Radhika Pandit: ಚಂದನವನದ ಎವರ್ ಗ್ರೀನ್ ಬ್ಯೂಟಿ ರಾಧಿಕಾ ಪಂಡಿತ್, ಈ ಬಾರಿ ಸಮ್ಮರ್ ವೆಕೇಶನ್ ಗೆ ತಮ್ಮ ಮಕ್ಕಳ ಜೊತೆ ಕೂರ್ಗ್ ಗೆ ತೆರಳಿದ್ದು, ಅಲ್ಲಿ ಪ್ರಕೃತಿ ಸೌಂದರ್ಯ, ಸರೋವರ, ಬೆಟ್ಟಗುಡ್ಡಗಳ ನಡುವಿನ ಸುಂದರ ತಾಣದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಫೋಟೊಗಳು ವೈರಲ್ ಆಗುತ್ತಿವೆ.
ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿದ್ದು ಆಗಿದೆ. ಈಗಂತೂ ಮಕ್ಕಳ ಜೊತೆ ಸಮಯ ಕಳೆಯುತ್ತಾ ಅಮ್ಮನಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ ನಟಿ. ಸದ್ಯ ಮಕ್ಕಳ ಜೊತೆಗೆ ಅಮ್ಮ ರಾಧಿಕಾ ವೆಕೇಶನ್ ಮೂಡ್ ನಲ್ಲಿದ್ದಾರೆ.
26
ಮಕ್ಕಳ ಜೊತೆ ರಾಧಿಕಾ
ರಾಧಿಕಾ ಪಂಡಿತ್ ತಮ್ಮ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಜೊತೆ ಕೂರ್ಗ್, ಮಡಿಕೇರಿಗೆ ತೆರಳಿದ್ದು, ಮಕ್ಕಳ ಜೊತೆ ರೆಸಾರ್ಟ್ ಒಂದರಲ್ಲಿ ಪ್ರಕೃತಿಯ ಮಧ್ಯೆ ಸಮಯ ಕಳೆಯುತ್ತಾ, ಮಕ್ಕಳನ್ನು ಪ್ರಕೃತಿಗೆ ಪರಿಚಯಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ.
36
ಸಮ್ಮರ್ ವೆಕೇಶನ್ ಮೂಡ್
ಯಶ್ ರಾಧಿಕಾ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಗೆ ಈಗ ಸಮ್ಮರ್ ವೆಕೇಶನ್. ಅಪ್ಪ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋದರಿಂದ, ಅಮ್ಮ ರಾಧಿಕಾ ಸದಾ ಮಕ್ಕಳ ಜೊತೆ ವೆಕೇಶನ್ ಹೋಗುವುದನ್ನು ಮಿಸ್ ಮಾಡುವುದಿಲ್ಲ. ಕಳೆದ ವರ್ಷ ಬೀಚ್ ನಲ್ಲಿ ಸಮ್ಮರ್ ವೆಕೇಶನ್ ಎಂಜಾಯ್ ಮಾಡಿದ್ದ ರಾಧಿಕಾ, ಈ ಬಾರಿ ಮಕ್ಕಳ ಜೊತೆ ಕೂರ್ಗ್ ತೆರಳಿದ್ದಾರೆ.
Coorg, You beauty ಎಂದು ಕ್ಯಾಪ್ಶನ್ ಕೊಟ್ಟಿರುವ ರಾಧಿಕಾ ಪಂಡಿತ್, ಸುಂದರವಾದ ಲೇಕ್, ಹಿನ್ನೆಲೆಯಲ್ಲಿ ಹಸಿರು ತುಂಬಿದ ಬೆಟ್ಟಗುಡ್ಡಗಳು, ಕಾಫಿ ತೋಟ. ಮಕ್ಕಳ ಕೈ ಕೈ ಹಿಡಿದು ಪ್ರಕೃತಿಯ ನಡುವೆ ವಾಕ್ ಮಾಡುತ್ತಿರುವ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.
56
ಶಾರ್ಟ್ ನಲ್ಲಿ ಕ್ಯೂಟ್ ಮಮ್ಮಿ
ರಾಧಿಕಾ ಪಂಡಿತ್ ಸಮ್ಮರ್ ವೆಕೇಶನ್ ನಲ್ಲಿ ಮುದ್ದಾದ ಶಾರ್ಟ್ಸ್ ಮತ್ತು ಶರ್ಟ್, ಟೀ ಶರ್ಟ್ ಧರಿಸಿದ್ದು, 42ನೇ ವಯಸ್ಸಿನಲ್ಲಿಯೂ ನಟಿ ತುಂಬಾನೆ ಮುದ್ದಾಗಿ, ಇನ್ನೂ ಹರೆಯದ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಇವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
66
ರಾಕಿಂಗ್ ಕ್ವೀನ್ ಎಂದ ಫ್ಯಾನ್ಸ್
ರಾಧಿಕಾ ಪಂಡಿತ್ ಶೇರ್ ಮಾಡಿರುವ ಫೋಟೊಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದ್ದು, ರಾಕಿಂಗ್ ಕ್ವೀನ್, ಸುಂದರಿ, ನಿಮ್ಮ ಸಿಂಪ್ಲಿಸಿಟಿಯೇ ನಿಮ್ಮ ನಿಜವಾದ ಸೌಂದರ್ಯ, ಯಾರೋ ಇಷ್ಟು ಸುಂದರವಾಗಿರಲು ಹೇಗೆ ಸಾಧ್ಯ? ಇವರು ನವಯಸ್ಸು ನಿಜವಾಗಿಯೂ ಹಿಂದಕ್ಕೆ ಸಾಗುತ್ತಿದೆ, ಎಫರ್ಟ್ ಲೆಸ್ ಬ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.