ವರನ ಸ್ನೇಹಿತರಿಂದಲೇ ವಧು ಅಪಹರಣ, ಕ್ರೈಂ ಸ್ಟೋರಿ ಅಲ್ಲ, ಇದು ರೋಮ್ ಮದುವೆ ಸಂಪ್ರದಾಯ

First Published Jun 5, 2024, 4:54 PM IST

ಅನೇಕ ರೀತಿಯ ಮದುವೆ ಮತ್ತು ಅದರಲ್ಲಿ ನಡೆಸಲಾಗುವ ಪದ್ಧತಿಗಳ ಬಗ್ಗೆ ನೀವು ಕೇಳಿರಬಹುದು, ಆದರೆ ಮದುವೆಗೆ ಮೊದಲು ವಧುವನ್ನು ಕಿಡ್ನಾಪ್ ಮಾಡುವ ಸಂಪ್ರದಾಯವಿದೆ ಅನ್ನೋದು ನಿಮಗೆ ಗೊತ್ತಾ? ಈ ರೀತಿಯ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ?
 

ಪ್ರಪಂಚದಾದ್ಯಂತ ಮದುವೆ ಸಂಪ್ರದಾಯಗಳು (wedding rituals) ಒಂದೊಂದು ತಾಣದಲ್ಲಿ, ಒಂದೊಂದು ರೀತಿಯಾಗಿರುತ್ತೆ. ನಮ್ಮ ಭಾರತದಲ್ಲೇ ಸಾಕಷ್ಟು ರೀತಿಯ ಸಂಪ್ರದಾಯಗಳನ್ನು ಕಾಣಬಹುದು. ಕೆಲವು ಆಚರಣೆಗಳು ತುಂಬಾನೆ ತಮಾಷೆಯಾಗಿರುತ್ತೆ, ಇನ್ನೂ ಕೆಲವು ಆಚರಣೆಗಳನ್ನು ನೋಡಿದ್ರೆ, ಹೀಗೆಲ್ಲಾ ಆಗುತ್ತಾ ಎಂದು ಅಚ್ಚರಿಯಾಗುತ್ತೆ. 
 

ಇಲ್ಲೊಂದು ವಿಚಿತ್ರ ಮದುವೆ ಬಗ್ಗೆ ನಿಮಗೆ ಹೇಳ್ತಿವಿ. ಇದು ಅಂತಿಂಥ ಮದುವೆ ಅಲ್ಲ, ರೋಚಕ ಮದುವೆ. ಇದರಿಂದ ಸಂಬಂಧ ಗಟ್ಟಿಯಾಗುತ್ತೆ ಎನ್ನುವ ನಂಬಿಕೆ ಇದೆ. ಈ ಮದುವೆಯಲ್ಲಿ ಕಿಡ್ನಾಪ್  (Kidnap) ಮಾಡೋದೇ ಪ್ರಮುಖ ಸಂಪ್ರದಾಯ. ಇದನ್ನು ಭಾರತದಲ್ಲಿ ಅಲ್ಲ ಆದರೆ ರೋಮ್ ನಲ್ಲಿ ಆಚರಿಸಲಾಗುತ್ತದೆ. ಮದುವೆಗೆ ಮೊದಲು ವಧುವನ್ನು ಅಪಹರಿಸುವ ಪದ್ಧತಿ ಇಲ್ಲಿದೆ. ಏನಿದು ಕಥೆ ಅನ್ನೋದನ್ನು ತಿಳಿಯಲು ಬಯಸಿದ್ರೆ ಮುಂದೆ ಓದಿ… 
 

Latest Videos


ವಧುವಿನ ಅಪಹರಣ ಎಲ್ಲಿ ನಡೆಯುತ್ತೆ ಗೊತ್ತಾ? 
ಪ್ರತಿಯೊಂದು ದೇಶವು ವಿಭಿನ್ನ ಪದ್ಧತಿಗಳನ್ನು ಹೊಂದಿದೆ, ಆದ್ದರಿಂದ ನಾವು ಮಾತನಾಡುತ್ತಿರುವ ದೇಶವು ಮದುವೆಗೆ ಮೊದಲು ವಧುವನ್ನು ಅಪಹರಿಸುವ ಸಂಪ್ರದಾಯವನ್ನು ಹೊಂದಿದೆ. ವಾಸ್ತವವಾಗಿ, ನಾವು ಇಟಲಿಯಲ್ಲಿ ರೋಮ್ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಅಂತಹ ವಿಚಿತ್ರ ಪದ್ಧತಿ ಎಂದು ನಿಮ್ಮ ಮನಸ್ಸಿಗೆ ಬರಬೇಕು, ಅಪಹರಣ ಏಕೆ ನಡೆಯುತ್ತದೆ? ಮತ್ತು ಅಪಹರಣವು ಹೇಗೆ ಸಂಭವಿಸುತ್ತದೆ ಮತ್ತು ಯಾರನ್ನೂ ರಕ್ಷಿಸಲಾಗುವುದಿಲ್ಲ! ಇದಕ್ಕೆ ಕಾರಣವನ್ನು ನಿಮಗೆ ಹೇಳೋಣ.

ವಧುವಿನ ನಾಪಿಂಗ್ (Bride Kinapping)
ರೋಮ್ ನ ಮದುವೆಗಳಲ್ಲಿ ನಡೆಯುವ ಈ ಪದ್ಧತಿಯನ್ನು ವಧುವಿನ ಕಿಡ್ನಾಪಿಂಗ್ ಎಂದು ಕರೆಯಲಾಗುತ್ತದೆ. ಇದರಲ್ಲಿ, ವಧುವನ್ನು ವರನ ಮುಂದೆ ಕಿಡ್ನಾಪ್ ಮಾಡಲಾಗುತ್ತೆ. ಈ ಅಪಹರಣಗಳು ನಿಜವೆಂದು ಎಲ್ಲರೂ ಭಾವಿಸುವಂತೆ ಮಾಡಲು, ಅಪಹರಣಕಾರರು ಮುಖವಾಡಗಳು ಮತ್ತು ಶಸ್ತ್ರಾಸ್ತ್ರಗಳನ್ನು ಧರಿಸಿ ಬರುತ್ತಾರೆ. ಮದುವೆಗೆ ಬರುವ ಅತಿಥಿಗಳು ಮತ್ತು ವರನ ಮುಂದೆ ಈ ಅಪಹರಣ ಮಾಡಲಾಗುತ್ತದೆ.

ಯಾರು ಅಪಹರಿಸುತ್ತಾರೆ?
ಇದೇನು ನಿಜವಾದ ಕಿಡ್ನಾಪ್ ಅಲ್ಲ, ಭಾರತದಲ್ಲಿ ವರನ ಶೂಗಳನ್ನು ವಧುವಿನ ಕಡೆಯವರು ಕದಿಯುವಂತೆ, ಇಲ್ಲಿ ವಧುವನ್ನು ಕಿಡ್ನಾಪ್ ಮಾಡೋದು ಸಹ ಒಂದು ಸಂಪ್ರದಾಯ ಅಷ್ಟೇ.  ವರನ ಸ್ನೇಹಿತರು (grooms friends)ಮದುವೆಗೆ ಮೊದಲು ವಧುವಿನ ಅಪಹರಣ ಮಾಡುತ್ತಾರೆ. ವಧು ಯಾವುದೇ ರೀತಿಯ ವಿರೋಧ ಮಾಡದೆ ಅವರೊಂದಿಗೆ ಹೋಗುತ್ತಾಳೆ. 
 

ವಧುವಿನ ಬಿಡುಗಡೆಗಾಗಿ ಬೇಡಿಕೆ
ಯಾರನ್ನಾದರೂ ಕಿಡ್ನಾಪ್ ಮಾಡಿದ್ರೆ, ಬೇಡೀಕೆ ಇಡೋದು ಸಾಮಾನ್ಯ ಅಲ್ವಾ? ರೋಮ್ ನಲ್ಲಿಯೂ ಮದುವೆ ಸಂಪ್ರದಾಯದಲ್ಲಿ ಇದೆ ಆಗುತ್ತೆ. ವರನ ಸ್ನೇಹಿತರು ಮೊದಲು ವಧುವನ್ನು ಅಪಹರಿಸುತ್ತಾರೆ, ನಂತರ ತಮ್ಮ ಬೇಡಿಕೆಗಳನ್ನು (demands)ಮುಂದಿಡುತ್ತಾರೆ.  ವೈನ್ ಬಾಟಲಿಗಳನ್ನು ನೀಡಿದ್ರೆ ಮತ್ತು ವಧುವನ್ನು ಎಲ್ಲರ ಮುಂದೆ ಪ್ರಪೋಸ್ ಮಾಡಿದ್ರೆ ಮಾತ್ರ ವಧುವನ್ನು ಬಿಡೋದಾಗಿ ತಿಳಿಸುತ್ತಾರೆ. ಅದನ್ನೆಲ್ಲಾ ವರ ಮಾಡಿದಾ ಮೇಲೆ ವಧುವನ್ನು ವರನಿಗೆ ಒಪ್ಪಿಸಲಾಗುತ್ತೆ. 

click me!