ನಾವಿಬ್ಬರೂ ಓದುವುದನ್ನು ಇಷ್ಟಪಡುತ್ತಿದ್ದೆವು. ಹೀಗಾಗಿ ಓದಿದ ಪುಸ್ತಕಗಳ ಬಗ್ಗೆ, ಕಾದಂಬರಿಯ ಪಾತ್ರಗಳ ಬಗ್ಗೆ, ಕತೆಗಳ ಬಗ್ಗೆ, ಲೇಖಕರ ಬಗ್ಗೆ ಮಾತನಾಡಲು ತುಂಬಾ ವಿಚಾರಗಳಿರುತ್ತಿದ್ದವು' ಎಂದು ಮೃದುಲಾ ಹೇಳಿಕೊಂಡಿದ್ದಾರೆ. ಹೀಗೆ ಎಂಟು ವರ್ಷಗಳು ಕಳೆದು ಹೋದವು, ಪಂಕಜ್ ಹಾಗೂ ಮೃದುಲಾ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಒಬ್ಬರಿಗೊಬ್ಬರು ಹೇಳಿಕೊಳ್ಳಲೇ ಇಲ್ಲ, ಇದೇ ಸಮಯದಕ್ಕೆ ಮೃದುಲಾರ ತಂದೆ ಹಾಗೂ ಸೋದರ ಮೃದುಲಾಗಾಗಿ ಮನೆಯಲ್ಲಿ ಗಂಡು ನೋಡಲು ಶುರು ಮಾಡಿದ್ದರು. ನೀವು ನಂಬ್ತಿರೋ ಇಲ್ವೋ, ಇತ್ತ ಈ ಯೋಗ್ಯ ಹುಡುಗನ ಹುಡುಕುವ ಕೆಲಸಕ್ಕೆ ಜೊತೆಗೆ ಪಂಕಜ್‌ನನ್ನು ಕರೆದೊಯ್ದಿದ್ದರು. ತನ್ನ ಕ್ರಶ್‌ಗಾಗಿ ಹುಡುಗನನ್ನು ನೋಡಲು ಮೃದುಲಾ ಸೋದರನ ಜೊತೆ ಪಂಕಜ್ ಹೋಗಿದ್ದರು. ಬರೀ ಇಷ್ಟೇ ಅಲ್ಲ, ಮರಳಿ ಬಂದು ಮೃದುಲಾಗೆ ನಾವು ನೋಡಿರುವ ಹುಡುಗ ನಿನಗೆ ಅನುರೂಪನಾದ ವರನಾಗುತ್ತಾನೆ ತುಂಬಾ ಚೆನ್ನಾಗಿ ಇದ್ದಾನೆ ಎಂದು ಬಣ್ಣಿಸಿದ್ದರು.