WWF ಟ್ರೇಡಿಂಗ್ ಕಾರ್ಡ್ (WWF trading card)
ಈ ಆಟದ ಮಜಾನೆ ಬೇರೆ. ಈ ಆಟವಿಲ್ಲದೆ ಯಾರ ಬಾಲ್ಯವೂ ಪೂರ್ಣಗೊಳ್ಳಲು ಸಾಧ್ಯವಿಲ್ಲ. WWF - ವರ್ಲ್ಡ್ ವ್ರೆಸ್ಲಿಂಗ್ ಫೆಡರೇಶನ್ (ಈಗ WW ಎಂದು ಕರೆಯಲ್ಪಡುತ್ತದೆ) ನಾವೆಲ್ಲರೂ ನಂಬುವ ವಿಷಯವಾಗಿತ್ತು, ರೆಸ್ಲರ್ ಗಳ ಕಾರ್ಡ್ ಗಳನ್ನು ಇಟ್ಟುಕೊಂಡು, ಆ ಸೂಪರ್ಸ್ಟಾರ್ಗಳು ಎತ್ತರ, ತೂಕ, ಬೈಸೆಪ್ಸ್ , ಎಷ್ಟು ಸಲವಿನ್ ಆಗಿದ್ರೂ ಇದೆಲ್ಲವನ್ನು ಇಟ್ಕೊಂಡು ಕಾರ್ಡ್ಸ್ ರೀತಿ ಆಡುತ್ತಿದುದರ ಮಜಾನೆ ಬೇರೆ. ಕೊನೆಗೆ ಯಾರ ಬಳಿ ಜಾಸ್ತಿ ಕಾರ್ಡ್ಸ್ ಇರುತ್ತಿತ್ತೋ ಅವರೇ ಸೂಪರ್ ಸ್ಟಾರ್ ಆಗುತ್ತಿದ್ರು.