ನಟಿ ಶುಭಾ ಪೂಂಜಾ-ಸುಮಂತ್ ಬಿಲ್ಲವ ವಿಚ್ಛೇದನ ಸುದ್ದಿ ಬೆನ್ನಲ್ಲೇ ಹಳೆ ವಿಡಿಯೋ ವೈರಲ್

Published : Jun 04, 2026, 11:23 AM IST

ನಟಿ ಶುಭಾ ಪೂಂಜಾ ಮತ್ತು ಪತಿ ಸುಮಂತ್ ಬಿಲ್ಲವ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸುದ್ದಿಯ ಬೆನ್ನಲ್ಲೇ, ಶುಭಾ ತಮ್ಮ ಪತಿ, ಮದುವೆ ಮತ್ತು ರೊಮ್ಯಾಂಟಿಕ್ ಜೀವನದ ಬಗ್ಗೆ ಮಾತನಾಡಿದ್ದ ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
15
ಶುಭಾ ಪೂಂಜಾ ಹಳೆ ಸಂದರ್ಶನ

ಚಂಡ, ಮೊಗ್ಗಿನ ಮನಸ್ಸು ಸಿನಿಮಾ ಖ್ಯಾತಿಯ ಶುಭಾ ಪೂಂಜಾ ಸಾಂಸರಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಗಂಡ-ಹೆಂಡತಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಡಿವೋರ್ಸ್ ಸುದ್ದಿ ಬೆನ್ನಲ್ಲೇ ಶುಭಾ ಪೂಂಜಾ ಅವರು ಹಳೆ ಸಂದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮುನ್ನಲೆಗೆ ಬರುತ್ತಿವೆ.

25
ಗಂಡನ ಮೇಲೆ ಹುಸಿಕೋಪ

ಪಾಡ್‌ಕಾಸ್ಟ್‌ವೊಂದರಲ್ಲಿ ಶುಭಾ ಪೂಂಜಾ ತಮ್ಮ ವೈಯಕ್ತಿಯ ಬದುಕಿನ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಪತಿ ಸುಮಂತ್ ಬಿಲ್ಲವ ಉದ್ಯಮಿಯಾಗಿದ್ದು, ಸಾಕಷ್ಟು ಬ್ಯುಸಿಯಾಗಿರುವ ವ್ಯಕ್ತಿ. ಪತಿ ಹೊಸ ಬ್ಯುಸಿನೆಸ್ ಶುರು ಮಾಡಿದ್ದು, ಅವರ ಡೇಟ್ಸ್‌ಗೆ ನಾನೇ ಕಾಯಬೇಕು ಎಂದು ತಮಾಷೆಯಾಗಿ ಹೇಳಿದ್ದರು. ಈ ವಿಷಯಕ್ಕಾಗಿಯೇ ನಾನು ಅವರ ಮೇಲೆ ಹುಸಿಕೋಪ ಮಾಡಿಕೊಳ್ಳುತ್ತೇನೆ. ಗಂಡ ಸಿಕ್ರೆ ತಾನೇ ಮಕ್ಕಳನ್ನು ಮಾಡಿಕೊಳ್ಳೋದು ಎಂದಿದ್ದರು.

35
ತಮಾಷೆ ಮಾತು

ಪತಿಗೆ ಹೋಲಿಸಿದ್ರೆ ನಾನೇ ತುಂಬಾ ರೊಮ್ಯಾಂಟಿಕ್. ನಾನೇ ಅವರೇ ಕಾಟ ಕೊಡುತ್ತಿರುತ್ತೇನೆ. ಮತ್ತೊಮ್ಮೆ ಏನಾದ್ರೂ ಬಿಗ್‌ಬಾಸ್ ಆಫರ್ ಬಂದ್ರೆ ಅವರೇ ಹಣ ಕೊಟ್ಟು ನನ್ನನ್ನು ಕಳುಹಿಸುತ್ತಾರೆ. ಫಿನಾಲೆವರೆಗೂ ನನ್ನನ್ನು ಬಿಗ್‌ಬಾಸ್ ಮನೆಯಲ್ಲಿರುವಂತೆ ಮಾಡಲು ಮುಂದಾಗುತ್ತಾರೆ ಎಂದು ತಮ್ಮಿಬ್ಬರ ನಡುವಿನ ತಮಾಷೆಯ ಮಾತುಗಳನ್ನು ಅಭಿಮಾನಿಗಳೊಂದಿಗೆ ಶುಭಾ ಪೂಂಜಾ ಹೇಳಿಕೊಂಡಿದ್ದರು.

45
ನಾಲ್ಕು ಮದುವೆ ಫೋಟೋ

ಶುಭಾ ಮತ್ತು ಸುಮಂತ್ ಮದುವೆ ಎರಡು ದಿನದಲ್ಲಿಯೇ ನಿಗದಿಯಾಗಿತ್ತು. ಹಾಗಾಗಿ ಹೆಚ್ಚು ಜನರಿಗೆ ಆಹ್ವಾನ ನೀಡಲು ಆಗಲಿಲ್ಲ. ಮದುವೆ ಹಿಂದಿನ ದಿನ ರಾತ್ರಿ 8 ಗಂಟೆಗೆ ಹೂ ತರಲು ಮಾರ್ಕೆಟ್‌ಗೆ ಹೋಗಿದ್ದರಿಂದ ಫ್ರೆಶ್ ಹೂ ಸಿಕ್ಕಿರಲಿಲ್ಲ. ಮದುವೆಯಲ್ಲಿ ಹಾಕೊಂಡಿದ್ದ ಹೂವಿನ ಹಾರ ಬಾಡಿತ್ತು ಎಂದು ಹೇಳಿದ್ದರು.

55
ಪ್ರವಾಸದ ಫೋಟೋ

ಮದುವೆಯಲ್ಲಿ ನಾವು ಕ್ಲಿಕ್ಕಿಸಿಕೊಂಡಿದ್ದು ನಾಲ್ಕು ಫೋಟೋ. ಆ ಫೋಟೋಗಳನ್ನೇ ಶೇರ್ ಮಾಡಿಕೊಂಡಿದ್ದೀವಿ. ಮಾಧ್ಯಮದವರು ಬೇರೆ ಫೋಟೋ ಕಳುಹಿಸುವಂತೆ ಮೆಸೇಜ್ ಮಾಡಿದ್ರು. ನಮ್ಮಲ್ಲಿ ಇದ್ರೆ ತಾನೇ ಬೇರೆ ಫೋಟೋ ಕಳುಹಿಸೋದು ಎಂದು ಹೇಳಿ ಶುಭಾ ಪೂಂಜಾ ಸಂದರ್ಶನದಲ್ಲಿ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶುಭಾ, ಪತಿ ಜೊತೆಗಿನ ಪ್ರವಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories