2 ವರ್ಷದಲ್ಲಿ 9 ಮಕ್ಕಳ ತಾಯಿಯಾದ ಮಹಿಳೆ : ರೋಮ್ಯಾನ್ಸ್‌ಗೂ ಟೈಮ್‌ ಇಲ್ಲ!

First Published Sep 5, 2020, 5:33 PM IST

ಪೆನ್ಸಿಲ್ವೇನಿಯಾದ ದಂಪತಿಗಳು ಮದುವೆಯ ನಂತರ ಮಗುವಿಗೆ ಹಾತೊರೆಯುತ್ತಿದ್ದರು. ಹಲವಾರು ಪ್ರಯತ್ನಗಳ ನಂತರವೂ ಮಗು  ಆಗಿರಲಿಲ್ಲ. ಇದರ ನಂತರ 2017 ರಲ್ಲಿ 4 ಮಕ್ಕಳನ್ನು ನೋಡಿಕೊಳ್ಳಲು ಪ್ರಾರಂಭಿಸಿದರು. ಅವುಗಳ ಸಾಕು ಪೋಷಕರಾದರು. ಒಂದು ವರ್ಷದ ನಂತರ,  ಐವಿಎಫ್‌ ಮೂಲಕ ಮಗನಿಗೆ ಜನ್ಮ ನೀಡಿದಳು. ಮಗನ ಜನನದಿಂದ ಸಂತಸಗೊಂಡ ಈ ದಂಪತಿಗಳು 4 ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಂಡರು. ಈಗಾಗಲೇ 5 ಮಕ್ಕಳ ಪೋಷಕರಾದ  ಈ ದಂಪತಿಗಳ ಜೀವನದಲ್ಲಿ ಮತ್ತೊಂದು ಆಶ್ಚರ್ಯಕರ ಸುದ್ದಿ ಬಂತು. ಮಾಕ್ಸೀನ್‌ ಮತ್ತೆ ಗರ್ಭಿಣಿಯಾದಳು. ಈ ಬಾರಿ  ನಾಲ್ಕು ಮಕ್ಕಳ ತಾಯಿ ಆಗಲಿದ್ದಳು. ಅಂದರೆ, ಎರಡು ವರ್ಷಗಳಲ್ಲಿ, ಈ ದಂಪತಿಗಳು 9 ಮಕ್ಕಳ ಪೋಷಕರಾದರು.

ಪೆನ್ಸಿಲ್ವೇನಿಯಾದ ಮ್ಯಾಕ್ಸಿನ್ ಮತ್ತು ಜೇಕ್, ಮದುವೆಯಾದ ಹಲವಾರು ವರ್ಷಗಳಿಂದ ಮಗುವನ್ನು ನಿರೀಕ್ಷಿಸುತ್ತಿದ್ದರು. ಅನೇಕ ಪ್ರಯತ್ನಗಳು ಮತ್ತು ಅನೇಕ ಚಿಕಿತ್ಸೆಗಳ ನಂತರವೂ ಅವಳು ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಅದ್ದರಿಂದ ನಾಲ್ಕು ಮಕ್ಕಳನ್ನು ಸಾಕಲು ಪ್ರಾರಂಭಿಸಿದರು.
undefined
2018 ರಲ್ಲಿ ಐವಿಎಫ್ ಮೂಲಕ ಅವಳು ಮಗನಿಗೆ ಜನ್ಮ ನೀಡಿದಳು. ಇಬ್ಬರೂ ತುಂಬಾ ಸಂತೋಷದಿಂದ ನಾಲ್ಕು ಮಕ್ಕಳನ್ನು ದತ್ತು ಪಡೆದರು.
undefined
ಕೆಲವು ದಿನಗಳ ನಂತರ, ಮ್ಯಾಕ್ಸಿನ್ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ಆಸ್ಪತ್ರೆಗೆ ಹೋದಾಗ, ಅವಳು ಗರ್ಭಿಣಿ ಎಂದು ತಿಳಿಯಿತು. ಒಂದು ಅಥವಾ ಎರಡು ಅಲ್ಲ ನಾಲ್ಕು ಮಕ್ಕಳಿಗೆ ತಾಯಿ ಆಗಲಿರುವ ವಿಷಯ ತಿಳಿಯಿತು. ಇದನ್ನು ಕೇಳಿದ ನಂತರ ದಂಪತಿಗಳ ಸಂತೋಷಕ್ಕೆ ಮಿತಿಯೇ ಇರಲಿಲ್ಲ.
undefined
ಜುಲೈ 31 ರಂದು ಮ್ಯಾಕ್ಸಿನ್ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು. ಅವುಗಳಲ್ಲಿ ಎರಡು ತುಂಬಾ ದುರ್ಬಲವಾಗಿದ್ದು, ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಬ್ಬರು ಮನೆಗೆ ಬಂದಿದ್ದಾರೆ.
undefined
ಮಗುವಿಗೆ ಹಂಬಲಿಸುತ್ತಿದ್ದ ದಂಪತಿಗಳಿಗೆ, ದೇವರು ಕೇವಲ ಎರಡು ವರ್ಷಗಳಲ್ಲಿ 9 ಮಕ್ಕಳನ್ನು ಪಾಲಿಸಿದ್ದಾನೆ. ಕಪಲ್ ತಮ್ಮ ಕಥೆಯನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ಮಕ್ಕಳೊಂದಿಗೆ ಸಾಕಷ್ಟು ಸಂತೋಷವಾಗಿದ್ದಾರೆ.
undefined
ಆದಾಗ್ಯೂ, ಮ್ಯಾಕ್ಸಿನ್ ಪ್ರಕಾರ, ಅವರ ಜೀವನವು ಈಗ ಸಾಕಷ್ಟು ಬದಲಾಗಿದೆ. ಈಗ ಜೀವನವು ಮಕ್ಕಳ ಸುತ್ತ ಸುತ್ತುತ್ತದೆ. ತನ್ನ ಗಂಡನ ಜೊತೆ ಕಾಲ ಕಳೆಯಲು ಸಮಯವಿಲ್ಲವಾಗಿದೆ ಈಗ.
undefined
2016 ರಲ್ಲಿ ಮದುವೆಯಾದ ನಂತರ, ಅವರು ಮಗುವಿಗೆ ಪ್ರಯತ್ನಿಸಲು ಪ್ರಾರಂಭಿಸಿದರು. ಅವರು ವಿಫಲವಾದಾಗ, 4 ಮಕ್ಕಳನ್ನು ಬೆಳೆಸಲು ಪ್ರಾರಂಭಿಸಿದರು. ನಂತರವೇ ದಂಪತಿಗಳು ಕಾನೂನುಬದ್ಧವಾಗಿ ಅವರನ್ನು ದತ್ತು ಪಡೆದರು.
undefined
ಈಗ, 11 ಜನರ ಕುಟುಂಬದೊಂದಿಗೆ, ಅವರ ಮನೆ ದಿನನಿತ್ಯದ ಚಟುವಟಿಕೆಗಳಿಂದ ತುಂಬಿದೆ. ಜೇಕ್ ಪ್ರಕಾರ, ಅವರು ಯಾವಾಗಲೂ ಮಕ್ಕಳನ್ನು ಪ್ರೀತಿಸುತ್ತಿದ್ದರು. ಆದರೆ ಅವರು 9 ಮಕ್ಕಳ ಪೋಷಕರಾಗುತ್ತಾರೆ ಎಂದು ಅವರು ಎಂದಿಗೂ ಭಾವಿಸಿರಲಿಲ್ಲ.
undefined
ವೈದ್ಯರು ಮ್ಯಾಕ್ಸಿನ್ ಗರ್ಭಧಾರಣೆಯನ್ನು ಪವಾಡ ಎಂದೂ ಕರೆಯುತ್ತಾರೆ. ಮೊದಲಿಗೆ ಅವಳು ಗರ್ಭಿಣಿಯಾಗಿರಲಿಲ್ಲ. ಇದ್ದಕ್ಕಿದ್ದಂತೆ, ಅವರು ನಾಲ್ಕು ಮಕ್ಕಳನ್ನು ಸ್ವಾಭಾವಿಕ ರೀತಿಯಲ್ಲಿ ಗರ್ಭಧರಿಸಿದರು. ಇದು ನಿಜಕ್ಕೂ ಆಶ್ಚರ್ಯಕರವಾಗಿದೆ.
undefined
ಈಗ ಈ ದಂಪತಿಸಂಪೂರ್ಣ ಸಮಯಮಕ್ಕಳೊಂದಿಗೆ ಕಳೆಯುತ್ತಿದ್ದಾರೆ.ದಂಪತಿಗಳು ಒಬ್ಬರಿಗೊಬ್ಬರು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸುತ್ತಾರೆ, ಆದರೆ ಅವರು ತಮ್ಮ ಮಕ್ಕಳೊಂದಿಗೆ ಸಾಕಷ್ಟು ಸಂತೋಷವಾಗಿದ್ದಾರೆ.
undefined
click me!