Milana Nagaraj… ನೀವಿಲ್ಲದೆ ಇದ್ರೆ ನಾನು ಏನಾಗ್ತಿದೆ ಗೊತ್ತಿಲ್ಲ… ಅಮೃತಾ ಅಯ್ಯಂಗಾರ್ ಹೀಗೆ ಹೇಳಿದ್ಯಾಕೆ?

Published : Apr 27, 2026, 07:40 AM IST

ಚಂದನವನದ ನಟಿ ಮಿಲನಾ ನಾಗರಾಜ್ ಇತ್ತೀಚೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆ ಪ್ರಯುಕ್ತ ನಟಿ ಅಮೃತಾ ಅಯ್ಯಂಗಾರ್ ತಮ್ಮ ಪ್ರೀತಿಯ ಹಿರಿಯಕ್ಕನಿಗೆ ಸ್ಪೆಷಲ್ ಆಗಿ ಶುಭಾಶಯ ಕೋರಿದ್ದಾರೆ. ಜೊತೆಗೆ ಮಿಲನಾ ಜೊತೆಗಿನ ಮುದ್ದಾದ ಫೋಟೊ, ವಿಡಿಯೋ ಶೇರ್ ಮಾಡಿದ್ದಾರೆ. 

PREV
15
ಮಿಲನಾ ನಾಗರಾಜ್ ಹುಟ್ಟುಹಬ್ಬ

ಚಂದನವನದ ಸುಂದರಿ ಮಿಲನಾ ನಾಗರಾಜ್ ಇತ್ತೀಚೆಗೆ ಅಂದ್ರೆ ಏಪ್ರಿಲ್ 25ರಂದು ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಪ್ರಯುಕ್ತ ಮತ್ತೊಬ್ಬ ನಟಿಯಾಗಿರುವ ಅಮೃತಾ ಅಯ್ಯಂಗಾರ್ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡು, ಮುದ್ದಾಗಿ ವಿಶ್ ಮಾಡಿದ್ದಾರೆ.

25
ಹಿರಿಯಕ್ಕನಿಗೆ ಭಾವನಾತ್ಮಕ ಪತ್ರ

ಮಿಲನಾ ಹುಟ್ಟುಹಬ್ಬಕ್ಕೆ ತಂಗಿಯಂತಿರುವ ಅಮೃತಾ ಅಯ್ಯಂಗಾರ್ ಭಾವನಾತ್ಮಕ ಪತ್ರ ಬರೆದಿದ್ದಾರೆ. ಹಿರಿಯಕ್ಕನಾಗಿ ತನ್ನ ಜೊತೆ ಎಲ್ಲಾ ಸಂದರ್ಭಗಳಲ್ಲೂ ಏಳು ಬೀಳು, ಸುಖ- ದುಃಖಗಳಲ್ಲೂ ಜೊತೆಯಾಗಿ ನಿಂತಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಮೃತಾ ಅಯ್ಯಂಗಾರ್ ಬರೆದ ಪತ್ರದಲ್ಲಿ ಏನಿದೆ ನೋಡಿ.

35
ನೀವಿಲ್ಲದೇ ಇದ್ದರೆ ನಾನು ಏನಾಗುತ್ತಿದೆ?

ನನ್ನ ಆತ್ಮೀಯ ಸಹೋದರಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಏಳು ಬೀಳುಗಳು, ಸಂತೋಷ ಮತ್ತು ವೈಫಲ್ಯಗಳಲ್ಲಿ ಯಾವಾಗಲೂ ನನ್ನ ಜೊತೆಗಿದ್ದದ್ದಕ್ಕಾಗಿ ಧನ್ಯವಾದಗಳು. ನೀವು ಸುಮಾರು 8 ವರ್ಷಗಳಿಂದ ನನ್ನ ಜೀವನದಲ್ಲಿ ಇದ್ದೀರಿ, ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನೀವು ಇಲ್ಲದೆ ನಾನು ಏನು ಮಾಡುತ್ತಿದ್ದೆ ಎಂದು ನನಗೆ ತಿಳಿದಿಲ್ಲ.

45
ನನ್ನ ಎಲ್ಲವೂ ಆಗಿದ್ದಕ್ಕೆ ಥ್ಯಾಂಕ್ಯೂ

ನನ್ನ ಮಾರ್ಗದರ್ಶಕಿ, ನನ್ನ ಅಕ್ಕ, ನನ್ನ ಆತ್ಮೀಯ ಸ್ನೇಹಿತೆ, ನನ್ನ ನೆಚ್ಚಿನ ಸಹನಟಿ ಮತ್ತು ನನ್ನ ಅತ್ಯುತ್ತಮ  ಧನ್ಯವಾದಗಳು. ನಾನು ಇನ್ನೂ ಅನೇಕ ಹುಟ್ಟುಹಬ್ಬಗಳನ್ನು ಒಟ್ಟಿಗೆ ಆಚರಿಸಲು ಎದುರು ನೋಡುತ್ತಿದ್ದೇನೆ.ಹುಟ್ಟುಹಬ್ಬದ ಶುಭಾಶಯಗಳು, ಮಿಲು. ಐ ಲವ್ ಯು ಟು ದಿ ಮೂನ್ ಆಂಡ್ ಬ್ಯಾಕ್ ಎಂದು ಹೇಳಿದ್ದಾರೆ.

55
ಲವ್ ಮಾಕ್ಟೇಲ್ ನಿಂದ ಶುರುವಾದ ಸ್ನೇಹ

ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮಿಲನಾ ನಾಗರಾಜ್ ಹಾಗೂ ಅಮೃತಾ ಸ್ನೇಹ ಆರಂಭವಾಯಿತು. ಈ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಲವ್ ಮಾಕ್ಟೇಲ್ 2 ಹಾಗೂ 3ರಲ್ಲೂ ಸಹ ನಟಿಸಿದ್ದಾರೆ. ಹಾಗಾಗಿ, ಸಿನಿಮಾ ಜರ್ನಿಯಂತೆ ಇವರಿಬ್ಬರ ಸ್ನೇಹ ಕೂಡ ಕಳೆದ 8 ವರ್ಷಗಳಿಂದ ಸ್ಟ್ರಾಂಗ್ ಆಗುತ್ತಾ ಬಂದಿದೆ. ಅಮೃತಾ ಹೆಚ್ಚಾಗಿ ಮಿಲನಾ ಮಗಳು ಪರಿ ಜೊತೆ ಮುದ್ದು ಮುದ್ದಾಗಿ ಸಮಯ ಕಳೆಯುವ ವಿಡಿಯೋ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಪರಿ ಅಮೃತಾ ಅಯ್ಯಂಗಾರ್ ಅವರಾನ್ನು ಅಮ್ಮು ಅತ್ತೆ ಅಂತಾನೆ ಕರೆಯೋದು, ಅಂತಹ ಭಾಂದವ್ಯ ಇದೆ ಮಿಲನಾ-ಕೃಷ್ಣ ಹಾಗೂ ಅಮೃತಾಗೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories