ಕೇಳಿದ್ರೆ ಕರಗ್ತೀರಿ; ಮಗಳು ಹಂಚಿಕೊಂಡ ಅಪ್ಪಅಮ್ಮನ ಅಚ್ಚಳಿಯದ ಪ್ರೀತಿ

First Published Sep 4, 2020, 7:13 PM IST

ಪ್ರೀತಿಸುವ ಜೋಡಿಗಳಿಗೆ ನೆನೆಸಿಕೊಂಡರೇ ನಡುಕ ಹುಟ್ಟಿಸುವ ಸಂಗತಿಯೆಂದರೆ ಪ್ರೀತಿಸುವ ಜೀವ ದೂರಾಗುವುದು. ಒಟ್ಟಿಗೇ ಬದುಕೋಣ, ಒಟ್ಟಿಗೇ ಸಾಯೋಣ ಎಂದು ಹಲವು ಪ್ರೇಮಿಗಳು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ, ಬದುಕಿನ ಯೋಜನೆ ಎಲ್ಲರಿಗೂ ಒಂದೇ ಇರುವುದಿಲ್ಲ. ಈ ಜೋಡಿ ವಿಷಯದಲ್ಲಿ ಮಾತ್ರ ಪ್ರೀತಿಯೇ ಅವರನ್ನು ಬದುಕು ಹಾಗೂ ಸಾವಿನಲ್ಲೂ ಒಂದಾಗಿಸಿದೆ. ಹ್ಯೂಮನ್ಸ್ ಆಫ್ ನ್ಯೂಯಾರ್ಕ್ ಪೇಜ್‌ನಲ್ಲಿ ಪ್ರಕಟವಾಗಿರುವ ಈ ಹಿರಿಯ ಜೋಡಿಯ ಸುಂದರ ಪ್ರೀತಿಯನ್ನು ಸ್ವತಃ ಮಗಳೇ ಹಂಚಿಕೊಂಡಿದ್ದಾಳೆ. ಇಂಥ ಕತೆ ಕೇಳಿದಾಗೆಲ್ಲ ಪ್ರೀತಿಯ ಮೇಲಿನ ಭರವಸೆ ಮತ್ತಷ್ಟು ಹೆಚ್ಚಾಗುತ್ತದೆ. ಮಗಳು ಹೇಳಿದ ಲವ್ ಸ್ಟೋರಿ ಆಕೆಯ ದನಿಯಲ್ಲೇ ಕೇಳಿ.

ಅಪ್ಪ ಬಿಸ್ನೆಸ್ ಟ್ರಿಪ್ ಮುಗಿಸಿ ಮನೆಗೆ ಬಂದಾಗೆಲ್ಲ ನಾವೈದು ಹೆಣ್ಣುಮಕ್ಕಳು ಅಪ್ಪನಿಗೆ ಕಿಸ್ ಮಾಡಲು ಸಾಲಿನಲ್ಲಿ ನಿಲ್ಲುತ್ತಿದ್ದೆವು. ಆದರೆ, ಅಪ್ಪ ಮಾತ್ರ ಯಾವತ್ತೂ ಮೊದಲು ಅಮ್ಮನಿಗೆ ಕಿಸ್ ಮಾಡಿಯೇ ನಮ್ಮತ್ತ ಬರುತ್ತಿದ್ದುದು.
undefined
ವೀಕೆಂಡ್ ಬಂದರೆ ರೋಡ್‌ಟ್ರಿಪ್ ಹೋಗುತ್ತಿದ್ದೆವು. ಆಗೆಲ್ಲ ದಾರಿಯುದ್ದಕೂ ಅಪ್ಪ ಅಮ್ಮನಿಗಾಗಿ ಬಾಲಿವುಡ್‌ನ ಪ್ರೇಮಗೀತೆಗಳನ್ನು ಹಾಡುತ್ತಲೇ ಇರುತ್ತಿದ್ದ. ಅಮ್ಮನೂ ಈ ಸಂದರ್ಭದ ಪ್ರತಿ ಸೆಕೆಂಡ್‌ಗಳನ್ನೂ ಎಂಜಾಯ್ ಮಾಡುತ್ತಿದ್ದಳು. ನಮ್ಮ ಮುಸ್ಲಿಂ ಕುಟುಂಬಗಳಲ್ಲಿ ಇದು ಸಾಮಾನ್ಯ ಸಂಗತಿಯಲ್ಲದಿದ್ದರೂ ನಮಗಂತೂ ಇದು ಬಹಳ ಸಾಮಾನ್ಯ ದೃಶ್ಯವಾಗಿತ್ತು.
undefined
ಅಮ್ಮ ಅಪ್ಪನಿಗಾಗಿಯೇ ಪ್ರತಿ ದಿನ ಡ್ರೆಸ್ ಮಾಡಿಕೊಳ್ಳುತ್ತಿದ್ದಳು. ಬೈಟ್ ರೆಡ್ ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಿದ್ದಳು. ಅಪ್ಪನಿಗಿಷ್ಟವಾದ ರೀತಿಯಲ್ಲಿ ತಲೆ ಬಾಚಿಕೊಳ್ಳುತ್ತಿದ್ದಳು. ಆಕೆಗೆ ಅನಾರೋಗ್ಯ ಕಾಡಿದಾಗಲೂ ಅವಳು ಈ ಅಭ್ಯಾಸ ಬಿಡಲಿಲ್ಲ.
undefined
ಕನಸಿನಂತೆ ಸಾಗುತ್ತಿದ್ದ ಈ ಪರ್ಫೆಕ್ಟ್ ಲವ್ ಸ್ಟೋರಿಗೆ ಕಲ್ಲು ಹಾಕಿದ್ದು ಅಮ್ಮನಲ್ಲಿ ಕಾಣಿಸಿಕೊಂಡ ಬ್ರೇನ್ ಟ್ಯೂಮರ್. ಸರ್ಜರಿ ಮೇಲೆ ಸರ್ಜರಿಯಾಗುತ್ತಿದ್ದಂತೆ ಅಮ್ಮ ಬಳಲುತ್ತಲೇ ಹೋದಳು. ಆಕೆಗೆ ಕುಂಟಿ ನಡೆಯುವುದು ಅವಮಾನ ಎನಿಸಿದಾಗ ಅಪ್ಪ ಅವಳ ಕೈ ಹಿಡಿದು ನಡೆಸಿದ.
undefined
ಆತ ಆಕೆಯ ಬೆಡ್ ಪಕ್ಕದಲ್ಲೇ ಪ್ರತಿ ಕ್ಷಣ ಕುಳಿತು ಅವಳ ಕೆನ್ನೆಯ ಮೇಲೆ ಕೈಯಾಡಿಸುತ್ತಾ ತುಟಿ ಒಣಗುವವರೆಗೂ ಕುರಾನ್ ಓದುತ್ತಿದ್ದ. ಕೆಲ ರಾತ್ರಿಗಳು ಆತ ಕುಳಿತಲ್ಲಿಯೇ ತೂಕಡಿಸಿದರೂ ಎಚ್ಚರಾದ ಕೂಡಲೇ ಮತ್ತೆ ಅಮ್ಮನಿಗಾಗಿ ಪ್ರಾರ್ಥನೆಯಲ್ಲಿ ತೊಡಗುತ್ತಿದ್ದ.
undefined
ಅಮ್ಮ ಕೊನೆಯುಸಿರೆಳೆವ ಸಂದರ್ಭದಲ್ಲಿ ಅಪ್ಪ ಅವಳ ಹತ್ತಿರ ಬಾಗಿ, 'ನೀನು ಒಂಟಿಯಲ್ಲ, ನಾನು ಕೂಡಾ ನಿನ್ನೊಂದಿಗೆ ಬರುತ್ತೇನೆ' ಎಂದು ಪಿಸುಗುಟ್ಟಿದ.
undefined
ಅಪ್ಪ ಹೇಳಿದ್ದನ್ನು ನಾನು ಕೇಳಿಸಿಕೊಂಡೆ. ನನಗೆ ಅಪ್ಪ ಸ್ವಾರ್ಥಿಯಾಗಿ ಕಂಡ. ಆತನ ಮಕ್ಕಳ ಬಗ್ಗೆ ಯೋಚನೆಯೇ ಇಲ್ಲವಲ್ಲ ಎನಿಸಿತು. ಆದರೆ, ಅದಾಗಲೇ ನಾವು ಮಕ್ಕಳೆಲ್ಲ ಬೆಳೆದು ನಮ್ಮದೇ ಕುಟುಂಬಗಳನ್ನು ಹೊಂದಿದ್ದೆವು. ಆತನಿಗೆ ಅಮ್ಮನಿಲ್ಲದೆ ಜಗತ್ತಲ್ಲಿ ತನಗಾಗಿ ಏನೂ ಇಲ್ಲ ಎನಿಸತೊಡಗಿತು.
undefined
ಅಮ್ಮ ಹೋದ ಬಳಿಕ ಅಪ್ಪ ಆಕೆಯ ಸಮಾಧಿಗೆ ಪ್ರತಿದಿನ ಭೇಟಿ ನೀಡುತ್ತಿದ್ದ. ಸಮಾಧಿಯ ಪಕ್ಕದ ಜಾಗ ತನಗೆ ಬೇಕೆಂದು ಅರ್ಜಿ ಸಲ್ಲಿಸಿದ. ಈ ಕುರಿತ ಪೇಪರ್‌ವರ್ಕ್ ಮುಗಿವವರೆಗೂ ಫೋನ್ ಮಾಡಿ ವಿಚಾರಿಸುತ್ತಿದ್ದ. ದಾಖಲೆಗಳು ಮನೆಗೆ ಬಂದ ಬಳಿಕ ಎರಡು ದಿನ ಆತ ಏನೂ ಮಾತಾಡಲಿಲ್ಲ.
undefined
ಮೂರನೇ ದಿನ ತನಗೆ ಹುಷಾರಿಲ್ಲ ಎಂದ. ಅವನ ಶೂ ಹಾಕಿಕೊಳ್ಳಲು ನಾನು ಸಹಾಯ ಮಾಡುವಷ್ಟರಲ್ಲಿ ಕುಸಿದು ನೆಲಕ್ಕೆ ಬಿದ್ದ. ಆ್ಯಂಬುಲೆನ್ಸ್ ಬರುವ ವೇಳೆಗಾಗಲೇ ಅಪ್ಪ ಅಮ್ಮನನ್ನು ಸೇರಿದ್ದ.
undefined
click me!