ಸೋಮಿ ಅಲಿ ಅವರು ಸಲ್ಮಾನ್ ಖಾನ್ ಅವರೊಟ್ಟಿಗೆ ವಾಸಿಸುತ್ತಿರುವಾಗಲೇ ಐಶ್ವರ್ಯಾ ರೈ ಸಲ್ಮಾನ್ ಖಾನ್ ಅವರ ಜಿಮ್‌ಗೆ ಭೇಟಿ ನೀಡುತ್ತಿದ್ದರು ಎಂದು ಸೋಮಿ ಹೇಳಿದ್ದರು. ಸೋಮಿ ಮತ್ತು ಸಲ್ಮಾನ್ ಮನೆ ಗ್ಯಾಲಕ್ಸಿಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರು, ಅಲ್ಲಿ ಜಿಮ್ ಕೂಡ ಇತ್ತು. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಲ್ಮಾನ್ ಮತ್ತು ಐಶ್ ಪ್ರೀತಿಯಲ್ಲಿ ಬಿದ್ದರೆ ಎಂದು ಕೇಳಿದಾಗ, ಹಮ್ ದಿಲ್ ದೇ ಚುಕೆ ಸನಮ್ ಚಿತ್ರೀಕರಣದ ಸಮಯದಲ್ಲಿ ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಯ್ತು ಎಂದು ಸೋಮಿ ಹೇಳಿದ್ದಾರೆ.