Dr Raj Bday: 3 ಇಡ್ಲಿ ಕೊಡ್ತಾರೆಂದು ಚಿತ್ರ ಒಪ್ಪಿಕೊಂಡಿದ್ದ ಡಾ.ರಾಜ್​: ಅ ಘಟನೆ ನೆನೆದ ನಟ ರಾಘವೇಂದ್ರ

Published : Apr 24, 2026, 06:53 PM IST

ವರನಟ ಡಾ.ರಾಜ್‌ಕುಮಾರ್ ಅವರ 97ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮಗ ರಾಘವೇಂದ್ರ ರಾಜ್‌ಕುಮಾರ್ ಒಂದು ನೋವಿನ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರು ತಮ್ಮ ಕಡುಬಡತನದ ದಿನಗಳಲ್ಲಿ ಕೇವಲ ಒಂದು ಹೆಚ್ಚುವರಿ ಇಡ್ಲಿಗಾಗಿ ಸಿನಿಮಾ ಒಪ್ಪಿಕೊಂಡಿದ್ದರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

PREV
16
ವರನಟ ಡಾ.ರಾಜ್​ ಹುಟ್ಟುಹಬ್ಬ

ಇಂದು (ಏಪ್ರಿಲ್​ 24) ಕರುನಾಡು ಕಂಡ ಅಪರೂಪದ ನಟ ಡಾ.ರಾಜ್​ಕುಮಾರ್​ ಅವರ 97ನೇ ಹುಟ್ಟುಹಬ್ಬ. ಅಣ್ಣಾವ್ರು ಎಂದೇ ಖ್ಯಾತರಾದ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ ವರನಟ, ನಟಸಾರ್ವಭೌಮ ಮೊದಲಾದ ಬಿರುದುಗಳು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ಮೊದಲ ನಟ.

26
ಕಡುಬಡತನ

ಇಂಥ ನಟ ರಾಜ್​ಕುಮಾರ್​ ಅವರ ಹಿನ್ನೆಲೆ ತುಂಬಾ ಕಡುಬಡತನ ಎನ್ನುವುದು ಅವರಿಗೆ ಹಲವು ಅಭಿಮಾನಿಗಳಿಗೆ ತಿಳಿದದ್ದೇ. ಆದರೆ, ಅದೆಷ್ಟು ಕಡುಬಡತನ ಅವರದ್ದಾಗಿತ್ತು ಎಂದರೆ, ಒಂದು ಹೆಚ್ಚುವರಿ ಇಡ್ಲಿಗಾಗಿ ಒಂದು ಸಿನಿಮಾ ಒಪ್ಪಿಕೊಂಡಿದ್ರಂತೆ ಅಣ್ಣಾವ್ರು!

36
ನೋವಿನ ಘಟನೆ

ಇಂಥ ಒಂದು ನೋವಿನ ಘಟನೆಯನ್ನು ಇದೀಗ ತೆರೆದಿಟ್ಟಿದ್ದಾರೆ ಅವರ ಮಗನಾದ, ನಟ ರಾಘವೇಂದ್ರ ರಾಜ್​ಕುಮಾರ್​ ಅವರು. ನಮ್ಮ ಅಪ್ಪಾಜಿಯ ಜೀವನದ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಅವರು ಒಮ್ಮೆ ಒಂದು ಸಿನಿಮಾ ಅನ್ನು ಒಂದು ಇಡ್ಲಿಗಾಗಿ ಒಪ್ಪಿಕೊಂಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

46
ಸಿಕ್ಕಾಪಟ್ಟೆ ಡಿಮಾಂಡ್​ ಇದ್ದ್ ಕಾಲ

ಡಾ.ರಾಜ್​ಕುಮಾರ್​ ಅವರಿಗೆ ಆಗ ಸಿಕ್ಕಾಪಟ್ಟೆ ಡಿಮಾಂಡ್​ ಇದ್ದ ಕಾಲ. ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುವುದು ಈಗಿನಷ್ಟು ಅಂದು ಸುಲಭವಾಗಿರಲಿಲ್ಲವಲ್ಲ. ಆದರೆ ಒಟ್ಟಿಗೇ ಒಮ್ಮೆ ತುಂಬಾ ಸಿನಿಮಾಕ್ಕೆ ಆಫರ್​ ಬಂದಿತ್ತಂತೆ. ನಿಮಗೆ ಏನು ಬೇಕಾದ್ರೂ ಕೊಡ್ತೇವೆ ಬನ್ನಿ ಎಂದು ಒಬ್ಬ ನಿರ್ಮಾಪಕರು ಹೇಳಿದ್ದನ್ನು ರಾಘವೇಂದ್ರ ಅವರು ನೆನಪಿಸಿಕೊಂಡಿದ್ದಾರೆ.

56
ಹೊಟ್ಟೆ ತುಂಬಾ ಊಟ

ಆಗ ಸಿನಿಮಾ ಒಪ್ಪಿಕೊಂಡ್ರೆ ಹೊಟ್ಟೆತುಂಬಾ ಊಟ ಕೊಡುತ್ತಿದ್ದರು. ಅಪ್ಪಾಜಿ ಎರಡು ಇಡ್ಲಿ ತಿನ್ನುತ್ತಿದ್ದರು. ಅವರು ಒಮ್ಮೆ ನೀವು ಒಂದು ಇಡ್ಲಿ ಹೆಚ್ಚು ಕೊಟ್ಟರೆ ಅಂದರೆ ಮೂರು ಇಡ್ಲಿ ಕೊಟ್ಟರೆ ನಾನು ಸಿನಿಮಾ ಒಪ್ಪಿಕೊಳ್ಳುತ್ತೇನೆ ಎಂದಿದ್ದರಂತೆ! ಈ ಬಗ್ಗೆ ಅಪ್ಪಾಜಿಯವರೇ ನಮಗೆ ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ ರಾಘವೇಂದ್ರ.

66
ಪ್ರಧಾನಿಯಿಂದ ಶ್ಲಾಘನೆ

ಡಾ.ರಾಜ್​ ಅವರು ಇಂದಿಗೂ ಎಲ್ಲರ ಮನದಲ್ಲಿ ನೆಲೆಸಿದ್ದಾರೆ. ಈಚೆಗಷ್ಟೇ ಪ್ರಧಾನಿನರೇಂದ್ರ ಮೋದಿ ಅವರು, ತಮ್ಮ ಎಕ್ಸ್​ ಖಾತೆಯಲ್ಲಿ, ಡಾ.ರಾಜ್​ಕುಮಾರ್​ ಅವರು ಹಾಡಿರುವ ಚಿತ್ರದ ಹಾಡೊಂದನ್ನು ಶೇರ್​ ಮಾಡಿಕೊಳ್ಳುವ ಮೂಲಕ, ಅವರ ಅಸಂಖ್ಯ ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories