Relationship Tips: ನಿಮ್ಮ ವ್ಯಕ್ತಿತ್ವ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತೆ!

Published : Nov 30, 2022, 08:30 PM IST

ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವರ ಪಾರ್ಟ್ನರ್ನ ಗುಣಲಕ್ಷಣ ಮತ್ತು ಸಹನೆಯನ್ನು ಅವಲಂಬಿಸಿ, ಯಶಸ್ವಿ ಸಂಬಂಧ ಕಾಪಾಡಿಕೊಳ್ಳಲು ಪ್ರಮುಖ ಕೊಡುಗೆ ನೀಡತ್ತೆ. ಅಂತರ್ಮುಖಿಯಾಗಿರುವುರೋದು ಅಥವಾ ಬಹಿರ್ಮುಖಿಯಾಗಿರೋದು, ಹೊಸ ವಿಷಯಗಳಿಗೆ ಮುಕ್ತ ಅಥವಾ ಪ್ರತಿರೋಧಕವಾಗಿರೋದು, ಅಥವಾ ಸಾಮಾನ್ಯವಾಗಿ ಸೋಮಾರಿ ಅಥವಾ ಕರ್ತವ್ಯನಿಷ್ಠೆ ಹೊಂದಿರೋದು, ಇವೆಲ್ಲವೂ ವ್ಯಕ್ತಿಯು ಹೇಗಿರುತ್ತಾನೆ ಮತ್ತು ಯಾವ ರೀತಿಯ ಸಂಗಾತಿಯಾಗಬಹುದು ಎಂಬುದನ್ನು ನಿರ್ಧರಿಸುತ್ತದೆ.  

PREV
17
Relationship Tips: ನಿಮ್ಮ ವ್ಯಕ್ತಿತ್ವ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತೆ!

ವ್ಯಕ್ತಿತ್ವವು ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತೆ?: ವ್ಯಕ್ತಿತ್ವವು ಸಂಬಂಧಗಳಲ್ಲಿ ಸಂತೋಷ ಕಂಡುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಅಟ್ಯಾಚ್ಮೆಂಟ್ ಸಂಬಂಧದ ಯಶಸ್ಸಿನ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಹೌದು ನಾವು ಯಾರ ಜೊತೆ ಹೇಗೆ ಅಟ್ಯಾಚ್ ಮೆಂಟ್ ಹೊಂದಿದ್ದೇವೆ ಅನ್ನೋದು ನಮ್ಮ ವ್ಯಕ್ತಿತ್ವದ ಮೇಲೆ ನೇರವಾಗಿ ಪರಿಣಾಮ ಬೀರುತ್ತೆ.

27

ಬಾಲ್ಯದಲ್ಲಿ ಕೆಟ್ಟ ರೀತಿಯ ಸಂಬಂಧವನ್ನು ಹೊಂದಿದ ವ್ಯಕ್ತಿಗಳು ವಯಸ್ಸಿಗೆ ಬಂದ ನಂತರ ಸಂಬಂಧಗಳ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬಹುದು ಅಥವಾ ಬದ್ಧತೆಯನ್ನು ಸಂಪೂರ್ಣವಾಗಿ ತಪ್ಪಿಸಬಹುದು. ನೀವು ಉತ್ತಮ ಸಂಬಂಧ ಹೊಂದಿದ್ದು, ಸಂಗಾತಿ ಜೊತೆ ಬಾಂಧವ್ಯ ಗಟ್ಟಿಯಾಗಿದ್ದರೆ ಆ ಸಂಬಂಧವು ದೀರ್ಘಕಾಲ ಉಳಿಯುವ ಸಾಧ್ಯತೆ ಇದೆ. 

37

ವ್ಯಕ್ತಿತ್ವವು  ಸಂಬಂಧದ ಯಶಸ್ಸಿಗೆ ಕಾರಣವಾಗುತ್ತಾ?: ನಿಮ್ಮ ವ್ಯಕ್ತಿತ್ವವು ನಿಮ್ಮ ಲವ್ ಲೈಫ್ (love life) ಅನ್ನು ನಿರ್ಧರಿಸುತ್ತೆ ಅನ್ನೋದು ಗೊತ್ತಾ ನಿಮಗೆ? ಹೌದು. ಉದಾಹರಣೆಗೆ, ನ್ಯೂರೋಟಿಸಿಸಂನಲ್ಲಿ ತಿಳಿಸಿರುವಂತೆ ವಿಶೇಷವಾಗಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯು ತನ್ನ ಸಂಬಂಧಗಳನ್ನು ಕಾಪಾಡಿಕೊಳ್ಳಲು ಹೆಣಗಾಡಬಹುದು, ಮತ್ತು ಬ್ರೇಕ್ ಅಪ್ ನಂತರ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ನಿಮ್ಮ ವ್ಯಕ್ತಿತ್ವ ಉತ್ತಮವಾಗಿದ್ದರೆ, ಸಂಬಂಧವು ಯಶಸ್ವಿಯಾಗೋದು ಖಚಿತ.

47

ಅಂತರ್ಮುಖಿಗಳು ಮತ್ತು ಬಹಿರ್ಮುಖಿಗಳು (introvert and extrovert)  ಸಂಬಂಧಗಳನ್ನು ಕಾಪಾಡಿಕೊಳ್ಳಬಹುದೇ?
ಪ್ರೀತಿಯಲ್ಲಿ ಯಾರೂ ಬೇಕಾದರೂ ಬೀಳಬಹುದು, ಅದರಲ್ಲೂ ಇಬ್ಬರು ಇಂಟ್ರೋವರ್ಟ್ ಮತ್ತು ಎಕ್ಸ್’ಟ್ರೋವರ್ಟ್ ದಂಪತಿಗಳು ಇನ್ನೊಬ್ಬರ ಭಾವನಾತ್ಮಕ ಅಗತ್ಯಗಳಿಗೆ ಹೊಂದಿಕೊಳ್ಳಲು ಸಿದ್ಧರಿದ್ದರೆ ಅವರ ಸಂಬಂಧವು ದೀರ್ಘಕಾಲ ಉಳಿಯುವ ಚಾನ್ಸ್ ಇದೆ. ಎಕ್ಸ್’ಟ್ರೋವರ್ಟ್ ತಮ್ಮ ಸಂಗಾತಿಯೊಂದಿಗೆ ತಾಳ್ಮೆಯಿಂದಿರಬೇಕಾಗಬಹುದು ಮತ್ತು ಅವರ ಪ್ರೈವೆಸಿಯನ್ನು ಗೌರವಿಸಬೇಕು. ಆದರೆ ಅಂತರ್ಮುಖಿಗಳು, ತಮ್ಮ ಪಾಲಿನ ಮಟ್ಟಿಗೆ, ಪ್ರಮುಖ ಚರ್ಚೆಗಳಿಂದ ದೂರವಿರಬಾರದು ಮತ್ತು ತಮ್ಮ ಸಂಗಾತಿಯ ಸೋಶಿಯಲ್ ಲೈಫ್ ಗೆ ಅಡ್ಡ ಬರಬಾರದು.

57

ತಮ್ಮ ಬಗ್ಗೆ ತಾವು ಹೆಚ್ಚು ಒಲವು ಹೊಂದಿರುವವರು ಯಾರೊಂದಿಗಾದರೂ ಸಂಬಂಧ ಹೊಂದುವುದು ಅನೇಕವೇಳೆ ಇಂಪೆರ್ಫೆಕ್ಟ್ ರಿಲೇಷನ್ಷಿಪ್ಗೆ ಕಾರಣವಾಗುತ್ತೆ, ಅದರಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿಯಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗುತ್ತೆ. ಈ ವ್ಯಕ್ತಿಯು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಪ್ರೀತಿಯ ಸಂಗಾತಿಗಳಿಂದ ಹೆಚ್ಚಿನ ಅಭಿನಂದನೆ ಬಯಸುತ್ತಾರೆ, ಅವರು ಮೊದಲ ಬಾರಿಗೆ ತಮ್ಮ ಸಂಗಾತಿಯನ್ನು ಭೇಟಿಯಾದಾಗ, ಅವರು ಹೆಚ್ಚು ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಇವರು ಬೇಗನೆ ಸಂಬಂಧ ಬೆಳೆಸುತ್ತಾರೆ. ಆದರೆ ಇವರು ಇನ್ನೊಬ್ಬರ ಬಗ್ಗೆ ಹೆಚ್ಚು ಗಮನ ಹರಿಸದ ಕಾರಣ ಆ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ. 

67

ನಾರ್ಸಿಸಿಸ್ಟಿಕ್ (Narcissism) ವ್ಯಕ್ತಿತ್ವ ಹೊಂದಿರುವ ಜನರು ನಿಜವಾಗಿಯೂ ಪ್ರೀತಿಯಲ್ಲಿ ಬೀಳಲು ಅಥವಾ ನ್ಯಾಯಯುತ ಸಂಬಂಧ ಹೊಂದಲು ಅಸಮರ್ಥರಾಗಿರುತ್ತಾರೆ. ಬದಲಾಗಿ ಅಂತಹ ವ್ಯಕ್ತಿ ಇತರ ಗೊಂದಲಕಾರಿ ನಡವಳಿಕೆಗಳೊಂದಿಗೆ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ಸಂಗಾತಿಯನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದಿಂದ ಪ್ರತ್ಯೇಕಿಸುತ್ತಾರೆ.

77
Image: Getty Images

ನಾರ್ಸಿಸಿಸ್ಟಿಕ್ ವ್ಯಕ್ತಿಯೊಂದಿಗಿನ ಸಂಬಂಧವು ಭಾವನಾತ್ಮಕವಾಗಿ ತುಂಬಾನೆ ಡ್ರೈ ಅನಿಸಬಹುದು, ಯಾಕಂದ್ರೆ ಈ ಸಂಬಂಧಗಳು ಬೇಗ ಬೆಳೆಯುತ್ತೆ. ಆದರೆ ಈ ವ್ಯಕ್ತಿಗಳು ಸಂಗಾತಿಯನ್ನು ಇತರರಿಂದ ಬೇರ್ಪಡಿಸುವ, ನಿಂದನಾತ್ಮಕ ಪದಗಳಲ್ಲಿ ಮಾತನಾಡುವ ಅಥವಾ ಸಂಗಾತಿಯ ಮೇಲೆ ಮೌನವಾಗಿ ಒತ್ತಡ ಹೇರುವ ಗುಣ ಹೊಂದಿರುತ್ತಾರೆ. ಇದರಿಂದ ಈ ಸಂಬಂಧ ಬೇಗನೆ ಹಾಳಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವರ ರಿಲೇಷನ್ಶಿಪ್ನ ಸಕ್ಸಸ್ ಗೆ ಅತೀ ಮುಖ್ಯ.    

Read more Photos on
click me!

Recommended Stories