ದೈಹಿಕ ಕಿರುಕುಳ (Physical abuse)
ಹೊಡೆಯುವುದು, ಕಪಾಳಮೋಕ್ಷ ಮಾಡುವುದು ಅಥವಾ ಒದೆಯುವುದು ಮುಂತಾದ ಯಾವುದೇ ರೀತಿಯ ದೈಹಿಕ ಹಿಂಸೆಯನ್ನು ವೈವಾಹಿಕ ಜೀವನದಲ್ಲಿ ಎಂದಿಗೂ ಸ್ವೀಕರಿಸಬಾರದು. ನಿಮ್ಮ ಸಂಗಾತಿಯು ದೈಹಿಕ ಹಿಂಸೆಯನ್ನು ನೀವು ಸಹಿಸಿಕೊಂಡೇ ಹೋದರೆ, ಅದರಿಂದ ನಿಮ್ಮ ಜೀವನವೇ ಕೊನೆಯಾಗಬಹುದು.
ಭಾವನಾತ್ಮಕ ನಿಂದನೆ (Emotional Abuse)
ನಿರಂತರ ಟೀಕೆಗಳು, ಅವಮಾನಗಳು, ಕೀಳುಮಟ್ಟದ ನಿಂದನೆ ಇದು ನಿಮ್ಮ ಮಾನಸಿಕ ಆರೋಗ್ಯ (Mental Health), ಸ್ವಾಭಿಮಾನ (Self Esteem) ಮತ್ತು ಯೋಗಕ್ಷೇಮದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರಬಹುದು. ಇದನ್ನೆಲ್ಲಾ ಯಾವತ್ತೂ ಕೇಳಿಕೊಂಡು ಸುಮ್ಮನಿರಬೇಡಿ.
ದಾಂಪತ್ಯ ದ್ರೋಹ (Infidelity)
ನಿಮ್ಮ ಸಂಗಾತಿಗೆ ಮೋಸ ಮಾಡುವುದರಿಂದ ಮದುವೆಯನ್ನು ಸರಿಪಡಿಸಲಾಗದಷ್ಟು ಹಾನಿಗೊಳಿಸಬಹುದು. ಆದುದರಿಂದ ಯಾವತ್ತೂ, ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡುವಂತಹ ಯೋಚನೆ ಮಾಡಲೇಬೇಡಿ.
ನಿಮ್ಮನ್ನು ಕಂಟ್ರೋಲ್ ಮಾಡೋದು (controling behaviour)
ಸಂಗಾತಿಯು ನಿಮ್ಮ ಪ್ರತಿಯೊಂದು ಚಲನೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಅದು ಅನಾರೋಗ್ಯಕರ ಸಂಬಂಧದ ಸಂಕೇತವಾಗಿದೆ, ಅದನ್ನು ನೀವು ಎಂದಿಗೂ ಸಹಿಸಬಾರದು. ನಿಮ್ಮ ಸ್ವಾತಂತ್ರ್ಯ ನಿಮಗೆ ನೀಡುವ ಸಂಗಾತಿಯ ಆಯ್ಕೆ ಮಾಡಿ.
ವ್ಯಸನ (Drug Addiction)
ಮಾದಕದ್ರವ್ಯದ ದುರುಪಯೋಗ, ಜೂಜಾಟ, ಅಥವಾ ಇನ್ನಾವುದೇ ವ್ಯಸನವು ಮದುವೆಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಬಹುದು. ಆದ್ದರಿಂದ, ನಿಮ್ಮ ಸಂಗಾತಿಯು ಇದರಲ್ಲಿ ಆಸಕ್ತಿ ಹೊಂದಿದ್ದರೆ, ನಿಮ್ಮ ನಿರ್ಧಾರದ ಬಗ್ಗೆ ಮತ್ತೆ ಯೋಚಿಸಿ. ಇಂತಹ ವ್ಯಸನಿಗಳ ಜೊತೆಗೆ ಬಾಳುವ ಯೋಚನೆಯೇ ಬೇಡ.
ನಿರ್ಲಕ್ಷ್ಯ (neglect)
ನಿಮ್ಮ ಸಂಗಾತಿಯು ನಿರಂತರವಾಗಿ ನಿಮ್ಮ ಅಗತ್ಯಗಳನ್ನು ನಿರ್ಲಕ್ಷಿಸಿದರೆ ಅಥವಾ ವಾತ್ಸಲ್ಯವನ್ನು ತೋರಿಸಲು ವಿಫಲವಾದರೆ, ಅದು ಒಂಟಿತನದ ಭಾವನೆಗಳಿಗೆ ಕಾರಣವಾಗಬಹುದು. ನಿಮ್ಮನ್ನು ಕೇರ್ ಮಾಡದ ವ್ಯಕ್ತಿ ಜೊತೆ ಇದ್ದರೂ ಪ್ರಯೋಜನವಿಲ್ಲ.
ಅಗೌರವ (disrespect)
ಸಂಗಾತಿಯು ನಿಮ್ಮನ್ನು, ನಿಮ್ಮ ಅಭಿಪ್ರಾಯಗಳನ್ನು ಅಥವಾ ನಿಮ್ಮ ಭಾವನೆಗಳನ್ನು ನಿರಂತರವಾಗಿ ಅಗೌರವಗೊಳಿಸಿದರೆ, ಅದು ಉತ್ತಮ ವೈವಾಹಿಕ ಜೀವನದ ಲಕ್ಷಣ ಅಲ್ವೇ ಅಲ್ಲ. ಇದರ ಬಗ್ಗೆ ನೀವು ಹಿರಿಯರ ಜೊತೆ ಕುಳಿತು ಮಾತನಾಡೋದು ಉತ್ತಮ.
ಅಪ್ರಾಮಾಣಿಕತೆ (dishonesty)
ವಿವಾಹವು ಪ್ರಾಮಾಣಿಕತೆ ಮತ್ತು ನಂಬಿಕೆಯ ಆಧಾರದ ಮೇಲೆ ನಿಂತಿದೆ. ಆದರೆ ಮದುವೆಯಲ್ಲಿ ಸುಳ್ಳು ಮತ್ತು ಗೌಪ್ಯತೆ ಇದ್ದರೆ, ಅದು ಕುಸಿಯಲು ಪ್ರಾರಂಭಿಸುತ್ತದೆ. ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮ ಬಳಿ ಸುಳ್ಳು ಹೇಳುತ್ತಿದ್ದಾರೆ, ಅಪ್ರಮಾಣಿಕವಾಗಿದ್ದಾರೆ ಎಂದು ಅನಿಸಿದರೆ, ಅದನ್ನು ಸರಿಪಡಿಸಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ಸಂಬಂಧದಿಂದ ಹೊರ ಬನ್ನಿ.