ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಶುಭಾ ಪೂಂಜಾ-ಸಮಂತ್

Published : Jun 04, 2026, 09:57 AM IST

ವರದಿ: ರಮೇಶ್, ಬೆಂಗಳೂರು ಬ್ಯೂರೋ ಹೆಡ್ನಟಿ ಶುಭಾ ಪೂಂಜಾ ಮತ್ತು ಉದ್ಯಮಿ ಸುಮಂತ್ ಬಿಲ್ಲವ ಅವರು ಮದುವೆಯಾದ ನಾಲ್ಕು ವರ್ಷಗಳ ನಂತರ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಈ ದಂಪತಿ ವಿಚ್ಛೇದನ ಕೋರಿದ್ದಾರೆ.

PREV
15
ಶುಭಾ ಪೂಂಜಾ ಡಿವೋರ್ಸ್

ಚಂದನವನದ ಮೊಗ್ಗಿನ ಮನಸ್ಸಿನ ನಟಿ ಶುಭಾ ಪೂಂಜಾ ವೈಯಕ್ತಿಕ ಜೀವನದ ಕುರಿತ ಮಾಹಿತಿಯನ್ನು ವರದಿಗಾರ ರಮೇಶ್ ನೀಡಿದ್ದಾರೆ. ಮದುವೆಯಾದ ನಾಲ್ಕನೇ ವರ್ಷಕ್ಕೆ ವಿಚ್ಚೇದನಕ್ಕಾಗಿ ನಟಿ ಶುಭಾ ಪೂಂಜಾ ಕೋರ್ಟ್ ಮೆಟ್ಟಿಲೇರಿರುವ ಎಕ್ಸ್‌ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

25
ಕೌಟುಂಬಿಕ ನ್ಯಾಯಾಲಯದ ಮೊರೆ

ವಿಚ್ಚೇದನ ಕೋರಿ ನಟಿ ಶುಭಾ ಪುಂಜಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಸುಮಂತ್​ ಬಿಲ್ಲವ ಎಂಬವರನ್ನ ಶುಭಾ ಪೂಂಜಾ ಮದುವೆಯಾಗಿದ್ದರು.

35
ಶುಭಾ ಪುಂಜಾ ಮತ್ತು ಸುಮಂತ್​ ಬಿಲ್ಲವ

2022 ಜನವರಿಯಲ್ಲಿ ಶುಭಾ ಪುಂಜಾ ಮತ್ತು ಸುಮಂತ್​ ಬಿಲ್ಲವ ಮದುವೆ ಇಬ್ಬರ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಮದುವೆ ಬಳಿಕ ಪತಿ ಸಮಂತ್ ಜೊತೆ ಶುಭಾ ಪೂಂಜಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

45
ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ

ಈ ಕುರಿತು ಪ್ರತಿಕ್ರಿಯೆ ನೀಡಲು ಶುಭಾ ಪೂಂಜಾ ನಿರಾಕರಿಸಿದ್ದು, ವಿಚ್ಚೇಧನಕ್ಕೆ ಕಾರಣ ಬಹಿರಂಗ ಪಡಿಸಲು ಸಮಂತ್ ಸಹ ಹಿಂದೇಟು ಹಾಕಿದ್ದಾರೆ. ಅರ್ಜಿ ಸಲ್ಲಿಕೆಯಾಗಿರೋದರಿಂದ ಇಬ್ಬರು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಗಳಿವೆ.

55
ಬಿಗ್ ಬಾಸ್ ಕನ್ನಡ ಸೀಸನ್ 8ರ

ಕನ್ನಡ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಶುಭಾ ಪೂಂಜಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಜಾಕ್‌ಪಾಟ್, ಚಂಡ, ಸ್ಲಮ್ ಬಾಲಾ, ಅಂಜದಿರುಲ, ಥಾಕತ್, ನಾರಿ ಅಡ್ಡಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶುಭಾ ನಟಿಸಿದ್ದಾರೆ. ಹಾಗೆಯೇ ಸೀರಿಯಲ್‌ಗಳಲ್ಲಿಯೂ ಅತಿಥಿ ಪಾತ್ರದಲ್ಲಿಯೂ ಶುಭಾ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories