6 ಸೆಕೆಂಡು ಕಿಸ್ ಫಾರ್ಮುಲಾ! ಪತಿಯರಿಗೆ ತಿಳಿದಿರಲಿ ಈ ಚುಂಬನದ ರಹಸ್ಯ

First Published | Jun 5, 2024, 5:30 PM IST

ನಿಮ್ಮ ರಿಲೇಶನ್‌ಶಿಪ್‌ನಲ್ಲಿ ಅಥವಾ ನಿಮ್ಮ ವೈವಾಹಿಕ ಜೀವನದಲ್ಲಿ (Married LIfe) ಗ್ಯಾಪ್ ಇದೆ ಅಂತಾ ನಿಮಗೆ ಅನಿಸ್ತಾ ಇದ್ಯಾ? ಮುಂದೇನು ಮಾಡೋದು ಅನ್ನೋದ್ರ ಬಗ್ಗೆ ಕನ್ ಫ್ಯೂಷನ್ ಇದೆಯೇ? ಹಾಗಿದ್ರೆ ನಿಮಗಾಗಿ ಕಿಸ್ ಫಾರ್ಮುಲಾ ತಿಳಿಸ್ತೀವಿ ಕೇಳಿ. 
 

ಸಂಗಾತಿ (life partner) ನಮ್ಮ ಜೀವನದಲ್ಲಿ ತುಂಬಾ ಮುಖ್ಯ, ಆದರೆ ಅವರಿಗೆ ಸುರಕ್ಷಿತ ಮತ್ತು ಸುಭದ್ರ ಭಾವನೆ (Secured Feeling) ಮೂಡಿಸಲು ನಾವು ಏನು ಮಾಡುತ್ತೇವೆ? ಕೆಲವೊಮ್ಮೆ ದಾರಿಯಲ್ಲಿ ನಡೆಯುವಾಗ ಗಂಡಸರು ತಮ್ಮ ಪತ್ನಿಯ ಕೈಯನ್ನು ಹಿಡಿದುಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಮನೆಯಿಂದ ಹೊರಡುವಾಗ ಹೆಂಡ್ತಿಯನ್ನು ತಬ್ಬಿಕೊಳ್ಳುತ್ತಾರೆ. ಆದರೆ ಸಂಶೋಧನೆ ಪ್ರಕಾರ ನೀವು ನಿಮ್ಮ ಹೆಂಡತಿಯನ್ನು 6 ಸೆಕೆಂಡ್ ಚುಂಬಿಸಿದರೆ, ಅದು ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತೆ. 
 

ಕೇವಲ 6 ಸೆಕೆಂಡು ಕಿಸ್ ಏಕೆ?  
ಸಾಮಾನ್ಯವಾಗಿ ಮಹಿಳೆಯರು ತಮ್ಮ ಸಂಬಂಧದ ಬಗ್ಗೆ ಹೆಚ್ಚು ಯೋಚಿಸುತ್ತಾರೆ, ಇದರಿಂದಾಗಿ ಅವರು ಆಗಾಗ್ಗೆ ತಮ್ಮ ಬಗ್ಗೆ ಮತ್ತು ಸಂಬಂಧದ ಬಗ್ಗೆ ಅಸಮಾಧಾನಗೊಳ್ಳಲು ಪ್ರಾರಂಭಿಸುತ್ತಾರೆ. ನಿಮ್ಮ ಹೆಂಡತಿಯೂ ಈ ರೀತಿಯಾಗಿ ಸಂಬಂಧದ ಬಗ್ಗೆ ಯೋಚನೆ ಮಾಡುತ್ತಿದ್ದರೆ, ನೀವು ಮನೆಯಿಂದ ಹೊರಡುವಾಗ ಮಿಸ್ ಮಾಡದೇ ಪತ್ನಿಗೆ 6 ಸೆಕೆಂಡು ಕಿಸ್ ಮಾಡಿ. ಯಾಕೆ 6 ಸೆಕೆಂಡ್ ಕಿಸ್ (6 second kiss) ಅಂತಾ ಕೇಳ್ತಿದ್ದೀರಾ? ಇಲ್ಲಿದೆ ನೋಡಿ… 

Latest Videos


ಹೆಂಡತಿಯನ್ನು ಚುಂಬಿಸುವುದು ಏಕೆ ಮುಖ್ಯ?
ಗಾಟ್ಮನ್ ಇನ್ಸ್ಟಿಟ್ಯೂಟ್‌ನ ಸ್ಥಾಪಕರಾದ ಡಾ.ಜಾನ್ ಮತ್ತು ಜೂಲಿ ಗಾಟ್ಮನ್ ಅವರ ಸಂಶೋಧನೆ ಪ್ರಕಾರ, ಕೆಲಸಕ್ಕೆ ಹೋಗುವ ಮೊದಲು ತಮ್ಮ ಹೆಂಡತಿಯರನ್ನು ಚುಂಬಿಸುವ (kisisng your wife) ಪುರುಷರು ಹಾಗೆ ಮಾಡದ ಪುರುಷರಿಗಿಂತ ನಾಲ್ಕು ವರ್ಷ ಹೆಚ್ಚು ಬದುಕುತ್ತಾರಂತೆ. ಈ 6 ಸೆಕೆಂಡುಗಳ ಕಿಸ್ ಮಾಡೋದರಿಂದ ಪತಿ -ಪತ್ನಿಯ ಜೀವನದಲ್ಲಿ ತುಂಬಾ ಬದಲಾವಣೆ ಆಗುತ್ತಂತೆ. 

6 ಸೆಕೆಂಡ್ ಕಿಸ್
ಈ ಚುಂಬನ ತುಟಿಯಿಂದ ತುಟಿಗೆ ನೀಡುವ ಕಿಸ್ಆ, ಇದು 6 ಸೆಕೆಂಡು ಇರುತ್ತದೆ. ಹಾಗಾಗಿ ಇದನ್ನು 6 ಸೆಕೆಂಡ್ ಕಿಸ್ ಎನ್ನುತ್ತಾರೆ. ಸಂಶೋಧನೆ ಪ್ರಕಾರ, ಈ 6 ಸೆಕೆಂಡು ಕಿಸ್ ಸಾಮಾನ್ಯ ಚುಂಬನಕ್ಕಿಂತ ಅನೇಕ ಪಟ್ಟು ಹೆಚ್ಚು ಶಕ್ತಿಯುತವಾಗಿರುತ್ತದೆ. ಚುಂಬನದ ಸಮಯ ಏಕೆ ಸ್ಥಿರವಾಗಿದೆ ಎಂದು ನೀವು ಯೋಚಿಸುತ್ತಿರಬಹುದು, ಸಮಯವೂ ಕಡಿಮೆ ಇರಬಹುದು. ಆದರೆ ಅದರಿಂದ ಲಾಭ ಹೆಚ್ಚು. 

6 ಸೆಕೆಂಡು ಕಿಸ್ ಯಾಕೆ ಮುಖ್ಯ? ನಾಲ್ಕು ಸೆಕೆಂಡ್ ಕಿಸ್ ಮಾಡಿದ್ರೆ ಆಗೋದಿಲ್ವಾ? 
ನೀವು 6 ಸೆಕೆಂಡುಗಳ ಕಾಲ ಚುಂಬಿಸಿದಾಗ, ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ, ಇದು ನಿಮ್ಮ ಹೆಂಡತಿಯ ಮನಸ್ಸಿನಲ್ಲಿ ಮಾನಸಿಕ ಭದ್ರತೆ (Emotional Security) ಮತ್ತು ಕನೆಕ್ಷನ್ ಸೃಷ್ಟಿಸುತ್ತದೆ. ಇದು ನಿಮ್ಮ ಬಾಂಡಿಂಗ್ ಅನ್ನು (strong bonding) ಗಟ್ಟಿಯಾಗಿಸುತ್ತೆ. 
 

ಹಗ್ ಮಾಡೋಕೂ ಸಮಯ ಇದೆ
6 ಸೆಕೆಂಡುಗಳನ್ನು ಕಿಸ್ ಮಾಡೋದಕ್ಕೆ ಪರ್ಫೆಕ್ಟ್ ಎಂದು ಪರಿಗಣಿಸುವಂತೆಯೇ, ಕೇವಲ 20 ಸೆಕೆಂಡು ಅಪ್ಪುಗೆಯು(hug) ಸಂಗಾತಿಯ ನಡುವೆ ಆಕ್ಸಿಟೋಸಿನ್ ಬಿಡುಗಡೆಗೆ ಕಾರಣವಾಗುತ್ತದೆ, ಇದು 6 ಸೆಕೆಂಡುಗಳ ಚುಂಬನದಷ್ಟೇ ಪ್ರಯೋಜನಕಾರಿ. ಆದ್ದರಿಂದ ನೀವು ಮನೆಯಿಂದ ಹೊರಗೆ ಹೊರಡುವಾಗಲೆಲ್ಲಾ, ನಿಮ್ಮ ಹೆಂಡತಿಗೆ 6 ಸೆಕೆಂಡುಗಳ ಕಿಸ್ ಮತ್ತು 20 ಸೆಕೆಂಡುಗಳ ಹಗ್ ಮಾಡಿ.

ಆಕ್ಸಿಟೋಸಿನ್ ಎಂದರೇನು?
ಆಕ್ಸಿಟೋಸಿನ್,(oxytocin) ನ್ನು ಸಾಮಾನ್ಯವಾಗಿ 'ಲವ್ ಹಾರ್ಮೋನ್' (Love Harmone) ಅಥವಾ 'ಕಡಲ್ ಕೆಮಿಕಲ್' (Cuddle Chemical) ಎಂದು ಕರೆಯುತ್ತಾರೆ, ಇದು ಯಾರ ಮೇಲಾದರೂ ಲವ್ ಹೆಚ್ಚಾದಾಗ ಅಥವಾ ಇನ್ನೊಬ್ಬ ವ್ಯಕ್ತಿ ಮೇಲೆ ಫೀಲಿಂಗ್ ಹೆಚ್ಚಾದಾಗ ಮಹಿಳೆಯರಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಆಗಿದೆ. ನೀವು ಯಾರನ್ನಾದರೂ ತಬ್ಬಿಕೊಂಡಾಗ ಅಥವಾ ಆರ್ಗಾಸಂ (Orgasm) ಅನುಭವಿಸುತ್ತಿರುವಾಗ ಆಕ್ಸಿಟೋಸಿನ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ವೈವಾಹಿಕ ಜೀವನವೂ (Married Life) ಸುಂದರವಾಗಿರುತ್ತೆ. 

click me!