'ಕಲರ್ಸ್' ಖ್ಯಾತಿಯ ನಟಿ ಸ್ವಾತಿ ರೆಡ್ಡಿ ಅವರು 'ಮಂತ್ ಆಫ್ ಮಧು' ಚಿತ್ರದ ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರೊಂದಿಗೆ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಪೈಲಟ್ ವಿಕಾಸ್ ವಾಸು ಅವರಿಂದ ಡಿವೋರ್ಸ್ ಪಡೆದಿದ್ದ ಸ್ವಾತಿ, ಇದೀಗ ತಮ್ಮದೇ ಸಿನಿಮಾ ನಿರ್ದೇಶಕರ ಕೈಹಿಡಿದಿದ್ದಾರೆ.
ಕಾಲಿವುಡ್ ಮತ್ತು ಟಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಸ್ವಾತಿ, ಅವರು ಸದ್ದಿಲ್ಲದೇ 2ನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. 'ಕಲರ್ಸ್' ಎನ್ನುವ ಟಿವಿ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಸ್ವಾತಿ 'ಕಲರ್ಸ್ ಸ್ವಾತಿ ರೆಡ್ಡಿ' (Swathi Reddy) ಎಂದೇ ಫೇಮಸ್ ಆಗಿರುವ ನಟಿ ಸ್ವಾತಿ ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರೊಡನೆ ಮದುವೆಯಾಗಿದ್ದಾರೆ. ಇದರ ಫೋಟೋಗಳು ಈಗ ವೈರಲ್ ಆಗುತ್ತಿವೆ.
26
ತಮ್ಮದೇ ಸಿನಿಮಾ ನಿರ್ದೇಶಕ
ತಮಿಳಿನ ಸೂಪರ್ ಹಿಟ್ ‘ಸುಬ್ರಹ್ಮಣ್ಯಪುರಂ’ ಸಿನಿಮಾದ ನಟಿಯಾಗಿ ದೊಡ್ಡ ಜನಪ್ರಿಯತೆ ಗಳಿಸಿದ ಸ್ವಾತಿ ರೆಡ್ಡಿ (Swathi Reddy) ತಮ್ಮದೇ ಸಿನಿಮಾ ‘ಮಂತ್ ಆಫ್ ಮಧು’ ಸಿನಿಮಾದ ನಿರ್ದೇಶಕರಾಗಿದ್ದ ಶ್ರೀಕಾಂತ್ ನಾಗೋಟಿ ಅವರ ಕೈಹಿಡಿದ್ದಾರೆ. ಎಂಬಿಎ ಪದವಿ ಗಳಿಸಿ, ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡಿ, ನಿರ್ದೇಶಕರಾಗುವ ನಿಟ್ಟಿನಲ್ಲಿ ಕೆಲಸ ಬಿಟ್ಟು ಬಂದಿದ್ದ ಶ್ರೀಕಾಂತ್ ಅವರೀಗ ಸ್ವಾತಿ ಅವರ ಪತಿಯಾಗಿದ್ದಾರೆ. ಸ್ವಾತಿ ರೆಡ್ಡಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯ ಚಿತ್ರಗಳನ್ನು ಪೋಸ್ಟ್ ಮಾಡಿ, ''ಮದುವೆಯಾಗಿದೆ'' ಎಂಬ ಒಂದೇ ಪದದ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
36
ಪ್ರೀತಿಯಿಂದ ಮದುವೆವರೆಗೆ...
ಹಲವು ವರ್ಷ ಸಿನಿಮಾದಿಂದ ವಿರಾಮ ಪಡೆದಿದ್ದ ಸ್ವಾತಿ ಅವರು, 2023ರಲ್ಲಿ ಬಿಡುಗಡೆಯಾದ ಭಾವನಾತ್ಮಕ ಚಿತ್ರ 'ಮಂತ್ ಆಫ್ ಮಧು' ಮೂಲಕ ಮತ್ತೆ ಪ್ರವೇಶ ಮಾಡಿದ್ದರು. ಇದರ ನಿರ್ದೇಶನ ಮಾಡಿದವರು ಶ್ರೀಕಾಂತ್ ನಾಗೋಟಿ. ಈ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಅದು ಪ್ರೀತಿಗೆ ತಿರುಗಿ ಈಗ ಮದುವೆ ಆಗಿದೆ ಎಂದು ತಿಳಿದುಬಂದಿದೆ.
ಸ್ವಾತಿ ಅವರು, 2018 ರಲ್ಲಿ ಅವರು ಮಲಯಾಳಂ ಮೂಲದ ಪೈಲೆಟ್ ಆಗಿದ್ದ ವಿಕಾಸ್ ವಾಸು ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಅವರು ವೈಯಕ್ತಿಕ ಜೀವನವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು. 2022 ರಲ್ಲಿ ವಿಕಾಸ್ ಅವರಿಂದ ವಿಚ್ಛೇದನ ಪಡೆದಿದ್ದರು. ಸಾಮಾಜಿಕ ಜಾಲತಾಣಗಳಿಂದ ಪತಿಯೊಂದಿಗಿನ ಫೋಟೋಗಳನ್ನು ತೆಗೆದುಹಾಕಿದ್ದರಿಂದ ವಿಷಯ ಬೆಳಕಿಗೆ ಬಂದಿತ್ತು.
56
ಡೇಂಜರ್ ಸಿನಿಮಾ ಮೂಲಕ ಎಂಟ್ರಿ
ಬಳಿಕ ತೆಲುಗಿನ ‘ಡೇಂಜರ್’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಸ್ವಾತಿಗೆ ಅವರು ನಟಿಸಿದ ಎರಡನೇ ಸಿನಿಮಾ ‘ಆಡುವಾರಿ ಮಾಟಲಕು ಅರ್ಥಾಲೆ ವೇರುಲೆ’ ಸಿನಿಮಾದಲ್ಲಿ ದೊಡ್ಡ ಯಶಸ್ಸು ಸಿಕ್ಕಿತು. ಆ ಸಿನಿಮಾನಲ್ಲಿ ಸ್ವಾತಿ, ನಾಯಕಿ ತ್ರಿಷಾ ಅವರ ಸಹೋದರಿಯ ಪಾತ್ರದಲ್ಲಿ ನಟಿಸಿದ್ದರು. ಆದರೆ ನಾಯಕಿಗಿಂತಲೂ ಹೆಚ್ಚು ಮಿಂಚಿದರು.
66
ತಮಿಳಿನಲ್ಲಿಯೇ ಸೈ
ತೆಲುಗು ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲೂ ಸ್ವಾತಿ ತಮ್ಮದೇ ಛಾಪು ಮೂಡಿಸಿದ್ದಾರೆ. ವಿಶೇಷವಾಗಿ 'ಸುಬ್ರಮಣ್ಯಪುರಂ' ಚಿತ್ರದ ನೈಜ ಅಭಿನಯಕ್ಕೆ ಅವರು ಅಪಾರ ಮೆಚ್ಚುಗೆ ಪಡೆದಿದ್ದರು. ಟಾಲಿವುಡ್ ಮತ್ತು ಕಾಲಿವುಡ್ ಎರಡರಲ್ಲೂ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಸ್ವಾತಿ, ಅಭಿನಯದ ಜೊತೆಗೆ ಸರಳ ವ್ಯಕ್ತಿತ್ವದಿಂದಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.