ಅಭಿಷೇಕ್ ಅಂಬರೀಶ್ Wedding Anniversary… ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ ಪತ್ನಿ ಅವಿವಾ

Published : Jun 05, 2026, 05:31 PM IST

ಅಭಿಷೇಕ್ ಅಂಬರೀಶ್ ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಜ್ಯೂ. ಅಂಬಿ ಪತ್ನಿ ಅವಿವಾ ಬಿದ್ದಪ್ಪ ಗಂಡನ ಜೊತೆಗಿನ ಮುದ್ದಾದ ಅನ್ ಸೀನ್ ಫೋಟೊಗಳನ್ನು ಹಂಚಿಕೊಂದು ಪತಿ ಆನಿವರ್ಸರಿ ಶುಭಾಶಯ ತಿಳಿಸಿದ್ದಾರೆ.

PREV
15
ಅಭಿಷೇಕ್ ಅಂಬರೀಶ್

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಹಾಗೂ ಚಂದನವನದ ನಟ ಅಭಿಷೇಕ್ ಅಂಬರೀಶ್ ಜೂನ್ 5ರಂದು ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋಯ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಅವಿವಾ ಬಿದ್ದಪ್ಪ ಪತಿ ಜೊತೆಗಿನ ಒಂದಷ್ಟು ಫೋಟೊಗಳನ್ನ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

25
ವೆಡ್ಡಿಂಗ್ ಆನಿವರ್ಸರಿ

ಅವಿವಾ ಮತ್ತು ಅಭಿಷೇಕ್ ಜೂನ್ 5, 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವಿವಾ Happy 3 my ಲವ್ ಎಂದು ಕ್ಯಾಪ್ಶನ್ ಕೊಟ್ಟು, ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕೆಲವು ರೊಮ್ಯಾಂಟಿಕ್ ಫೋಟೊಗಳನ್ನು ಸಹ ಅವಿವಾ ಶೇರ್ ಮಾಡಿದ್ದಾರೆ.

35
ಗಂಡನ ಕೆನ್ನೆಗೆ ಮುತ್ತನ್ನಿಟ್ಟ ಅವಿವಾ

ಅವಿವಾ ಒಂದು ಫೋಟೊದಲ್ಲಿ ಗಂಡನ ಕೆನ್ನೆಗೆ ಮುತ್ತನಿಡುತ್ತಿದ್ದು, ಮತ್ತೊಂದು ಫೋಟೊದಲ್ಲಿ ಮಗುವಿನ ಜೊತೆಗೆ ಇಬ್ಬರು ನಿಂತಿದ್ದಾರೆ. ಇನ್ನೊಂದು ಫೋಟೊದಲ್ಲಿ ಗಂಡನ ಜೊತೆಗೆ ಮುದ್ದಾದ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಹಾಗೂ ಫ್ಯಾಮಿಲಿ ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

45
ಅದ್ಧೂರಿ ಮದುವೆಯಾಗಿದ್ದ ಮುದ್ದು ಜೋಡಿ

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂನ್ 5ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೌಡ ಸಂಪ್ರದಾಯಂತೆ ಈ ಜೋಡಿ ಮದುವೆಯಾಗಿದ್ದು, ಕೇವಲ ಆತ್ಮೀಯರಷ್ಟೇ ಭಾಗಿಯಾಗಿದ್ದರು. ಜೂನ್‌ 7ರಂದು ಗ್ರ್ಯಾಂಡ್‌ ರಿಸೆಪ್ಷನ್‌ ಕೂಡ ನೀಡಿದ್ದರು. .

55
ಪ್ರೀತಿಸಿ ಮದುವೆಯಾದ ಜೋಡಿ

ಅಭಿಷೇಕ್ ಮದುವೆಯಾಗುವ ನಾಲ್ಕೈದು ವರ್ಷಗಳ ಮುಂಚೆಯೇ ಅಭಿಷೇಕ್‌ ಮತ್ತು ಅವಿವ ಬಿದ್ದಪ್ಪ ಪ್ರೀತಿಯಲ್ಲಿ ಬಿದ್ದಿದ್ದರು. ಅಭಿಷೇಕ್ ಅವರು ವಿದೇಶದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆ ವೇಳೆ ಅಲ್ಲಿ ಅವಿವಾ ಅವರ ಪರಿಚಯ ಆಗಿತ್ತು. ಬಳಿಕ ಸ್ನೇಹಿತರಾಗಿ, ನಂತರ ಪ್ರೀತಿಯಲ್ಲಿ ಬಿದ್ದಿದ್ದರು. 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇದೀಗ ಒಂದು ಗಂಡು ಮಗುವಿನ ಪೋಷಕರು ಕೂಡ ಹೌದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories