ಮದುವೆ (marriage) ಅನ್ನೋದು ಜೀವನದಲ್ಲಿ ತುಂಬಾನೆ ಮುಖ್ಯವಾದ ಒಂದು ಭಾಗವಾಗಿದೆ. ಎರಡು ಜೀವಗಳು ಜೊತೆಯಾಗಿ ಬಾಳಲು ಮುನ್ನುಡಿ ಬರೆಯುವಂತಹ ದಿನ ಇದಾಗಿದೆ. ನಿಮಗೆ ಈಗಾಗಲೆ ಮದುವೆ ಫಿಕ್ಸ್ ಆಗಿದ್ದು, ನಿಮ್ಮ ಜೀವನ ಸಂಗಾತಿಯಾಗುವವರ ಬಗ್ಗೆ ನೀವು ತಿಳಿಯಲು ಬಯಸಿದ್ರೆ ಮದುವೆಗೂ ಮುನ್ನ ಅವರ ಜೊತೆ ಟ್ರಾವೆಲ್ ಮಾಡಬೇಕು. ಯಾಕೆ ಟ್ರಾವೆಲ್ (travel before marriage) ಮಾಡಬೇಕು ಅನ್ನೋದನ್ನು ತಿಳಿಯೋಣ.
ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುತ್ತೆ: ಕೆಲಸ, ಇತರ ಬದ್ಧತೆಗಳು ಮತ್ತು ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡುವ ನಡುವೆ, ನೀವಿಬ್ಬರೂ ಜೊತೆಯಾಗಿ ಕ್ವಾಲಿಟಿ ಟೈಮ್ (quality time) ಕಳೆಯೋದು ತುಂಬಾನೆ ಮುಖ್ಯ. ಅದಕ್ಕಾಗಿ ಇಬ್ಬರು ಜೊತೆಯಾಗಿ ಟ್ರಾವೆಲ್ ಮಾಡೋದು ಮುಖ್ಯ. ಇದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತೆ. ಈ ಸಮಯ ಕೇವಲ ನೀವಬ್ಬರೇ ಜೊತೆಯಾಗಿ ಕಳೆಯಬೇಕು ಅನ್ನೋದನ್ನು ನೆನಪಿಡಿ.
ನೀವು ಪರಸ್ಪರರ ಚಮತ್ಕಾರಗಳನ್ನು ಕಂಡುಕೊಳ್ಳುವಿರಿ: ಒಬ್ಬ ವ್ಯಕ್ತಿಯೊಂದಿಗೆ ವಾಸಿಸುವುದು ಯಾವಾಗಲೂ ಅವರ ಒಂದು ಭಾಗವನ್ನು ನಿಮಗೆ ತೋರಿಸುತ್ತದೆ. ನೀವು ಯಾವಗಲಾದರೂ ಒಮ್ಮೆ ವ್ಯಕ್ತಿಯನ್ನು ಭೇಟಿಯಾದಾಗ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗೋದಿಲ್ಲ. ಹಾಗಾಗಿ ಇಬ್ಬರು ಜೊತೆಯಾಗಿ ಟ್ರಾವೆಲ್ ಮಾಡಿದಾಗ, ಇಬ್ಬರು ಒಂದೇ ಕಡೆ ಇದ್ದಾಗ ಅವರ ಅಭ್ಯಾಸ ಹೇಗಿರುತ್ತೆ ಅನ್ನೋದು ಗೊತ್ತಾಗುತ್ತೆ, ಇದರಿಂದ ಮದುವೆ ಆದ ಮೇಲೆ ಯಾವ ರೀತಿ ಇರಬಹುದು ಎನ್ನುವುದನ್ನು ಸುಲಭವಾಗಿ ತಿಳಿಯಬಹುದು.
ಇಬ್ಬರೂ ಹೊಂದಿಕೊಳ್ಳಲು ಸಾಧ್ಯವೆ ಅನ್ನೋದು ತಿಳಿಯುತ್ತೆ: ಹೌದು, ಡೇಟಿಂಗ್ ಗೆ (dating) ಹೋಗುವುದರಿಂದ ಒಬ್ಬರ ಬಗ್ಗೆ ಹೆಚ್ಚಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ ಪ್ರವಾಸವು ಸಂಪೂರ್ಣವಾಗಿ ವಿಭಿನ್ನವಾಗಿದೆ. ಏಕೆಂದರೆ ನೀವು ಸೀಮಿತ ಸ್ಥಳದಲ್ಲಿ ಹಲವಾರು ಗಂಟೆಗಳ ಕಾಲ ಒಟ್ಟಿಗೆ ಕಳೆಯುತ್ತೀರಿ. ಇದರಿಂದ ಅವರೊಂದಿಗೆ ಹೊಂದಿಕೊಂಡು ಹೋಗಲು ಸಾಧ್ಯವೇ ಅನ್ನೋದು ತಿಳಿಯುತ್ತೆ. ಹೊಂದಾಣಿಕೆ ಆಗಲು ಸಾಧ್ಯವೇ ಇಲ್ಲ ಎಂದು ನಿಮಗೆ ಅನಿಸಿದರೆ ಕೂಡಲೇ ಬ್ರೇಕ್ ಅಪ್ ಕೂಡ ಮಾಡಬಹುದು.
ನಿಮ್ಮ್ ಸ್ಪೇಸ್ ನಲ್ಲಿ ಇನ್ನೊಬ್ಬರೊಂದಿಗೆ ಇರೋದು ಹೇಗೆ ಅನ್ನೋದು ತಿಳಿಯುತ್ತೆ: ನೀವು ಇಲ್ಲಿವರೆಗೆ ಒಬ್ಬರೆ, ನಿಮಗೆ ಬೇಕಾದಂತೆ ವಾಸಿಸುತ್ತಿದ್ದಿರಿ. ಆದರೆ ಮದುವೆ ಎಂದ ಮೇಲೆ ನಿಮ್ಮ ಪ್ರೈವೆಟ್ ಸ್ಪೇಸ್ ನಲ್ಲಿ ಇನ್ನೊಬ್ಬ ವ್ಯಕ್ತಿಯೂ ಇರಬೇಕಾಗುತ್ತೆ. ನೀವು ಹೊಂದಿಕೊಳ್ಳಬೇಕು, ರಾಜಿ ಮಾಡಿಕೊಳ್ಳಬೇಕು, ಇನ್ನೊಬ್ಬರನ್ನು ನಿಮ್ಮ ಸ್ಪೇಸ್ ಗೆ ಸ್ವಾಗತಿಸಬೇಕು.. ಪ್ರವಾಸದಲ್ಲಿ, ನೀವಿಬ್ಬರೂ ಜೊತೆಯಾಗಿದ್ದರೆ, ಯಾವ ರೀತಿ ಹೊಂದಾಣಿಕೆ ಮಾಡಬಹುದು, ರಾಜಿ ಮಾಡಿಕೊಳ್ಳಬಹುದು ಅನ್ನೋದು ತಿಳಿಯುತ್ತೆ.
ಮಧುರ ನೆನಪುಗಳ ಖಜಾನೆ: ನೀವು ಪ್ರವಾಸದಲ್ಲಿ ಜಗಳವಾಡಬಹುದು ಆದರೆ ನೀವು ಹೊಂದಾಣಿಕೆ ಸಹ ಮಾಡಿಕೊಳ್ಳುತ್ತೀರಿ ಮತ್ತು ಜೊತೆಗೆ ಕೆಲವೊಂದು ರೊಮ್ಯಾಂಟಿಕ್ ಮೂಮೆಂಟ್ ಗಳು (romantic moment) ಸಹ ನಡೆಯಬಹುದು. ಪ್ರವಾಸದಲ್ಲಿ ನೀವು ನೋಡಿದ ಜಾಗ, ಪಡೆದುಕೊಂಡ ಮಧುರ ನೆನಪು, ರೊಮ್ಯಾಂಟಿಕ್ ಕ್ಷಣಗಳು ಎಲ್ಲವೂ ಸೇರಿ ಮಧುರ ನೆನಪುಗಳ ಖಜಾನೆ ರೂಪುಗೊಳ್ಳುತ್ತದೆ.
ಪ್ರವಾಸದಿಂದ ನೀವು ಹಿಂತಿರುಗಿದ ನಂತರ, ನೀವು ಅವರನ್ನು ಮದುವೆಯಾಗುವ ಮೂಲಕ ಸರಿಯಾದ ಕೆಲಸವನ್ನು ಮಾಡುತ್ತಿದ್ದೀರಾ ಅಥವಾ ಇಲ್ಲವೇ ಎಂಬ ಅನುಮಾನಗಳಿಗೆ ನಿಮ್ಮ ತಲೆಯಲ್ಲಿ ಉತ್ತರಗಳು ಇರುತ್ತವೆ. ಒಟ್ಟಿಗೆ ಪ್ರಯಾಣಿಸುವುದು ನಿಮ್ಮನ್ನು ಹತ್ತಿರ ತರುವುದಲ್ಲದೆ, ನೀವು ನಿಜವಾಗಿಯೂ ಈ ವ್ಯಕ್ತಿಯೊಂದಿಗೆ ಜೀವನ ಕಳೆಯಲು ತಯಾರಿದ್ದೀರಾ ಅನ್ನೋದು ತಿಳಿಯುತ್ತೆ. ಆದ್ದರಿಂದ ನಿಮ್ಮ ಜೀವನದ ಅತಿದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ನೀವು ಅವರೊಂದಿಗೆ ಪ್ರವಾಸಕ್ಕೆ ಹೋಗುವುದನ್ನು ಖಚಿತಪಡಿಸಿಕೊಳ್ಳಿ.