ಅಮ್ಮನ ಸಾವಿನ ವೇಳೆಯೇ ಶುಭಾ ಪೂಂಜಾ ಸಿಕ್ಕಿತ್ತು ಡಿವೋರ್ಸ್ ಸುಳಿವು; 'ನಿಜವಾಯ್ತು ಸಂಸಾರ ಮುರಿದು ಬೀಳುವ ಆ ಮಾತು'!

Published : Jun 04, 2026, 12:27 PM IST

ನಟಿ ಶುಭಾ ಪೂಂಜಾ (Actress Shubha Punja) ಮತ್ತು ಸುಮಂತ್ ಬಿಲ್ಲವ (Sumanth Billava) ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮುನ್ಸೂಚನೆ ಶುಭಾ ಅವರ ತಾಯಿಯ ಸಾವಿನ ಸಂದರ್ಭದಲ್ಲಿ ಬರೆದ ಪೋಸ್ಟ್‌ನಲ್ಲೇ ಸಿಕ್ಕಿತ್ತು. ಏನದು ಸುಳಿವು ಇಲ್ಲಿ ನೋಡಿ.

PREV
16

ಸ್ಯಾಂಡಲ್‌ವುಡ್‌ನ ಮುಗ್ಧ ಮನಸ್ಸಿನ ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ನಡುವಿನ ವೈವಾಹಿಕ ಸಂಬಂಧ ಅಧಿಕೃತವಾಗಿ ಅಂತ್ಯವಾಗುತ್ತಿದೆ. ಮದುವೆಯಾಗಿ ನಾಲ್ಕು ವರ್ಷಗಳು ಕಳೆಯುವಷ್ಟರಲ್ಲಿ ಈ ಜೋಡಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ. ಆದರೆ, ಈ ಡಿವೋರ್ಸ್ ಸುದ್ದಿ ಈಗ ಹಠಾತ್ತನೆ ಹೊರಬಿದ್ದಿದ್ದರೂ, ಇದರ ಮುನ್ಸೂಚನೆ ಮಾತ್ರ ಶುಭಾ ಅವರ ಅಮ್ಮನ ಸಾವಿನ ಸಂದರ್ಭದಲ್ಲೇ ಜಗತ್ತಿಗೆ ಸಿಕ್ಕಿತ್ತು.

26

'ನೀನು ಇಲ್ಲದೇ ನನಗೆ ಜೀವನವಿಲ್ಲ?'

ಕಳೆದ ವರ್ಷ ಮಾರ್ಚ್ 6ರಂದು ಶುಭಾ ಪೂಂಜಾ ಅವರ ತಾಯಿ ನಿಧನರಾದಾಗ, ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು. ಆದರೆ, ಆ ಪೋಸ್ಟ್‌ನಲ್ಲಿ ಅಡಗಿದ್ದ ನೋವು ಕೇವಲ ತಾಯಿಯ ಅಗಲಿಕೆಯದ್ದಷ್ಟೇ ಆಗಿರಲಿಲ್ಲ, ಬದಲಾಗಿ ಅತಂತ್ರವಾಗಿದ್ದ ದಾಂಪತ್ಯದ್ದೂ ಆಗಿತ್ತು ಎಂಬ ಸಂಶಯ ಈಗ ನಿಜವಾಗುತ್ತಿದೆ.

36

ಅಂದು ಶುಭಾ ಬರೆಯುತ್ತಾ, 'ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ? ನೀನು ಇಲ್ಲದೇ ನನಗೆ ಜೀವನವಿಲ್ಲ. 24 ಗಂಟೆ ನಿನ್ನ ಜೊತೆಯಲ್ಲೇ ಇರುತ್ತಿದ್ದೆ. ಈಗ ನಾನು ಏನು ಮಾಡಲಿ? ಎಲ್ಲಿಗೆ ಹೋಗಲಿ? ಯಾರಿಗೋಸ್ಕರ ವಾಪಾಸ್‌ ನಾನು ಮನೆಗೆ ಬರಲಿ?' ಎಂದು ಗೋಳಾಡಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮದುವೆಯಾಗಿ ಮನೆಯಲ್ಲಿ ಗಂಡನಿದ್ದರೂ, ಶುಭಾ 'ಯಾರಿಗೋಸ್ಕರ ಜೀವನ ಮಾಡಲಿ?' ಎಂದು ಪ್ರಶ್ನಿಸಿದ್ದರು.

ಒಬ್ಬ ಪತ್ನಿಗೆ ಪತಿಯೇ ಆಸರೆಯಾಗಬೇಕಿದ್ದ ಸಮಯದಲ್ಲಿ, ಶುಭಾ ಅವರಿಗೆ ತನ್ನ ಜೀವನದಲ್ಲಿ ಅಮ್ಮ ಬಿಟ್ಟರೆ ಮತ್ಯಾರೂ ಇಲ್ಲ ಎಂಬ ಶೂನ್ಯ ಭಾವನೆ ಕಾಡಿತ್ತು. ಈ ಒಂದು ವಾಕ್ಯವೇ ಅವರ ಸಂಸಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳಿತ್ತು.

46

ಗಂಡನಿದ್ದರೂ ಸಿಗದ ಧೈರ್ಯದ ಮಾತು:

ಸಾಮಾನ್ಯವಾಗಿ ಅಂತಹ ಸಂಕಷ್ಟದ ಸಮಯದಲ್ಲಿ ಪತಿ ದೊಡ್ಡ ಬೆಂಬಲವಾಗಿ ನಿಲ್ಲುತ್ತಾರೆ. ಆದರೆ ಶುಭಾ ಅವರ ಸುದೀರ್ಘ ಭಾವುಕ ಪೋಸ್ಟ್‌ನಲ್ಲಿ ಪತಿ ಸುಮಂತ್ ಬಗ್ಗೆ ಅಥವಾ ಅವರಿಂದ ತಮಗೆ ಸಿಗುತ್ತಿರುವ ಸಾಂತ್ವನದ ಬಗ್ಗೆ ಒಂದು ಸಣ್ಣ ಉಲ್ಲೇಖವೂ ಇರಲಿಲ್ಲ. 'ನನ್ನ ಇಡೀ ಜೀವನವೇ ನೀನಾಗಿದ್ದೆ' ಎಂದು ತಾಯಿಯನ್ನು ಉದ್ದೇಶಿಸಿ ಹೇಳುವಾಗ, ಪತಿ ಸುಮಂತ್ ಆ ಜೀವನದ ಭಾಗವಾಗಿರಲಿಲ್ಲ ಎಂಬ ಸುಳಿವು ಅಂದೇ ಅವರ ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ಸಿಕ್ಕಿತ್ತು. ಪತಿ ಸುಮಂತ್ ತನ್ನದೇ ಬ್ಯುಸಿನೆಸ್ ಲೋಕದಲ್ಲಿ ಮುಳುಗಿದ್ದರೆ, ಶುಭಾ ಮಾನಸಿಕವಾಗಿ ಒಂಟಿಯಾಗಿದ್ದರು.

56

ಪ್ರೆಗ್ನೆನ್ಸಿ ವಿಚಾರ ಮತ್ತು ದೂರಾದ ಸಂಬಂಧ:

ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗದಿರುವುದು ಕೂಡ ಇವರ ನಡುವಿನ ಅಂತರಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಈ ಹಿಂದೆ ಕೇಳಲಾದ ಪ್ರಶ್ನೆಗೆ ಶುಭಾ, 'ರಸ್ತೆಯಲ್ಲಿರುವ ಪ್ರಾಣಿಗಳೇ ನನಗೆ ಮಕ್ಕಳು. ಸ್ವಂತ ಮಕ್ಕಳಾದರೂ ನಾನು ಇವುಗಳಷ್ಟೇ ಪ್ರೀತಿಸುತ್ತೇನೆ' ಎಂದು ಉತ್ತರಿಸಿದ್ದರು. ಮಕ್ಕಳ ವಿಚಾರದಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯವಿತ್ತೇ ಅಥವಾ ಹೊಂದಾಣಿಕೆಯ ಕೊರತೆಯಿತ್ತೇ ಎಂಬುದು ಸದ್ಯದ ಚರ್ಚೆಯ ವಿಷಯ.

66

ಸ್ಟ್ರಾಂಗ್ ಕಂಬ್ಯಾಕ್‌ನತ್ತ ಶುಭಾ:

ತಾಯಿಯ ಸಾವಿನ ನಂತರ ಸುಮಾರು 4 ತಿಂಗಳು ತೀವ್ರ ಖಿನ್ನತೆಯಲ್ಲಿದ್ದ ಶುಭಾ, ಈಗ ಆ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ತಮ್ಮ ದೇಹದ ತೂಕ ಇಳಿಸಿಕೊಂಡು ಫಿಟ್ನೆಸ್ ಕಡೆಗೆ ಗಮನ ಹರಿಸಿರುವ ಅವರು, 'ಬಾಯ್ಸ್ ವರ್ಸಸ್ ಗರ್ಲ್ಸ್' ನಂತಹ ರಿಯಾಲಿಟಿ ಶೋಗಳ ಮೂಲಕ ಮತ್ತೆ ಸಕ್ರಿಯರಾಗಿದ್ದರು. 'ನಾನು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಲೇಬೇಕು' ಎನ್ನುವ ಅವರ ನಿರ್ಧಾರದ ಹಿಂದೆ, ವಿಚ್ಛೇದನದ ನಂತರದ ಒಂಟಿ ಜೀವನವನ್ನು ಎದುರಿಸುವ ಛಲ ಎದ್ದು ಕಾಣುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories