 19, 2025, 01:24 PM IST

ನಟ ದರ್ಶನ್‌ ತೂಗುದೀಪ ಅವರು ಪತ್ನಿ ವಿಜಯಲಕ್ಷ್ಮೀ ಜೊತೆಗೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಈ ಪಾರ್ಟಿಯಲ್ಲಿ ಅವರ ಆತ್ಮೀಯರು, ಕುಟುಂಬಸ್ಥರು ಭಾಗಿಯಾಗಿದ್ದರು.  

PREV
15
ಅಂದು ಲಕ್ಷ ಲಕ್ಷ ಹಣ ಬರುತ್ತಿದ್ದ ಉದ್ಯೋಗಕ್ಕೆ ಗುಡ್‌ಬೈ ಹೇಳಿದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ; Wedding Anniversary Photos

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದಿಷ್ಟು ತಿಂಗಳುಗಳ ಕಾಲ ಜೈಲಿನಲ್ಲಿದ್ದ ದರ್ಶನ್‌ ತೂಗುದೀಪ ಅವರು ಜೈಲಿನಿಂದ ಹೊರಗಡೆ ಬಂದಮೇಲೆ ಕೆಲವೇ ಕೆಲವು ಸ್ನೇಹಿತರ ಜೊತೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮದುವೆ ಕಾರ್ಯಕ್ರಮಗಳಿಗೂ ಕೂಡ ಹೋಗುವುದು ಕಡಿಮೆ ಆಗಿದೆ.
 

25

ಪತ್ನಿ ವಿಜಯಲಕ್ಷ್ಮೀ ಅವರು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಅಷ್ಟೇ ಅಲ್ಲದೆ ರೆಸ್ಟೋರೆಂಟ್‌ಗಳಿಗೂ ಹೋಗೋದುಂಟು. ಇನ್ನು ಪತಿ ದರ್ಶನ್‌ ಜೊತೆಗೆ ಶೂಟಿಂಗ್‌ ಜಾಗಕ್ಕೂ ಹೋಗುತ್ತಿದ್ದಾರೆ.
 

35

ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಜಯಲಕ್ಷ್ಮೀ ದರ್ಶನ್‌ ಅವರು ಪತಿಯ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವ ಎಂದು ಅವರು ವಿಶೇಷವಾಗಿ ಬರಹವನ್ನೇನೂ ಬರೆದುಕೊಂಡಿಲ್ಲ. ಧರ್ಮಸ್ಥಳದಲ್ಲಿ 2000 ಮೇ 19ರಂದು ಈ ಜೋಡಿ ಮದುವೆಯಾಗಿತ್ತು. ವಿಜಯಲಕ್ಷ್ಮೀ ಅವರು ಇಂಜಿನಿಯರ್‌ ಆಗಿದ್ದು, ಸ್ನೇಹಿತರ ಮೂಲಕ ಪರಿಚಯ ಆಗಿ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. 

45

ಅಂದು ಇಂಜಿನಿಯರ್‌ ಆಗಿದ್ದ ವಿಜಯಲಕ್ಷ್ಮೀ ಅವರಿಗೆ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಎನ್ನಲಾಗಿದೆ. ಆದರೆ ಪತಿ, ಕುಟುಂಬ ಎಂದು ಅವರು ಉದ್ಯೋಗಕ್ಕೆ ಗುಡ್‌ಬೈ ಹೇಳಿ ಹೌಸ್‌ವೈಫ್‌ ಆಗಿದ್ದರು. ಕೊರೊನಾ ಟೈಮ್‌ನಲ್ಲಿ ಅವರು ಹಣ್ಣು-ತರಕಾರಿಗಳನ್ನು ರೈತರಿಂದ ಖರೀದಿಸಿ ಜನರಿಗೆ ನೇರವಾಗಿ ತಲುಪಿಸಲು ಆನ್‌ಲೈನ್‌ ಮಾರ್ಕೇಟಿಂಗ್‌ ಉದ್ಯಮ ಶುರು ಮಾಡಿದ್ದರು. ದರ್ಶನ್‌ ತೂಗುದೀಪ ಅವರು ಕಳೆದ ವರ್ಷ ದುಬೈನಲ್ಲಿ ವೆಡ್ಡಿಂಗ್‌ ಆನಿವರ್ಸರಿ ಆಚರಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಉಂಗುರವನ್ನು ಪರಸ್ಪರ ಗಿಫ್ಟ್‌ ಆಗಿ ಕೊಟ್ಟಿದ್ದರು. 

55

ದರ್ಶನ್‌ ತೂಗುದೀಪ ಅವರು ಸದ್ಯ ʼಡೆವಿಲ್‌ʼ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇನ್ನು ವಿಜಯಲಕ್ಷ್ಮೀ ಅವರು ದರ್ಶನ್‌ ಜೈಲಿನಲ್ಲಿದ್ದಾಗ ಗಂಡನನ್ನು ಹೊರಗಡೆ ಕರೆದುಕೊಂಡು ಬರಲು ಸಿಕ್ಕಾಪಟ್ಟೆ ಒದ್ದಾಡಿದ್ದರು.  
 

Read more Photos on
click me!

Recommended Stories