ನೇರಪ್ರಸಾರದಲ್ಲಿ ಬಂದು ನಟ ದರ್ಶನ್​ ಹೇಳಿದ್ದೇನು? ಅಭಿಮಾನಿಗಳ ಕಣ್ಣೀರು- ವಿಡಿಯೋ ಪುನಃ ವೈರಲ್

Published : Jun 03, 2026, 09:41 PM IST

ನಟ ದರ್ಶನ್ ಎರಡು ವರ್ಷಗಳಿಂದ ಜೈಲಿನಲ್ಲಿದ್ದು, ಅವರ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ, ದರ್ಶನ್ ಅವರು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

PREV
16
ಅಭಿಮಾನಿಗಳು ಕಾತರ

ನಟ ದರ್ಶನ್​ ಅವರು ಜೈಲಿನಿಂದ ಯಾವಾಗ ಬಿಡುಗಡೆಯಾಗುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಒಂದು ವರ್ಷ ಅವರಿಗೆ ಜಾಮೀನು ಸಿಗುವುದಿಲ್ಲ ಎನ್ನುವುದು ಸುಪ್ರೀಂಕೋರ್ಟ್​ ತೀರ್ಪಿನಿಂದ ಸ್ಪಷ್ಟವಾಗಿದೆ. ಆದರೆ ಅವರ ಕೇಸ್​ ವೇಗ ಪಡೆದುಕೊಂಡು ಶೀಘ್ರದಲ್ಲಿ ಮುಕ್ತಾಯ ಮಾಡುವಂತೆ ಕೋರ್ಟ್​ ಹೇಳಿದೆ.

26
ದರ್ಶನ್​ ಪರ-ವಿರುದ್ಧ ಚರ್ಚೆ

ಇದಾಗಲೇ ಎರಡು ವರ್ಷಗಳಿಂದ ನಟ ದರ್ಶನ್​ ಜೈಲಿನಲ್ಲಿ ಇದ್ದಾರೆ. ಅವರ ಅಂತಿಮ ತೀರ್ಪು ಏನು ಬರುವುದೋ ಎನ್ನುವ ಆತಂಕದಲ್ಲಿ ಅಭಿಮಾನಿಗಳು ಇದ್ದಾರೆ. ರೇಣುಕಾಸ್ವಾಮಿ ಕೇಸ್​ನಲ್ಲಿ ಅವರು ಮಾಡಿದ್ದು ಮಹಾಪಾಪ ಏನೂ ಅಲ್ಲ, ಆತ ಮಾಡಿದ್ದಕ್ಕೆ ಅನುಭವಿಸಿದ್ದಾನೆ ಅಷ್ಟೇ ಎಂದು ಕೆಲವರು ಹೇಳುತ್ತಿದ್ದರೆ, ದರ್ಶನ್​ ವಿರುದ್ಧ ಮತ್ತಷ್ಟು ಜನ ಮಾತನಾಡುತ್ತಿದ್ದಾರೆ.

36
ಅಭಿಮಾನಿಗಳ ಹರಕೆ

ಒಟ್ಟಿನಲ್ಲಿ ದರ್ಶನ್​ ಅವರ ಬಗೆಗಿನ ಮಾತು ಸದಾ ಹಚ್ಚ ಹಸುರಾಗಿಯೇ ಇದೆ. ತಮ್ಮ ನೆಚ್ಚಿನ ನಟನನ್ನು ನೋಡಲು ಹಲವರು ಕಾತರರಾಗಿದ್ದಾರೆ. ಹಲವರು ದೇವರಲ್ಲಿ ಹರಕೆಯನ್ನೂ ಸಲ್ಲಿಸುತ್ತಿದ್ದಾರೆ.

46
ದರ್ಶನ್ ವಿಡಿಯೋ ವೈರಲ್​

ಇದರ ನಡುವೆಯೇ, ದರ್ಶನ್​ ಅವರ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ದರ್ಶನ್​ ಅವರು, ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ ಎಂದಿದ್ದಾರೆ.

56
ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು

ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ ಎಂದಿದ್ದಾರೆ. ಅಷ್ಟಕ್ಕೂ ಇದು ಕಳೆದ ವರ್ಷದ ವಿಡಿಯೋ ಇದೀಗ ಮತ್ತೆ ವೈರಲ್​ ಆಗುತ್ತಿದೆ.

66
ಹಳೆಯ ವಿಡಿಯೋ

ಅಷ್ಟಕ್ಕೂ ಇದು ಕಳೆದ ವರ್ಷದ ವಿಡಿಯೋ ಇದೀಗ ಮತ್ತೆ ವೈರಲ್​ ಆಗುತ್ತಿದೆ. ಕಳೆದ ಬಾರಿ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳು ತೋರಿಸಿರುವ ಪ್ರೀತಿಗೆ ಸೋಷಿಯಲ್​ ಮೀಡಿಯಾದಲ್ಲಿಯೂ ಇದೇ ರೀತಿ ಬರೆದುಕೊಂಡಿದ್ದರು ದರ್ಶನ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories