Devil ಚಿತ್ರದಿಂದ ದರ್ಶನ್‌ ಅಕ್ಕನ ಮಗನನ್ನು ಉದ್ದೇಶಪೂರ್ವಕವಾಗಿ ಹೊರಕ್ಕೆ ಇಟ್ವಿ: ಆ ಸತ್ಯದ ಬಗ್ಗೆ ನಿರ್ದೇಶಕ ರಿವೀಲ್​

Published : Dec 02, 2025, 08:43 PM IST

ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್ ಜೈಲಿನಲ್ಲಿರುವಾಗಲೇ ಅವರ 'ಡೆವಿಲ್' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರದಿಂದ ದರ್ಶನ್ ಅಕ್ಕನ ಮಗ ಚಂದು ಅವರನ್ನು ಹೊರಗಿಟ್ಟಿರುವ ಕಾರಣವನ್ನು ನಿರ್ದೇಶಕ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಅವರು ಹೇಳಿದ್ದೇನು? 

PREV
16
ಡೆವಿಲ್‌ ಬಿಡುಗಡೆಗೆ ಸಜ್ಜು

ರೇಣುಕಾಸ್ವಾಮಿ ಕೇಸ್‌ನಲ್ಲಿ ಅತ್ತ ನಟ ದರ್ಶನ್ ಜೈಲಿನಲ್ಲಿ ಇರುವಾಗಲೇ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಬಿಡುಗಡೆಗೆ ನಿರ್ಧರಿಸಲಾಗಿದೆ. ಡಿಸೆಂಬರ್ 11ರಂದು ಚಿತ್ರ ಬಿಡುಗಡೆಯಾಗುವುದಾಗಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.

26
ಅಕ್ಕನ ಮಗ ಹೊರಕ್ಕೆ

ಇದೇ ಸಂದರ್ಭದಲ್ಲಿ ದರ್ಶನ್‌ ಅವರ ಅಕ್ಕನ ಮಗ ಚಂದು ಅವರನ್ನು ಈ ಸಿನಿಮಾದಿಂದ ಹೊರಕ್ಕೆ ಇಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಅಷ್ಟಕ್ಕೂ, ಚಂದು ಅವರು ಸಿನಿಮಾಕ್ಕೆ ಬರಲು ಎಲ್ಲಾ ತಯಾರಿ ನಡೆಸುತ್ತಿದ್ದರೂ ತಮ್ಮದೇ ಸಿನಿಮಾದಲ್ಲಿ ಅವರನ್ನು ದೂರ ಇಟ್ಟಿದ್ದೇಕೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿತ್ತು.

36
ದರ್ಶನ್‌ ಹಿಂದೆ ಹೇಳಿದ್ದೇನು?

ಇದಕ್ಕೆ ಕಾರಣ ಹಿಂದೊಮ್ಮೆ ಖುದ್ದು ದರ್ಶನ್ ಅವರೇ ಒಂದು ವಿಡಿಯೋ ಹಂಚಿಕೊಂಡು ಚಂದುನ ಸಿನಿಮಾದಿಂದ ದೂರ ಇಟ್ಟಿರುವುದು ತಿಳಿಸಿದ್ದರು. ಈ ಹಿಂದೆ ದರ್ಶನ್ ಅಭಿಮಾನಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದರು ಅದಕ್ಕೆ ಚಂದು ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ. ಜೀಪ್‌ನಿಂದ ಇಳಿಯುತ್ತಿದ್ದಂತೆ ದರ್ಶನ್ ಅಭಿಮಾನಿ ಹೋಗಿ ಚಂದು ಕಾಲಿಗೆ ನಮಸ್ಕಾರ ಮಾಡಿಕೊಳ್ಳುತ್ತಾರೆ. ವಿಡಿಯೋ ನೋಡಿ ಸಖತ್ ಬೇಸರ ಆಗಿದೆ ಎಂದು ದರ್ಶನ್ ಹಂಚಿಕೊಂಡಿದ್ದರು.

46
ಸ್ವಂತ ಸಾಧನೆ

ನನ್ನ ಮಗ ವಿನೀಶ್ ಅಥವಾ ಅಕ್ಕನ ಮಗ ಚಂದುಗೆ ಹತ್ತಿರವಾಗುವುದರಿಂದ ಅಥವಾ ಅತಿಯಾದ ಪ್ರೀತಿಕೊಡುವುದರಿಂದ ನನಗೆ ಹತ್ತಿರವಾಗುತ್ತೀರಿ ಅನ್ನೋದನ್ನು ತಲೆಯಿಂದ ತೆಗೆಯಬೇಕು ಎಂದಿದ್ದಾರೆ. ಅವರೇ ಸ್ವಂತ ಸಾಧನೆ ಮಾಡಿದಾಗ ಈ ಗೌರವ ಕೊಡಿ ಎಂದು ಹೇಳಿದ್ದರು.

56
ನಿರ್ದೇಶಕ ಸ್ಪಷ್ಟನೆ

ಆದರೆ ಇದೀಗ ಡೆವಿಲ್‌ ನಿರ್ದೇಶಕ ಪ್ರಕಾಶ್‌ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನ್ಯೂಸ್‌ಬೀಟ್‌ ಕನ್ನಡದಲ್ಲಿ ನೀಡಿರುವ ಸಂದರ್ಶನದಲ್ಲಿ ಅವರು ಸತ್ಯವನ್ನು ರಿವೀಲ್‌ ಮಾಡಿದ್ದಾರೆ.

66
ಉದ್ದೇಶಪೂರ್ವಕ

ಅವರನ್ನು ಉದ್ದೇಶಪೂರ್ವಕವಾಗಿಯೇ ದೂರ ಇಡಲಾಗಿದೆ. ಇದಕ್ಕೆ ಕಾರಣ, ಅವರು ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಹೊರಹೊಮ್ಮಲಿದ್ದಾರೆ. ಇದಾಗಲೇ ಲಾಂಚ್‌ ಕೂಡ ಮಾಡಲಾಗಿದೆ. ಆದರೆ ಡೆವಿಲ್‌ ಚಿತ್ರದಲ್ಲಿ, ಚಿಕ್ಕ ಪಾತ್ರವಿತ್ತು. ಅದಕ್ಕಾಗಿಯೇ ಈ ಪಾತ್ರ ಬೇಡ ಎನ್ನುವ ಕಾರಣಕ್ಕೆ ಅವರನ್ನು ತೆಗೆದುಕೊಳ್ಳಲಾಗಿಲ್ಲ ಅಷ್ಟೆ. ಅವರ ನಾಯಕತ್ವದ ಸಿನಿಮಾ ಬರಲಿದೆ ಎಂದಿದ್ದಾರೆ.

Read more Photos on
click me!

Recommended Stories