ರಾಧಿಕಾಗೆ ನಾನು ಕೆಜಿಗಟ್ಟಲೆ ಚಿನ್ನ ಕೊಡಿಸಿದ್ದೇನೆ: ನಟ ಯಶ್​ ಅಮ್ಮ ಪುಷ್ಪಾ ಅರುಣ್​ಕುಮಾರ್​ ಹೇಳಿದ್ದೇನು

Published : Jul 10, 2026, 12:41 PM IST

ಯಶ್ ಅವರ 'ಟಾಕ್ಸಿಕ್' ಸಿನಿಮಾದ ಬೋಲ್ಡ್ ದೃಶ್ಯಗಳ ಚರ್ಚೆಯ ನಡುವೆ, ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಮ್ಮ ಸೊಸೆ ರಾಧಿಕಾ ಪಂಡಿತ್‌ಗೆ ಕೆಜಿಗಟ್ಟಲೆ ಚಿನ್ನ ಕೊಡಿಸಿದ ಬಗ್ಗೆ  ಮಾತನಾಡಿದ್ದಾರೆ.

PREV
16
ಟಾಕ್ಸಿಕ್​ ಹವಾ

ನಟ ಯಶ್​ ಅವರ ಟಾಕ್ಸಿಸ್​ ಸಿನಿಮಾದ ಪ್ರೊಮೋಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮಾ ಸೃಷ್ಟಿಸುತ್ತಿದೆ. ಎಲ್ಲಿ ನೋಡಿದ್ರೂ ಇದರದ್ದೇ ಹವಾ. ಯಶ್​ ಅವರು ಹಿಂದೆಂದಿಗಿಂತಲೂ ಹೆಚ್ಚು ರೊಮ್ಯಾಂಟಿಕ್​ ಆಗಿ ನಟಿಯರ ಜೊತೆ ಕಾಣಿಸಿಕೊಂಡಿದ್ದಕ್ಕೆ ಒಂದೆಡೆ ಮೀಮ್ಸ್​ಗಳ ಸುರಿಮಳೆಯೇ ಆಗುತ್ತಿದ್ದರೆ, ಅದೇ ಮತ್ತೊಂದೆಡೆ ಈ ಪ್ರೊಮೋಗಳನ್ನು ಶೇರ್​ ಮಾಡಿಕೊಂಡು ಥಹರೇವಾರಿ ರೀತಿಯಲ್ಲಿ ಕಮೆಂಟ್ಸ್​ ಮಾಡಲಾಗುತ್ತಿದೆ.

26
ತಬಾಹಿ ಚರ್ಚೆ

ಅದರಲ್ಲಿಯೂ ಚಿತ್ರದ ‘ತಬಾಹಿ..’ ಹಾಡು ರಿಲೀಸ್ ಆಗಿದೆ. ‘ಟಾಕ್ಸಿಕ್’ ಟೀಸರ್‌ ಹಾಗೂ ‘ತಬಾಹಿ..’ ಹಾಡಿನಲ್ಲಿರುವ ಬೋಲ್ಡ್ ದೃಶ್ಯಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಈ ಬಗ್ಗೆ ಸದ್ಯ ರಾಧಿಕಾ ಆಗಲೀ, ಅಮ್ಮ ಪುಷ್ಪ ಆಗಲೀ ರಿಯಾಕ್ಟ್​ ಮಾಡಲಿಲ್ಲ. ಅವರು ಏನೆನ್ನುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

36
ಪುಷ್ಪಾ ಅರುಣ್​ಕುಮಾರ್​ ಹಳೆ ವಿಡಿಯೋ

ಇವೆಲ್ಲವುಗಳ ನಡುವೆಯೇ ಇದೀಗ, ಯಶ್​ ಅವರ ಅಮ್ಮ ಪುಷ್ಪಾ ಅರುಣ್​ ಕುಮಾರ್​ (Yash's mother Pushpa Arun Kumar) ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಪುಷ್ಪಾ ಅವರು ಕೊತ್ತಲವಾಡಿ ಚಿತ್ರದ ನಿರ್ಮಾಪಕಿಯಾಗಿದ್ದಾರೆ. ಆ ಸಂದರ್ಭದಲ್ಲಿ ನಡೆದ ಸಂದರ್ಶನವೊಂದರ ವಿಡಿಯೋ ಈಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.

46
ಕೆಜಿಗಟ್ಟಲೆ ಚಿನ್ನ

ನಮ್ಮ ರಾಧಿಕಾಗೆ ಕೆಜಿಗಟ್ಟಲೆ ಚಿನ್ನ ಕೊಡಿಸಿದ್ದೀನಿ. ಕೆಜಿಗಟ್ಟಲೆ ಚಿನ್ನ ತರೋಕೆ ನಾನೇ ಹೋಗಿದ್ದು. ಯಶ್ ಬಂದಿರಲಿಲ್ಲ. ರಾಧಿಕಾ ಪಂಡಿತ್ ತಾಯಿ ಬಂದಿದ್ದರು ಅಷ್ಟೆ. ಕೊಡಿಸಿದ್ದು ನಾವೇ ಎಂದು ಪುಷ್ಪಾ ಅರುಣ್ ಕುಮಾರ್ insightrushnews ಚಾನೆಲ್​ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಸಾಮಾನ್ಯವಾಗಿ ಇಂಥ ಕೆಲಸಕ್ಕೆ ಹೋಗುವಾಗ 20 ಜನ ಹೋಗುತ್ತೇವೆ. ಆದರೆ ನಾನು, ರಾಧಿಕಾ ಅಮ್ಮನ ಜೊತೆ ಹೋಗಿದ್ದು ಅಷ್ಟೇ. ನಾನೇ ಕೆಜಿಯಷ್ಟು ಚಿನ್ನ ಖರೀದಿಸಿ ಕೊಟ್ಟೆ ಎಂದಿದ್ದಾರೆ.

56
ನಾವೇ ಡಿಸೈಡ್​ ಮಾಡಿದ್ದು

ನಾನು ಸಿನಿಮಾ ಮಾಡುವಾಗ ಯಶ್‌ನ ಕೇಳೋದು ಅಥವಾ ಅವನ ಬಳಿ ದುಡ್ಡು ತಗೊಳೋದು ಏನೂ ಮಾಡಲ್ಲ. ಏಕೆಂದ್ರೆ ಯಶ್‌ಗೆ ಭಯ ಪಟ್ಟು ಮಾಡಬೇಕು ಅನ್ನೋದೇನೂ ಇಲ್ಲ. ಅದನ್ನೆಲ್ಲಾ ನಾನು ಹಾಗೂ ನನ್ನ ಯಜಮಾನರು ಡಿಸೈಡ್ ಮಾಡಿ ಮಾಡಿದ್ದು ಅಷ್ಟೇ ಎಂದು ಪುಷ್ಪಾ ಹೇಳಿದ್ದಾರೆ.

66
ಯಶ್​ಗೆ ಚೆನ್ನಾಗಿ ತಿಳಿವಳಿಕೆ ಇದೆ

ಹಾಗಂತ ಯಶ್‌ಗೆ ಗೊತ್ತಾಗಲ್ಲ ಅಂತೇನಿಲ್ಲ. ಯಶ್‌ಗೆ ಗೊತ್ತಿರುತ್ತೆ. ಕೇಳೋಕೆ ಬರಲ್ಲ. ಯಾಕಂದ್ರೆ, ಎಲ್ಲಾ ನಾನೇ ಮಾಡಿರೋದಲ್ವಾ ಮೊದಲಿನಿಂದಲೂ. ನಾನೂ ಯಶ್‌ನ ಕೇಳೋಕೆ ಹೋಗಲ್ಲ. ಯಾಕಂದ್ರೆ, ಅವನಿಗೆ ತಿಳಿವಳಿಕೆ ಚೆನ್ನಾಗಿದೆ ಎಂದು ಪುಷ್ಪಾ ಹೇಳಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories