777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ನವಂಬರ್ 30 ರಂದು ಕಾಸರಗೋಡಿನಲ್ಲಿ ಅನಯಾ ವಸುಧಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಜೋಡಿಗೆ ಕನ್ನಡ ನಟ ರಕ್ಷಿತ್ ಶೆಟ್ಟಿ (Rakshith Shetty) ಬಂದು ಶುಭ ಹಾರೈಸಿದ್ದಾರೆ. ಹಲವು ದಿನಗಳಿಂದ ಕಾಣಿಸಿಕೊಂಡಿಲ್ಲದ ನಟನನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.
777 ಚಾರ್ಲಿ ಸಿನಿಮಾ ಮೂಲಕ ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡಿದ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ನಿರ್ದೇಶಕ ಕಿರಣ್ ರಾಜ್, ಇದೀಗ ವಿದೇಶದಲ್ಲಿ ವಾಸಿಸುತ್ತಿರುವ ಡ್ಯಾನ್ಸರ್ ಅನಯಾ ವಸುಧಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
26
ದೇವಸ್ಥಾನದಲ್ಲಿ ಮದುವೆ
ಕಾಸರಗೋಡಿನ ನಾರಂಪಾಡಿ ದೇವಾಲಯದಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ ಕಿರಣ್ ರಾಜ್. ಕಿರಣ್ ಮತ್ತು ಅನಯ ವಸುಧ ಪ್ರೀತಿಸಿ ಮದುವೆಯಾಗಿದ್ದು. ಕಿರಣ್ ರಾಜ್ ಯುಕೆಗೆ ಆನಿಮೇಶನ್ ಕೋರ್ಸ್ ಮಾಡಲು ಹೋಗಿದ್ದಾಗ, ಪರಿಚಯವಾಗಿ, ಪ್ರೀತಿ ಬೆಳೆದಿತ್ತು. ಅನಯಾ ಕೂಡ ಮೂಲತಃ ಕಾಸರಗೋಡು ಮೂಲದವರು. ಇದೀಗ ಹೊಸ ಜೀವನಕ್ಕೆ ನಾಂದಿ ಹಾಡಿದ್ದಾರೆ.
36
ರಕ್ಷಿತ್ ಶೆಟ್ಟಿ ಭಾಗಿ
ಚಾರ್ಲಿ ನಿರ್ದೇಶಕರ ಮದುವೆಗೆ ಚಾರ್ಲಿ ಸಿನಿಮಾ ಮೂಲಕ ಎಲ್ಲರನ್ನೂ ಅಳಿಸಿದ್ದ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಆಗಮಿಸಿ, ಶುಭ ಕೋರಿದ್ದಾರೆ. ಇಲ್ಲಿವರೆಗೂ ಎಲ್ಲಿಯೂ ಕಾಣಿಸಿಕೊಂಡಿರದ ರಕ್ಷಿತ್ ಶೆಟ್ಟಿಯವರನ್ನು ನೋಡಿ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಅಂತೂ ಇಂತೂ ಶೆಟ್ರ ದರ್ಶನ ಭಾಗ್ಯ ಸಿಕ್ಕಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
ಕಳೆದ ಹಲವು ದಿನಗಳಿಂದ ಕಿರಣ್ ರಾಜ್ ಅವರ ಹಳದಿ ಶಾಸ್ತ್ರಗಳು, ಸಂಗೀತ್ ಹಾಗೂ ಇನ್ನಿತರ ಮದುವೆಯ ಮುಂಚಿನ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದ್ದವು. ಅರಶಿನ ಶಾಸ್ತ್ರದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಮದುವೆ ಅದ್ಧೂರಿಯಾಗಿ ನಡೆದಿದೆ.
56
ಅದ್ದೂರಿಯಾಗಿ ನಡೆದ ಪ್ರಿ ವೆಡ್ಡಿಂಗ್
ಕಳೆದ ತಿಂಗಳು ಈ ಜೋಡಿಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿವೆ. ಕಿರಣ್ ರಾಜ್ ಪ್ರೀ ವೆಡ್ಡಿಂಗ್ ಫೋಟೊ ಶೂಟ್, ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೊಸ ಜೋಡಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
66
ಅನಯಾ ಬಗ್ಗೆ ಕಿರಣ್ ರಾಜ್ ಹೇಳಿದ್ದೇನು?
ಅನಯಾ ಜೊತೆ ಪ್ರೀತಿ ಹೇಗೆ ಶುರುವಾಯಿತು ಎನ್ನುವ ಪ್ರಶ್ನೆಗೆ ಈ ಹಿಂದೆ ಉತ್ತರಿಸಿದ್ದ ನಿರ್ದೇಶಕ ಕಿರಣ್ ರಾಜ್, ಅನಯಾ ವಸುಧಾ ಮತ್ತು ನನಗೆ ಜೀವನದ ಬಗ್ಗೆ ಇರೋ ದೃಷ್ಟಿಕೋನ ಒಂದೇ ಆಗಿದ್ದು,. ಇಬ್ಬರ ಊರು ಒಂದೇ ಆಗಿದೆ. ಹಾಗಾಗಿಯೇ ನಮ್ಮ ನಡುವೆ ಒಂದು ವಿಶೇಷ ಬಾಂಡಿಂಗ್ ಬೆಳೆಯಿತು ಎಂದು ಹೇಳಿದ್ದರು.