ಅಮ್ಮನಿಗಿಂತ ಅಪ್ಪನನ್ನೇ ಮಕ್ಕಳು ಹೆಚ್ಚು ಇಷ್ಟ ಪಡೋದೇಕೆ? ಇಲ್ಲಿವೆ 10 ರೀಸನ್ಸ್‌!

First Published Oct 1, 2024, 3:05 PM IST

ಬಹುಶಃ ಇಂಥದ್ದೊಂದು ಕುತೂಹಲ ಎಲ್ಲರಲ್ಲೂ ಇರುತ್ತೆ. ಹೆಣ್ಣಾಗಲಿ, ಗಂಡಾಗಲಿ.. ಚಿಕ್ಕ ಮಕ್ಕಳು ತಾಯಿಗಿಂತ ಹೆಚ್ಚಾಗಿ ತಂದೆಯನ್ನೇ ಇಷ್ಟಪಡುತ್ತಾರೆ. ಅದಕ್ಕೆ 10 ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ಮಕ್ಕಳು ತಮ್ಮ ಕುಟುಂಬದೊಂದಿಗೆ ಬಹಳ ವಿಶೇಷವಾದ ಸಂಬಂಧ ಹೊಂದಿರುತ್ತಾರೆ. ಆದರೆ, ತಾಯಿಗಿಂತ ಜಾಸ್ತಿ ತಂದೆಯನ್ನೇ ಚಿಕ್ಕ ಮಕ್ಕಳು ಹೆಚ್ಚಾಗಿ ಹಚ್ಚಿಕೊಳ್ಳುತ್ತಾರೆ. ಅದಕ್ಕೆ ಕಾರಣವೂ ಇದೆ. ಪ್ರತಿ ಫ್ಯಾಮಿಲಿಗಳ ಡೈನಾಮಿಕ್ಸ್‌ಗಳು ವಿಭಿನ್ನ ಹಾಗೂ ಯುನಿಕ್‌ ಆಗಿರುತ್ತದೆ. ವೈಯಕ್ತಿಕ ಸಂಬಂಧದ ಅನುಸಾರ ಮಕ್ಕಳ ಆಯ್ಕೆಗಳು ಭಿನ್ನವಾಗಿರುತ್ತದೆ.

ಆಟವಾಡೋದಕ್ಕೆ ಅಪ್ಪ ಬೆಸ್ಟ್‌: ಸಾಮಾನ್ಯವಾಗಿ ಪ್ರತಿ ಮನೆಯಲ್ಲಿನ ಅಪ್ಪ ಎನ್ನುವವನು ಸ್ಪೋರ್ಟ್ಸ್‌ಗಳಲ್ಲಿ ಕಿಂಚಿತ್ತಾದರೂ ಇಂಟ್ರಸ್ಟ್‌ ಹೊಂದಿರುವ ವ್ಯಕ್ತಿ ಆಗಿರುತ್ತಾನೆ. ಹೊರಗೆ ಹೋಗಿ ಗೇಮ್‌ ಆಡೋದು ಅವರಿಗೆ ಇಷ್ಟ. ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗೋದು, ನೋಡೋದು ಖುಷಿ. ಇದೇ ಕುತೂಹಲದ ಕಣ್ಣುಗಳಲ್ಲಿರುವ ಚಿಕ್ಕ ಮಕ್ಕಳಿಗೆ ತಂದೆಯ ಈ ಅಪ್ರೋಚ್‌ ಇಷ್ಟವಾಗುತ್ತದೆ. ಅವರೊಂದಿಗೆ ಉತ್ತಮವಾಗಿ ಬೆರೆಯುತ್ತಾರೆ.

Latest Videos


ಅಪ್ಪ ನಿಯಂತ್ರಣ ಹೇರೋದಿಲ್ಲ: ದಿನನಿತ್ಯದ ಕೆಲಸಗಳು ಹಾಗೂ ಶಿಸ್ತಿನ ವಿಚಾರ ಬಂದರೆ ಅಮ್ಮನಿಗಿಂತ ಅಪ್ಪ ಸ್ವಲ್ಪ ಕೂಲ್‌ ಆಗಿ ಹ್ಯಾಂಡಲ್‌ ಮಾಡ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಮಕ್ಕಳು ಹೆಚ್ಚಿನ ಸ್ವಾತಂತ್ರ್ಯ ಪಡೀಬೇಕು ಅನ್ನೋದು ಅವರ ಮಾತಾಗಿರುತ್ತದೆ. ಇದರಿಂದಾಗಿ ಮಕ್ಕಳಿಗೂ ಕೂಡ ತಾವು ತುಂಬಾನೇ ನಿಯಂತ್ರಣದಲ್ಲಿಲ್ಲ ಎಂದು ಅನಿಸುತ್ತದೆ.

ಸಾಹಸಕ್ಕೆ ಅಪ್ಪನೇ ಬೆಸ್ಟ್: ಸಾಹಸಿಕ ಕೆಲಸಗಳಿಗೆ ಹೈಹಾಕುವ ವಿಚಾರದಲ್ಲಿ ಮನೆಯಲ್ಲಿ ಮೊದಲು ಪರ್ಮಿಷನ್‌ ನೀಡೋದೇ ಅಪ್ಪ. ಮಕ್ಕಳು ತಮ್ಮ ಕಂಫರ್ಟ್‌ ಜೋನ್‌ನಿಂದ ಹೊರಬರಬೇಕು ಅನ್ನೋದೇ ಅವರ ಆಸೆ. ಮರ ಹತ್ತುವುದೇ ಆಗಿರಲಿ, ಹೊಸತಾದ ಏನನ್ನಾದರೂ ಮಾಡೋದೇ ಆಗಿರಲಿ ತಂದೆಯಿಂದ ಮಕ್ಕಳಿಗೆ ಫುಲ್‌ ಸಪೋರ್ಟ್‌. ಇದು ಮಕ್ಕಳಿಗೆ ತಂದೆಯ ಮೇಲೆ ವಿಶ್ವಾಸ ಹಾಗೂ ನಂಬಿಕೆಗೆ ಕಾರಣವಾಗುತ್ತದೆ.

ತಂದೆ ತುಂಬಾನೇ ಪ್ರ್ಯಾಕ್ಟಿಕಲ್‌: ಬದುಕು ಎದುರಿಗೆ ಇರಿಸುವ ಸವಾಲುಗಳು ಅತ್ಯಂತ ಪ್ರ್ಯಾಕ್ಟಿಕಲ್‌ ಆಗಿ ತಂದೆ ನೋಡುತ್ತಾನೆ. ಸಮಸ್ಯೆ ಬಗೆಹರಿಸುವ ತಂದೆಯ ಗುಣ ಮಕ್ಕಳಿಗೆ ಇಷ್ಟವಾಗುತ್ತದೆ. ಇಂಥ ಪರಿಸ್ಥಿತಿಗಳು ಅವರ ಜೀವನದಲ್ಲೂ ಬಂದಾಗ ಹುಷಾರಾಗಿ ಯೋಚನೆ ಮಾಡಬೇಕು ಎನ್ನುವ ವಿಚಾರದಲ್ಲಿ ಸಹಾಯ ಮಾಡುತ್ತಾರೆ. ಇದರು ಕಷ್ಟಗಳನ್ನು ಎದುರಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಸಹಾಯವಾಗುತ್ತದೆ.
 

ಕೆಲವೊಮ್ಮೆ ತಂದೆ ಬಾಡಿಗಾರ್ಡ್‌: ಮಕ್ಕಳ ವಿಚಾರದಲ್ಲಿ ತಂದೆ ಒಂಥರಾ ಬಾಡಿಗಾರ್ಡ್‌ ಇದ್ದ ಹಾಗೆ. ಎಲ್ಲಾದರೂ ಹೋದಾಗ ಪಕ್ಕದಲ್ಲಿ ಅಪ್ಪ ಇದ್ದಾನೆ ಎಂದರೆ, ಮಕ್ಕಳ ಮನಸ್ಸಿನಲ್ಲಿ ಭದ್ರತೆ ಹಾಗೂ ಸುರಕ್ಷತೆಯ ಭಾವ ಮೂಡುತ್ತದೆ. ಕಠಿಣ ಪರಿಸ್ಥಿತಿಗಳು ಹಾಗೂ ಬೆದರಿಕೆಗಳು ಎದುರಾದಾಗ ಅಪ್ಪ ಅದನ್ನು ಎದುರಿಸ್ತಾರೆ ಅನ್ನೋ ನಂಬಿಕೆ ಅವರಲ್ಲಿರುತ್ತದೆ.
 

ಅಪ್ಪ-ಮಕ್ಕಳ ಆಸಕ್ತಿ ಬಹುತೇಕ ಒಂದೇ:  ಅಪ್ಪ ಹಾಗೂ ಮಕ್ಕಳ ನಡುವೆ ಸಾಮಾನ್ಯವಾಗಿ ಒಂದೇ ಆಸಕ್ತಿ ಇರುತ್ತದೆ. ಸ್ಪೋರ್ಟ್ಸ್‌, ಹವ್ಯಾಸಗಳು ಅಥವಾ ಟೆಕ್ನಾಲಜಿ ಯಾವುದೇ ವಿಚಾರವಿದ್ದರೂ ಮಕ್ಕಳೊಂದಿಗೆ ಸಂಭ್ರಮಿಸುವುದು ತಂದೆಗೆ ಇಷ್ಟ. ಈ ಚಟುವಟಿಕೆಗಳಲ್ಲಿ ಎಂಗೇಜ್‌ ಆಗುವ ಕಾರಣ ತಂದೆಯೊಂದಿಗೆ ಮಕ್ಕಳು ಯುನಿಕ್‌ ಆದ ಸಂಬಂಧ ಬೆಳೆಸಿಕೊಳ್ಳುತ್ತಾರೆ.

ಮಕ್ಕಳಿಗೆ ಫ್ರೀಡಮ್‌ ನೀಡೋಕೆ ಅಪ್ಪನೇ ಬೆಸ್ಟ್‌: ಸಾಮಾನ್ಯವಾಗಿ ಅಪ್ಪ ಮಕ್ಕಳಿಗೆ ಯಾವುದಾದರೂ ಸಮಸ್ಯೆ ಎದುರಾದಾಗ ಅವರಾಗಿಯೇ ಆ ಸಮಸ್ಯೆ ಬಗೆಹರಿಸಿಕೊಳ್ಳುವವರೆಗೂ ಅದರ ವಿಚಾರಕ್ಕೆ ಹೋಗೋದಿಲ್ಲ. ಇದು ಮಕ್ಕಳಿಗೆ ತಂದೆ ನೀಡುವ ಫ್ರೀಡಮ್‌. ಇದು ಮಕ್ಕಳಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಬರಲು ಕಾರಣವಾಗುತ್ತದೆ.

ತಂದೆಯೊಂದಿಗೆ ಇರುತ್ತೆ ವಿಶೇಷ ಕ್ಷಣ: ವೀಕೆಂಡ್‌ ಔಟಿಂಗ್,‌ ಗೇಮ್ಸ್‌ ಅಥವಾ ಇನ್ನಾವುದೇ ವಿಚಾರವಾಗಿರಲಿ, ಅಲ್ಲಿ ತಂದೆ ಇದ್ದರೆ ಮಕ್ಕಳ ಪಾಲಿಗದು ವಿಶೇಷ ಕ್ಷಣ. ತಂದೆ ಮಕ್ಕಳು ಈ ಬಾಂಧವ್ಯವನ್ನು ಅಮರವಾಗಿ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನವನ್ನೂ ಮಾಡ್ತಾರೆ.
 


ತಂದೆಯ ತಮಾಷೆ ಮಕ್ಕಳಿಗೆ ಇಷ್ಟ: ಕೆಲವೊಮ್ಮೆ ಸ್ಟ್ರಿಕ್ಟ್‌ ಅನಿಸೋ ಅಪ್ಪ ಒಮ್ಮೊಮ್ಮೆ ಮಾಡುವ ತಮಾಷೆಗಳು ಮಕ್ಕಳಿಗೆ ಇಷ್ಟವಾಗುತ್ತದೆ. ಅಲ್ಲದೆ, ತಂದೆ ಸೃಷ್ಟಿಸುವ ಕೆಲವೊಂದು ತಮಾಷೆಯ ಸನ್ನಿವೇಶಗಳು ಮಕ್ಕಳ ನಗುವಿಗೆ ಕಾರಣವಾಗುತ್ತದೆ. ಈ ಕ್ಷಣಗಳೇ ತಂದೆಯೊಂದಿಗೆ ಮಕ್ಕಳ ಬಾಂಧವ್ಯಕ್ಕೆ ಕಾರಣವಾಗುತ್ತದೆ.

ಅಪ್ಪನೇ ದೊಡ್ಡ ರೋಲ್‌ ಮಾಡೆಲ್: ಮಕ್ಕಳ ಪಾಲಿಗೆ ಮೊದಲ ರೋಲ್‌ ಮಾಡೆಲ್‌ ಅವರ ತಂದೆ. ಬದುಕಿನ ಸವಾಲುಗಳನ್ನು ಹೇಗೆ ಎದುರಿಸಬೇಕು, ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವುದು ಹೇಗೆ, ಜವಾಬ್ದಾರಿಗಳನ್ನಿ ನಿಭಾಯಿಸುವ ಬಗ್ಗೆ ಮಕ್ಕಳು ತಂದೆಯಿಂದಲೇ ಹೆಚ್ಚಾಗಿ ಕಲಿಯುತ್ತಾರೆ.
 

click me!