Divorce Photoshoot: ಮದುವೆ ಬಟ್ಟೆ ಸುಟ್ಟು ಸಂಭ್ರಮಿಸಿದ ಮಹಿಳೆ, ಫೋಟೋಸ್ ವೈರಲ್

Published : Apr 14, 2023, 03:05 PM IST

ಇತ್ತೀಚಿಗೆ ವೆಡ್ಡಿಂಗ್‌ ಪೋಟೋಶೂಟ್‌ಗಳು ಹೆಚ್ಚು ಫೇಮಸ್ ಆಗ್ತಿವೆ. ಮದುವೆಗಿಂತಲೂ ಹೆಚ್ಚು ಹಣವನ್ನು ಫೋಟೋಶೂಟ್‌ಗಾಗಿ ವ್ಯಯಿಸಲಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಮದ್ವೆ ಫೋಟೋಶೂಟ್‌ ಬದ್ಲು ಡಿವೋರ್ಸ್ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

PREV
18
Divorce Photoshoot: ಮದುವೆ ಬಟ್ಟೆ ಸುಟ್ಟು ಸಂಭ್ರಮಿಸಿದ ಮಹಿಳೆ, ಫೋಟೋಸ್ ವೈರಲ್

ಸೋಷಿಯಲ್ ಮೀಡಿಯಾ ಬಂದ ನಂತರ ಫೋಟೋಶೂಟ್ ಟ್ರೆಂಡ್ ತುಂಬಾ ಜನಪ್ರಿಯವಾಗಿದೆ. ಫೋಟೋಶೂಟ್‌ನ್ನು ಮದುವೆಯ ಒಂದು ಪ್ರಮುಖ ಭಾಗವೆಂದೇ ಪರಿಗಣಿಸಲಾಗುತ್ತದೆ. ಸಖತ್ತಾಗಿ ಡ್ರೆಸ್ ಮಾಡಿದ ವಧು-ವವರು, ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಈ ಫೋಟೋಶೂಟ್‌ಗಾಗಿ ಡಿಫರೆಂಟ್‌ ಥೀಮ್‌ನ್ನು ಸಹ ಆಯ್ದುಕೊಳ್ಳುತ್ತಾರೆ. ಬಳಿಕ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. 

28

ಹುಟ್ಟುಹಬ್ಬ, ನಿಶ್ಚಿತಾರ್ಥ, ಮದುವೆ, ಪ್ರೆಗ್ನೆನ್ಸಿಯ ಹೀಗೆ ಹಲವು ಸಂದರ್ಭಗಳಲ್ಲಿ ಇಂಥಾ ಫೋಟೋಶೂಟ್ ಮಾಡಿಕೊಳ್ಳಲಾಗುತ್ತದೆ. ಹಲವರು ಫೋಟೋಶೂಟ್‌ಗಳನ್ನು ಅತ್ಯಗತ್ಯವೆಂದು ಪರಿಗಣಿಸುತ್ತಾರೆ ಮತ್ತು ಅದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಮದುವೆಯ ಫೋಟೋಶೂಟ್‌ಗಳು ಮತ್ತು ಹುಟ್ಟುಹಬ್ಬದ ಫೋಟೋಶೂಟ್‌ಗಳು ಈಗ ನಮಗೆ ತುಂಬಾ ಪರಿಚಿತವಾಗಿವೆ. ಆದರೆ ಇಲ್ಲೊಬ್ಬ ಯುವತಿ ವಿಚ್ಛೇದನದ ಸಂಭ್ರಮದಲ್ಲಿ ಫೋಟೋ ಶೂಟ್ ಮಾಡಿಕೊಂಡಿದ್ದಾಳೆ. ಆ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗಿವೆ.

38

ಮಹಿಳೆಯ ಹೆಸರು ಲಾರೆನ್ ಬ್ರೂಕ್. ಅವರ ವಿಚ್ಛೇದನದ ಫೋಟೋಶೂಟ್ ಚಿತ್ರಗಳು 'ಪ್ಯುಬಿಟಿ' ಪುಟದಲ್ಲಿ ಕಾಣಿಸಿಕೊಂಡಿವೆ. ಲಾರೆನ್ ಬ್ಲಡ್ ರೆಡ್‌ ಬಣ್ಣದ ಸುಂದರವಾದ ಗೌನ್ ಧರಿಸಿ ಫೋಟೋಶೂಟ್‌ಗೆ ಆಗಮಿಸಿದ್ದಾರೆ. ಮಹಿಳೆ ಡಿವೋರ್ಸ್ ಎಂಬ ಬ್ಯಾಂಡ್ ಧರಿಸಿರುವುದನ್ನು ಸಹ ಫೋಟೋದಲ್ಲಿ ನೋಡಬಹುದು. 

48

ಫೋಟೋಶೂಟ್‌ನ ಪ್ರತಿ ಫೋಟೋ ತುಂಬಾ ಆಸಕ್ತಿದಾಯಕವಾಗಿದೆ. ಮಹಿಳೆ ಮದುವೆಯ ಉಡುಪನ್ನು ಸುಡುವುದು, ಮದುವೆಯ ಫೋಟೋವನ್ನು ಕಾಲಿನಿಂದ ತುಳಿಯುವುದು, ಡಿವೋರ್ಸ್ ಪಡೆದುಕೊಂಡ ಖುಷಿಯಲ್ಲಿ ಪಾರ್ಟಿ ಮಾಡುವುದು ಮೊದಲಾದ ಫೋಟೋವನ್ನು ಇಲ್ಲಿ ನೋಡಬಹುದು. ಬ್ರೂಕ್ ತನ್ನ ತಾಯಿ ಮತ್ತು ಸ್ನೇಹಿತರ ಸಹಾಯದಿಂದ ಫೋಟೋಶೂಟ್ ಮಾಡಿದರು.

58

ಫೋಟೋಗೆ ಶೀರ್ಷಿಕೆಯಾಗಿ ಮಹಿಳೆ, 'ಕಳೆದ ವರ್ಷವು ಕಷ್ಟಕರವಾಗಿತ್ತು ಆದರೆ ನಾನು ಆ ದಿನಗಳನ್ನು ದಾಟಿ ಬಂದಿದ್ದೇನೆ. ಈ ಫೋಟೋ ಶೂಟ್ ನಾನು ಪ್ಲಾನ್ ಮಾಡಿರಲ್ಲಿಲ್ಲ. ಆದರೂ ಎಲ್ಲವೂ ಮಾಡಿದ್ದೇನೆ. ಇದೆಲ್ಲವೂ ನನಗೆ ಖುಷಿ ನೀಡಿದೆ' ಎಂದು ತಿಳಿಸಿದ್ದಾರೆ.

68

ಮಾತ್ರವಲ್ಲ 'ವಿಚ್ಛೇದನವು ಕಠಿಣವಾಗಿದೆ. ನಾನು ಮದುವೆಯಾಗುವ ಸಂದರ್ಭದಲ್ಲಿ ನಾನು ಸಹ ಡಿವೋರ್ಸ್ ಪಡೆದುಕೊಳ್ಳುವೆನೆಂದು ನಾನು ಅಂದುಕೊಂಡಿರಲ್ಲಿಲ್ಲ. ಯಾರಿಗಾದರೂ ಹಾಗಾಗಲಿ ಎಂದು ನಾನು ಬಯಸುವುದಿಲ್ಲ. ಆದರೆ ನನ್ನ ಡಿವೋರ್ಸ್ ಆಗಿದೆ. ಆದರೆ ನಾನು ಖುಷಿಯಿಂದ ಫೋಟೋ ಶೂಟ್ ಮಾಡಿಕೊಂಡಿದ್ದೇನೆ. ನನಗೆ ತುಂಬಾ ಖುಷಿಯಿದೆ' ಎಂದು ಲಾರೆನ್ ಬ್ರೂಕ್ ಹೇಳಿಕೊಂಡಿದ್ದಾರೆ.

78

ವಿಭಿನ್ನವಾದ ಫೋಟೋಶೂಟ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬ್ರೂಕ್ ಮಾಡಿದ ಕೆಲಸ ಅನೇಕರಿಗೆ ಸ್ಫೂರ್ತಿ ನೀಡಿತು. ಹಲವರು ಇದಕ್ಕೆ ಮೆಚ್ಚುಗೆ ಸೂಚಿಸಿ ನಾನು ಯಾವತ್ತೋ ನಿಮ್ಮನ್ನು ಫಾಲೋ ಮಾಡಬೇಕಿತ್ತು ಎಂದಿದ್ದಾರೆ. 

88

ಕೆಲವರು ವಿಚ್ಛೇದನದ ಸಂದರ್ಭ ಈ ರೀತಿ ಕಾಮೆಂಟ್ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಕೆಲವರು, 'ವಿಚ್ಛೇದನ ಎನ್ನುವುದು ಎಷ್ಟೋ ಜನರ ಜೀವನದಲ್ಲಿ ಹೊಸ ಅಧ್ಯಾಯ, ಅದಕ್ಕಾಗಿ ಫೋಟೋಶೂಟ್ ಮಾಡುವುದರಲ್ಲಿ ತಪ್ಪೇನಿಲ್ಲ' ಎಂದು ಹೇಳಿದ್ದಾರೆ. ಮತ್ತೆ ಕೆಲವರು ಈ ರೀತಿ ಫೋಟೋ ಶೂಟ್ ಮಾಡಿಕೊಂಡಿದ್ದು ತಪ್ಪು. ಇದು ಮಾಜಿ ಪತಿಯನ್ನು ಕೆಟ್ಟದಾಗಿ ಬಿಂಬಿಸುತ್ತದೆ. ಅವರ ಬಗ್ಗೆ ತಪ್ಪು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ' ಎಂದಿದ್ದಾರೆ.

Read more Photos on
click me!

Recommended Stories