Bigg Boss ಗೌರವ್- ಆಕಾಂಕ್ಷಾ ಡಿವೋರ್ಸ್​ ಸುದ್ದಿ ಸುಳ್ಳಾ? ಹೆಣ್ಣಿನ ಮೇಲೂ ನಂಗೆ ಆಸೆ ಎಂದು ನಟಿ ಹೇಳಿದ್ದೂ ಪ್ರಚಾರಕ್ಕಾ

Published : Jul 09, 2026, 05:57 PM IST

ರಿಯಾಲಿಟಿ ಷೋ 'ಲಾಕ್ ಅಪ್' ನಲ್ಲಿ ನಟಿ ಆಕಾಂಕ್ಷಾ ಚಮೋಲಾ ಪತಿ ಗೌರವ್ ಖನ್ನಾರಿಂದ ವಿಚ್ಛೇದನ ಪಡೆಯುತ್ತಿರುವ ವಿಷಯ ಬಹಿರಂಗಪಡಿಸಿದ್ದರು. ಮಕ್ಕಳನ್ನು ಹೆರಲು ಇಷ್ಟವಿಲ್ಲದ ಕಾರಣ  ದಾಂಪತ್ಯಕ್ಕೆ ತೆರೆ ಎಳೆಯುತ್ತಿರುವುದಾಗಿ ಹೇಳಿದ್ದರು. ಆದರೆ, ಇದೀಗ ಸುದ್ದಿ ಕೇವಲ ಪ್ರಚಾರದ ಗಿಮಿಕ್​ ಎಂಬ ಅನುಮಾನ ಮೂಡಿದೆ.

PREV
17
ರಿಯಾಲಿಟಿ ಷೋನಲ್ಲಿ ಡಿವೋರ್ಸ್​ ಘೋಷಣೆ

ಹಿಂದಿಯ ಬಿಗ್​ಬಾಸ್​ 19 ವಿನ್ನರ್​ ಗೌರವ್​ ಖನ್ನಾ ಮತ್ತು ಲಾಕ್ ಅಪ್ ಸೀಸನ್ 2 ರ ಪ್ರೀಮಿಯರ್‌ ಸ್ಪರ್ಧಿ ಆಕಾಂಕ್ಷಾ ಚಮೋಲಾ ಡಿವೋರ್ಸ್​ ಪಡೆಯುತ್ತಿರುವ ಬಗ್ಗೆ ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ಲಾಕ್ ಅಪ್ ರಿಯಾಲಿಟಿ ಷೋನಲ್ಲಿಯೇ ಆಕಾಂಕ್ಷಾ ಈ ವಿಷಯವನ್ನು ರಿವೀಲ್​ ಮಾಡಿದ್ದರು. ಯಾವುದೇ ಘನಂಧಾರಿ ಕಾರ್ಯ ಮಾಡಿದವರಂತೆ ಈ ವಿಷಯವನ್ನು ರಿಯಾಲಿಟಿ ಷೋನಲ್ಲಿ ಅವರು ರಿವೀಲ್​ ಮಾಡಿದ್ದು, ಇದರ ಬಗ್ಗೆ ಗೊತ್ತೇ ಇಲ್ಲ ಎನ್ನುವಂತೆ ತೀರ್ಪುಗಾರರು ಪೋಸ್​​ ಕೊಟ್ಟದ್ದೂ ಆಗಿದೆ. ಈ ಪೋಸ್​ ಕೊಟ್ಟಿದ್ದು ನೋಡಿ ವೀಕ್ಷಕರು, ಅವರಿಗೂ ಇದೇ ಮೊದಲು ತಿಳಿಯಿತು ಎಂದು ಅಂದುಕೊಂಡದ್ದೂ ಆಗಿದೆ.

27
ಹೆಣ್ಣಿನ ಮೇಲೂ ಪ್ರೀತಿ ಎಂದಿದ್ದ ಆಕಾಂಕ್ಷಾ

ಇದರ ಬೆನ್ನಲ್ಲೇ, ಇನ್ನೊಂದು ಸಂದರ್ಶನಲ್ಲಿ ನಟಿ ಆಕಾಂಕ್ಷಾ, “ನಾನು ಗೌರವ್‌ ಖನ್ನಾ ಅವರನ್ನ ಮದುವೆಯಾಗುವ ಮೊದಲು ಬೈಸೆಕ್ಷುವಲ್‌ (Bisexual) ಆಗಿದ್ದೆ. ನನಗೆ ಹುಡುಗಿಯರ ಜೊತೆ ಸಂಬಂಧವಿತ್ತು ಆದರೆ, ಆ ಸಂಬಂಧಗಳಲ್ಲಿ ಯಾವುದೇ ದೈಹಿಕ ಸಂಪರ್ಕವಿರಲಿಲ್ಲ. ಬದಲಿಗೆ ಕೇವಲ ಭಾವನಾತ್ಮಕ ಸಂಬಂಧವಷ್ಟೇ ಇತ್ತು” ಎಂದಿದ್ದರು.

37
ಡಿವೋರ್ಸ್​ ಸುದ್ದಿ ಸುಳ್ಳಾ?

ಆದರೆ, ಇವೆಲ್ಲವೂ ಪ್ರಚಾರಕ್ಕಾಗಿ ಮಾಡಿದ್ದಾ? ಡಿವೋರ್ಸ್​ ಸುದ್ದಿನೇ ಸುಳ್ಳಾ ಎನ್ನುವಂಥ ಘಟನೆಯೊಂದು ನಡೆದಿದ್ದು, ಈ ಸೆಲೆಬ್ರಿಟಿಗಳು ಪ್ರಚಾರಕ್ಕಾಗಿ ಯಾವ ಹಂತಕ್ಕಾದರೂ ಹೋಗುತ್ತಾರೆ, ಅಸಹ್ಯ ಎಂದು ನೆಟ್ಟಿಗರು ಆಡಿಕೊಳ್ಳುವಂತಾಗಿದೆ.

47
ಎಲ್ಲವೂ ಪ್ರಚಾರಕ್ಕಾ?

ಅಷ್ಟಕ್ಕೂ ಆಗಿದ್ದೇನೆಂದರೆ, ಗೌರವ್ ಖನ್ನಾ ನೆಟ್‌ಫ್ಲಿಕ್ಸ್‌ನ ಫೇಮಸ್​​ ರಿಯಾಲಿಟಿ ಶೋ 'ಲಾಕ್ ಅಪ್: ಸಚ್ ಯಾ ಸಝಾ'ಗೆ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇಂದು ಪ್ರಸಾರ ಕಾಣಲಿರುವ ಈ ಸಂಚಿಕೆಯ ಪ್ರೊಮೋ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಇದು ಈ ಸೀಸನ್​ನ ಅತ್ಯಂತ ಭಾವನಾತ್ಮಕ ಕ್ಷಣ ಎಂದು ವರ್ಣಿಸಲಾಗುತ್ತಿದೆ. ಆದರೆ ಈ ಪ್ರೊಮೋ ನೋಡಿದ ಮೇಲೆ ಈ ಜೋಡಿ ಡಿವೋರ್ಸ್​ ಬಗ್ಗೆ ಮಾತನಾಡಿದ್ದು ಕೇವಲ ಪ್ರಚಾರಕ್ಕಾಗಿ ಎನ್ನುವ ಮಾತುಗಳು ಕೇಳಿಬರುತ್ತಿವೆ.

57
ಡಿವೋರ್ಸ್​ ಸುದ್ದಿ ರಿವೀಲ್​

ಇದೇ ಷೋನಲ್ಲಿ ಆಕಾಂಕ್ಷಾ ಡಿವೋರ್ಸ್​ ಸುದ್ದಿ ರಿವೀಲ್ ಮಾಡಿದ್ದರು. ಈ ಹೇಳಿಕೆ ನಂತರ, ಗೌರವ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಡಿವೋರ್ಸ್​​ ಬಗ್ಗೆ ಪ್ರತಿಕ್ರಿಯಿಸಿದ್ದರು. ಆಕಾಂಕ್ಷಾ ಬಗ್ಗೆ ಅಪಾರ ಕಾಳಜಿ ಹೊಂದಿರುವುದಾಗಿ, ಅವರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದರು. ಪರಿಸ್ಥಿತಿ ಮೊದಲಿನಂತೆಯೇ ಇದೆ. ನಾನು ಈಗಲೂ ಅವರನ್ನು ಅಷ್ಟೇ ಪ್ರೀತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ. ನಾನು ಸದಾ ಆಕಾಂಕ್ಷಾರನ್ನು ಬೆಂಬಲಿಸುತ್ತೇನೆ. ಅವರು ನನ್ನ ಪತ್ನಿ. ನಾನು ಯಾರನ್ನಾದರೂ ಒಮ್ಮೆ ಪ್ರೀತಿಸಿದರೆ ನಂತರ ನಾನು ಎಂದಿಗೂ ಕೈಬಿಡುವುದಿಲ್ಲ ಎಂದು ತಿಳಿಸಿದ್ದರು.

67
10 ವರ್ಷದ ದಾಂಪತ್ಯಕ್ಕೆ ತೆರೆ

ಅದೇನೇ ಇದ್ದರೂ, ಇದೀಗ ಆಕಾಂಕ್ಷಾ ತಮ್ಮ 10 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದದ್ದು ಏಕೆ ಎನ್ನುವ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇದೇ ಮೊದಲ ಬಾರಿಗೆ ಅಪ್​ಡೇಟ್​ ಕೊಡುತ್ತಿದ್ದೇನೆ ಎಂದಿರುವ ನಟಿ, ನಾನು ತಾಯಿಯಾಗಲು ಮದುವೆಯಾಗಿರಲಿಲ್ಲ. ಆದರೆ, ಗೌರವ್​ಗೆ ಮಕ್ಕಳು ಎಂದರೆ ಇಷ್ಟ. ನನಗೆ ಮಕ್ಕಳನ್ನು ಹೆರಲು ಇಷ್ಟವಿಲ್ಲ. ಅದಕ್ಕಾಗಿಯೇ ಈ ನಿರ್ಧಾರ ಎಂದು ಹೇಳಿದ್ದರು. ನಾನು ಮಕ್ಕಳನ್ನು ಹೆರಲು ಹುಟ್ಟಿದವಳಲ್ಲ ಎಂದು ಗೌರವ್​ಗೆ ಮೊದಲೇ ಹೇಳಿದ್ದೆ. ಮೊದಲಿಗೆ ಆತ ಒಪ್ಪಿಕೊಂಡಿದ್ದ. ಆದರೆ ಕ್ರಮೇಣ ಆತ ಬದಲಾದ. ಮಕ್ಕಳು ಬೇಕು ಎನ್ನುವುದು ಅವನ ಇಚ್ಛೆಯಾಗಿತ್ತು. ಶೇಕಡಾ 99ರಷ್ಟು ಮಂದಿ ಮಕ್ಕಳನ್ನು ಪಡೆಯುವುದಕ್ಕಾಗಿಯೇ ಮದುವೆಯಾಗುತ್ತಾರೆ. ಆದರೆ ನಾನು ಆ ಸಾಲಿನಲ್ಲಿ ಇದ್ದವಳಲ್ಲ. ಗೌರವ್​ಗೆ ಮಗುವನ್ನು ನೀಡಲು ನನ್ನಿಂದ ಸಾಧ್ಯವಿಲ್ಲ. ಆದ್ದರಿಂದ ಬೇರೆ ಬೇರೆಯಾಗುವುದೇ ಒಳ್ಳೆಯದು ಎಂದು ತೀರ್ಮಾನಕ್ಕೆ ಬಂದ್ವಿ ಎಂದು ಆಕಾಂಕ್ಷಾ ಹೇಳಿದ್ದರು. ಆದರೆ ಇವೆಲ್ಲವೂ ಗೇಮ್​ಪ್ಲ್ಯಾನ್​ ಎಂದು ಹೇಳಲಾಗುತ್ತಿದೆ.

77
ಮದುವೆ ಹಿನ್ನೆಲೆ

ಆಕಾಂಕ್ಷಾ ಚಮೋಲಾ ಸಂತೋಷಿ ಮಾ, ಯೇ ಹೈ ಆಶಿಕಿ ಮತ್ತು ಕ್ರೈಮ್ ಪೆಟ್ರೋಲ್‌ನಂತಹ ಜನಪ್ರಿಯ ಸೀರಿಯಲ್​ಗಳಲ್ಲಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡವರು. ಅವರು ಮತ್ತು ಗೌರವ್ ಖನ್ನಾ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ ನಂತರ 2016 ರಲ್ಲಿ ವಿವಾಹವಾದರು, ವರದಿಯ ಪ್ರಕಾರ ಆಡಿಷನ್ ಸಮಯದಲ್ಲಿ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಗೌರವ್ ಮತ್ತು ಆಕಾಂಕ್ಷಾ ನವೆಂಬರ್ 24, 2016 ರಂದು ಗೌರವ್ ಅವರ ತವರು ಕಾನ್ಪುರದಲ್ಲಿ ನಡೆದ ಮೂರು ದಿನಗಳ ಅದ್ದೂರಿ ವಿವಾಹ ಆಚರಣೆಯಲ್ಲಿ ವಿವಾಹವಾದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories