ಬೇಡ ಬೇಡ ಅಂತ ಮನಸ್ಸು ಹೇಳ್ತಿದ್ರೂ… ಇಂಥ ಹುಡುಗರ ಕಡೆ ಹುಡುಗೀರ ಹೃದಯ ವಾಲೋದು ಖಚಿತ

Published : Jun 06, 2024, 06:11 PM IST

ಸ್ನೇಹದಿಂದ ಆರಂಭವಾಗೋ ಸಂಬಂಧ ಪ್ರೀತಿಯಾಗಿ ಯಾವಾಗ ಬದಲಾಗುತ್ತೆ ಅನ್ನೋದು ಯಾರಿಗೂ ತಿಳಿದಿಲ್ಲ, ಆದರೆ ಹುಡುಗರ ಈ 5 ಗುಣಗಳು ಮಹಿಳೆಯರಿಗೆ ಅವರ ಮೇಲೆ ಪ್ರೀತಿ ಮೂಡೋ ಹಾಗೆ ಮಾಡುತ್ತೆ. ಅವುಗಳ ಬಗ್ಗೆ ಡಿಟೇಲ್ ಆಗಿ ತಿಳಿಯೋಣ.   

PREV
17
ಬೇಡ ಬೇಡ ಅಂತ ಮನಸ್ಸು ಹೇಳ್ತಿದ್ರೂ… ಇಂಥ ಹುಡುಗರ ಕಡೆ ಹುಡುಗೀರ ಹೃದಯ ವಾಲೋದು ಖಚಿತ

ನಿಮ್ಮಲ್ಲಿ ಹೆಚ್ಚಿನ ಹುಡುಗಿಯರಿಗೆ ಲವ್ ಅಟ್ ಫಸ್ಟ್ ಸೈಟ್ (Love at first sight) ಆಗಿರಬೇಕು ಅಲ್ವಾ? ಅಥವಾ ಆ ಹುಡುಗನನ್ನು ನೋಡಿದ ಕೂಡ್ಲೇ ಇಷ್ಟವಾಗಿರಬಹುದು, ಆದರೆ ಕೆಲವು ಹುಡುಗಿಯರು ಪ್ರೀತಿಸುವ ಬಗ್ಗೆ ಯೋಚಿಸಿರುವುದಿಲ್ಲ, ಪ್ರೀತಿ -ಗೀತಿ ಮಾಡ್ಲೇ ಬಾರ್ದು ಅಂತ ಅಂದ್ಕೊಂಡಿರ್ತಾರೆ. ಆದ್ರೆ ಅವರಿಗೇ ಗೊತ್ತಿಲ್ಲದೇ ಹುಡುಗನೊಬ್ಬನ ಕಡೆಗೆ ಆಕರ್ಷಿತರಾಗ್ತಾರೆ, ಯಾವಾಗ ಲವ್ ಆಗುತ್ತೆ ಅನ್ನೋದೆ ಗೊತ್ತಾಗೋದಿಲ್ಲ. 
 

27

ಯಾಕೆ ಹೀಗೆಲ್ಲಾ ಆಗುತ್ತೆ? ಹುಡುಗರ ಅಂತಹ ಯಾವ ಗುಣಗಳಿಂದ ಹುಡುಗಿಯರು ಸುಲಭವಾಗಿ ಅವರತ್ತ ಆಕರ್ಷಿತರಾಗಿ, ತಮಗೆ ಗೊತ್ತಿಲ್ಲದೇ ಪ್ರೀತಿಯಲ್ಲಿ ಬೀಳ್ತಾರೆ? ಇಂದು ನಾವು ಈ ಲೇಖನದಲ್ಲಿ ಅಂತಹ ಕೆಲವು ವಿಷಯಗಳ ಬಗ್ಗೆ ನಿಮಗೆ ಹೇಳಲಿದ್ದೇವೆ, ಇದನ್ನು ಪ್ರತಿಯೊಬ್ಬ ಹುಡುಗಿ ಹುಡುಗರಲ್ಲಿ ಇಷ್ಟಪಡಲು ಪ್ರಾರಂಭಿಸುತ್ತಾಳೆ. ನಂತರ ಕ್ರಮೇಣ ಆಕೆ ಆ ಹುಡುಗ ಪ್ರೀತಿಯಲ್ಲಿ ಬೀಳೋ ಹಾಗೆ ಆಗುತ್ತೆ, ಅಂತಹ ವಿಷಯಗಳು ಯಾವುವು ನೋಡೋಣ. 
 

37

ಚಿಕ್ಕ ಪುಟ್ಟ ವಿಷ್ಯಗಳನ್ನು ಶೇರ್ ಮಾಡೋದು
ಇಬ್ಬರು ವ್ಯಕ್ತಿಗಳು ಪರಸ್ಪರ ಮಾತನಾಡೋದು ಮತ್ತು ತಮ್ಮ ವಿಷಯಗಳನ್ನು ಹಂಚಿಕೊಳ್ಳೋದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋ ಮೊದಲ ಹೆಜ್ಜೆಯಾಗಿದೆ. ಹೀಗಿರೋವಾಗ ಹುಡುಗ ಹುಡುಗಿಯೊಂದಿಗೆ ಸ್ನೇಹಿತನಂತೆ ಮಾತನಾಡಿದರೆ ಮತ್ತು ಭವಿಷ್ಯದ ಯೋಜನೆ ಬಗ್ಗೆ ಅವರ ಬಳಿ ಮಾತನಾಡೊದಕ್ಕೆ ಪ್ರಾರಂಭಿಸಿದ್ರೆ, ಇಬ್ಬರ ಸಂಬಂಧವು ಗಾಢವಾಗಲು ಪ್ರಾರಂಭಿಸುತ್ತದೆ.  ಸ್ನೇಹಿತ ತನ್ನ ಜೊತೆ ಎಲ್ಲಾ ಸಣ್ಣ ಪುಟ್ಟ ವಿಷ್ಯಗಳನ್ನು (sharing everything) ಹಂಚಿಕೊಂಡ್ರೆ, ಹುಡುಗಿ ಮನಸು ಅವನತ್ತ ವಾಲದೆ ಇರೋದಕ್ಕೆ ಸಾಧ್ಯವೇ? 
 

47

ಹುಡುಗನ ಧ್ವನಿ
ನಾವು ಯಾರೊಂದಿಗೆ ದಿನವೂ ಮಾತನಾಡುತ್ತೇವೆಯೋ ಅವರ ಧ್ವನಿ (his voice) ನಮ್ಮ ಕಿವಿಗಳಿಗೆ ಪರಿಚಿತವಾಗೋದು ಸಾಮಾನ್ಯ. ಹುಡುಗ ತುಂಬಾ ಸ್ವೀಟ್ ಆಗಿ ಮಾತನಾಡ್ತಿದ್ರೆ, ಅವನ ಮಾತುಗಳು ಹುಡುಗಿಯ ಮನ ಸೋಲೋದು ಖಚಿತ, ಸ್ವಲ್ಪ ಸಮಯದಲ್ಲಿ ಹುಡುಗಿ ಲವ್ವಲ್ಲಿ ಬೀಳೋದು ಸಹ ಗ್ಯಾರಂಟಿ. 

57

ಸಣ್ಣ ವಿಷ್ಯಗಳಿಗೆ ಗಮನ ಕೊಡೋ ಹುಡುಗ
ಹುಡುಗಿಯರಿಗೆ ಎಲ್ಲಾ ಹುಡುಗರು ಸುಲಭವಾಗಿ ಇಷ್ಟವಾಗೋದಿಲ್ಲ. ಆದರೆ ತನ್ನ ಜೀವನದ ಸಣ್ಣ ಪುಟ್ಟ ವಿಷ್ಯಗಳಿಗೆ ಗಮನ ಕೊಡುವ ಹುಡುಗ, ಸಣ್ಣಪುಟ್ಟ ಆಸೆಗಳನ್ನು ಈಡೇರಿಸೋ ಹುಡುಗ ಆಕೆಗೆ ಇಷ್ಟವಾಗ್ತಾನೆ. ಉದಾಹರಣೆಗೆ - ಹುಡುಗಿ ಏನು ಇಷ್ಟ ಪಡುತ್ತಾಳೆ, ಅವಳು ಏನು ಇಷ್ಟಪಡುವುದಿಲ್ಲ, ಅವಳ ಮೂಡ್ ಹಾಳು ಮಾಡೋ ವಿಷ್ಯ ಯಾವುದು ಮತ್ತು ಅವಳಿಗೆ ಖುಷಿ ಕೊಡೋದು ಯಾವುದು? ಇದನ್ನೆಲ್ಲಾ ಹುಡುಗ ತಿಳ್ಕೊಂಡಿದ್ದಾನೆ ಅಂದ್ರೆ, ಆ ಹುಡುಗನಿಗೆ ಸೋಲದೆ ಇರುವಳೇ ಹುಡುಗಿ. 

67

ಬ್ಯುಸಿ ಜೀವನದ ನಡುವೆಯೂ ನಿಮಗಾಗಿ ಸಮಯ ಕೊಡೋರು
ಅನೇಕ ಕಪಲ್ಸ್ ಜೊತೆಯಾಗಿ ಸಮಯ ಕಳೆಯೋದಕ್ಕೆ ಸಾಧ್ಯವಾಗ್ತಿಲ್ಲ ಅನ್ನೋ ಕಾರಣಕ್ಕೇನೆ ಜಗಳ ಮಾಡ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಹುಡುಗನು ಬ್ಯುಸಿ ಜೀವನದ ನಡುವೆಯೂ ತನ್ನ ಸ್ನೇಹಿತ ಅಥವಾ ಗೆಳತಿಗಾಗಿ ಸಮಯ ನೀಡಿದ್ರೆ, ಅವನ ಮೇಲೆ ಹುಡುಗಿಗೆ ಲವ್ ಆಗೋದು ಖಂಡಿತಾ. 

77

ಮಾತನಾಡುವ ಮೂಲಕ ತಪ್ಪು ತಿಳುವಳಿಕೆಗಳನ್ನು ನಿವಾರಿಸೋ ಹುಡುಗ
ಸಂಬಂಧದಲ್ಲಿನ ಬಿರುಕು ಮೂಡೋಕೆ ದೊಡ್ಡ ಕಾರಣವೆಂದರೆ  ತಪ್ಪು ತಿಳುವಳಿಕೆ ಮತ್ತು ಮಾತನಾಡದೇ  (communication) ಇರೋದು. ಆದರೆ ಇಬ್ಬರ ನಡುವೆ ಜಗಳ, ಮನಸ್ಥಾಪ ಆದಾಗ ದೂರ ಹೋಗುವ ಬದಲು, ಕುಳಿತು ಯಾಕೆ ಹೀಗೆ ಆಗಿದೆ ಅನ್ನೋದರ ಬಗ್ಗೆ ಮಾತನಾಡುವ, ಸಮಸ್ಯೆ ಬಗೆಹರಿಸುವ ಹುಡುಗನನ್ನು ಯಾವ ಹುಡುಗಿ ತಾನೆ ಇಷ್ಟ ಪಡದಿರಲು ಸಾಧ್ಯ. 

Read more Photos on
click me!

Recommended Stories