ಕಾಮಾಸಕ್ತಿ ಹೆಚ್ಚು, ಕಡಿಮೆಯಾಗೋದ್ರಲ್ಲೇ ತಿಳೀಬಹುದು ಆರೋಗ್ಯ ಸಮಸ್ಯೆ

First Published | Sep 27, 2023, 6:12 PM IST

ಕಾಮಾಸಕ್ತಿಯು ನಿಮ್ಮ ಆರೋಗ್ಯ ಮತ್ತು ಮನಸ್ಥಿತಿ ಹೇಗಿದೆ ಅನ್ನೋದನ್ನು ಸಹ ಹೇಳುತ್ತೆ ಅನ್ನೋದು ಗೊತ್ತಾ ನಿಮಗೆ? ಲೈಂಗಿಕತೆಯ ಬಯಕೆ ಯಾವಾಗ ಕಡಿಮೆಯಾಗುತ್ತದೆ ಮತ್ತು ಲೈಂಗಿಕ ಬಯಕೆ ಯಾವಾಗ ಹೆಚ್ಚಾಗುತ್ತದೆ ಎಂದು ತಿಳಿಯಿರಿ
 

ಕೆಲವೊಮ್ಮೆ ನಿಮಗೆ ಲೈಂಗಿಕ ಆಸಕ್ತಿ ತುಂಬಾನೆ ಇರುತ್ತದೆ, ಆದರೆ ಕೆಲವೊಮ್ಮೆ ಯಾವುದೇ ರೀತಿಯ ಫೀಲ್ ಬರೋದೆ ಇಲ್ಲ. ವಾಸ್ತವವಾಗಿ, ನಿಮ್ಮ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯು ಮಲಗುವ ನಿಮ್ಮ ಪ್ರವೃತ್ತಿಯನ್ನು ಬದಲಾಯಿಸುತ್ತದೆ. ಆಗಾಗ್ಗೆ ನೀವು ನಿಮ್ಮ ಕಾಮಾಸಕ್ತಿಯಲ್ಲಿ ಏರಿಳಿತಗಳನ್ನು ಅನುಭವಿಸುತ್ತೀರಿ, ಅಂದರೆ ಲೈಂಗಿಕ ಬಯಕೆ. ಆದರೆ ಇದು ಏಕೆ ಸಂಭವಿಸುತ್ತದೆ? ನಿಮ್ಮ ಆರೋಗ್ಯದ ಬದಲಾಗುತ್ತಿರುವ ಸ್ಥಿತಿಯು ಕಾಮಾಸಕ್ತಿಯಲ್ಲಿನ ಬದಲಾವಣೆಗೆ ಕಾರಣವಾಗಬಹುದು. 
 

ಕಾಮಾಸಕ್ತಿಯು (sex drive) ನಿಮ್ಮ ಆರೋಗ್ಯದ ಸ್ಥಿತಿಯನ್ನು ಹೇಳುತ್ತದೆ, ಅದು ಸಾಮಾನ್ಯವಾಗಿದ್ದರೆ, ನಿಮ್ಮ ಆರೋಗ್ಯ ಸ್ಥಿತಿಯೂ ಸಾಮಾನ್ಯ ಎಂದು ಅರ್ಥಮಾಡಿಕೊಳ್ಳಿ, ಕಾಮಾಸಕ್ತಿ ಇದ್ದಕ್ಕಿದ್ದಂತೆ ಹೆಚ್ಚಿದ್ದರೆ ಅಥವಾ ಕಡಿಮೆಯಾದರೆ, ನೀವು ಆರೋಗ್ಯ ಸ್ಥಿತಿ ಹದಗೆಟ್ಟಿದೆ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಮಹಿಳೆಯರು ಇದರ ಬಗ್ಗೆ ತಿಳಿದುಕೊಳ್ಳಬೇಕು.
 

Tap to resize

ಯಾವ ಆರೋಗ್ಯ ಪರಿಸ್ಥಿತಿಗಳು ಕಾಮಾಸಕ್ತಿಯ ಕೊರತೆಗೆ ಕಾರಣವಾಗುತ್ತವೆ ಎಂದು ತಿಳಿಯಿರಿ
ಒತ್ತಡ ಮತ್ತು ಆಯಾಸ (Stress and tiredness)

ಕೆಲಸದ ಒತ್ತಡ (Work Stress), ಕುಟುಂಬ ಅಥವಾ ಸಾಮಾನ್ಯ ದೈನಂದಿನ ಅಭ್ಯಾಸಗಳ ಒತ್ತಡವು ನಿಮ್ಮ ಮನಸ್ಸನ್ನು ಲೈಂಗಿಕ ಬಯಕೆಯಿಂದ ಬೇರೆಡೆಗೆ ತಿರುಗಿಸುವ ಮೂಲಕ ನಿಮ್ಮ ಸೆಕ್ಸ್ ಡ್ರೈವನ್ನು  ಕಡಿಮೆ ಮಾಡುತ್ತದೆ. ದೀರ್ಘಕಾಲದ ಒತ್ತಡವು ನಿಮ್ಮ ಹಾರ್ಮೋನ್ ಮಟ್ಟದಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು, ಇದರ ಪರಿಣಾಮವಾಗಿ ಕಾಮಾಸಕ್ತಿಯ ಕೊರತೆಯ ಭಾವನೆ ಉಂಟಾಗುತ್ತದೆ.

ಖಿನ್ನತೆ (depression)
ಕಡಿಮೆ ಸ್ವಾಭಿಮಾನ, ಹತಾಶೆಯ ಭಾವನೆಗಳು ಇವೆಲ್ಲವೂ ಖಿನ್ನತೆಯ ಚಿಹ್ನೆಗಳಾಗಿವೆ. ಈ ಎಲ್ಲಾ ಪರಿಸ್ಥಿತಿಗಳು ನಿಮ್ಮಲ್ಲಿ ಕಾಮಾಸಕ್ತಿಯ ಕೊರತೆಯನ್ನು ಉಂಟುಮಾಡಬಹುದು. ಖಿನ್ನತೆಯು ಕಾಮಾಸಕ್ತಿಯನ್ನು ನಿಯಂತ್ರಿಸಲು ಸಹಾಯ ಮಾಡುವ ನರಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಕಾಮಾಸಕ್ತಿಯ ಕೊರತೆಯ ಜೊತೆಗೆ ನೀವು ಖಿನ್ನತೆಯ ಇತರ ರೋಗ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ನಿಮಗೆ ಯಾವ ವಿಷಯದ ಕಡೆಗೂ ಒಲವಿರೋದಿಲ್ಲ. 

ಆತಂಕ (anxiety)
ಒತ್ತಡವು ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಮಟ್ಟದ ಕಾರ್ಟಿಸೋಲ್ ಲೈಂಗಿಕ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ, ಇದು ನಿಮ್ಮ ಲೈಂಗಿಕ ಡ್ರೈವ್ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಸ್ಥಿತಿಯಲ್ಲಿ, ನೀವು ಕಡಿಮೆ ಕಾಮಾಸಕ್ತಿಯನ್ನು ಎದುರಿಸಬೇಕಾಗಬಹುದು.

ಲೈಂಗಿಕ ದೌರ್ಜನ್ಯ (Molestation)
ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದಂತಹ ಆಘಾತವನ್ನು ಅನುಭವಿಸುವುದು ನಿಮ್ಮ ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರಬಹುದು. ಕಾಮಾಸಕ್ತಿಯ ಕೊರತೆಯನ್ನು ಸಾಮಾನ್ಯವಾಗಿ ಈ ಸ್ಥಿತಿಯಲ್ಲಿ ಅನುಭವಿಸಲಾಗುತ್ತದೆ.
 

ಮದ್ಯಪಾನ, ಧೂಮಪಾನ ಅಥವಾ ಇತರ ಮಾದಕವಸ್ತುಗಳು (Smoking, drinking)
ಅತಿಯಾದ ಮದ್ಯಪಾನ ಮತ್ತು ಮಾದಕವಸ್ತುಗಳನ್ನು ಅನುಚಿತವಾಗಿ ಬಳಸುವುದು ಸೆಕ್ಸ್ ಡ್ರೈವ್ ಕಡಿಮೆಯಾಗಲು ಕಾರಣವಾಗಬಹುದು. ಧೂಮಪಾನವು ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಗ್ರಹಿಸುತ್ತದೆ, ಇದು ಕಾಮಾಸಕ್ತಿಯ ಕೊರತೆಗೆ ಕಾರಣವಾಗಬಹುದು.

ಹೆಚ್ಚಿನ ಕಾಮಾಸಕ್ತಿಗೆ ಕಾರಣವಾದ ಆರೋಗ್ಯ ಪರಿಸ್ಥಿತಿಗಳನ್ನು ತಿಳಿದುಕೊಳ್ಳಿ
ಅತಿಯಾದ ವ್ಯಾಯಾಮ (heavy workout)

ನಿಮ್ಮ ಸೆಕ್ಸ್ ಡ್ರೈವ್ ಸಾಮಾನ್ಯಕ್ಕಿಂತ ಹೆಚ್ಚಾಗಲು ಒಂದು ಕಾರಣವೆಂದರೆ ಹೆಚ್ಚಿದ ದೈಹಿಕ ಚಟುವಟಿಕೆ ಅಥವಾ ತೂಕ ನಷ್ಟ. ಪಬ್ಮೆಡ್ ಸೆಂಟ್ರಲ್ ನಡೆಸಿದ 2018ರ ಅಧ್ಯಯನವು ದೈಹಿಕ ಸಾಮರ್ಥ್ಯ ಮತ್ತು ಹೆಚ್ಚಿನ ಲೈಂಗಿಕ ಡ್ರೈವ್ ನಡುವೆ ಸಕಾರಾತ್ಮಕ ಸಂಬಂಧವನ್ನು ಕಂಡು ಹಿಡಿದಿದೆ. ವಾಸ್ತವವಾಗಿ, ಮಹಿಳೆಯರಲ್ಲಿ, ಪ್ರಚೋದನೆಯು ಹೃದಯರಕ್ತನಾಳದ ಸಹಿಷ್ಣುತೆಯಿಂದ ಗಮನಾರ್ಹವಾಗಿ ಪ್ರಭಾವಿತವಾಗಿರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳು (hormone imbalance)
ಲೈಂಗಿಕ ಹಾರ್ಮೋನುಗಳಾದ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟಗಳು ನಿಮ್ಮ ಜೀವಿತಾವಧಿಯಲ್ಲಿ ಬದಲಾಗಬಹುದು, ಆದ್ದರಿಂದ ಇದು ನಿಮ್ಮ ಲೈಂಗಿಕ ಡ್ರೈವ್ ಮೇಲೂ ಪರಿಣಾಮ ಬೀರಬಹುದು. ಈ ಹಾರ್ಮೋನುಗಳಲ್ಲಿನ ಬದಲಾವಣೆಗಳಿಂದಾಗಿ, ಹೆಚ್ಚಿನ ಕಾಮಾಸಕ್ತಿಯನ್ನು ಎದುರಿಸಬೇಕಾಗಬಹುದು. ನಿಮಗೂ ಅದೇ ಆಗುತ್ತಿದ್ದರೆ, ನಿಮ್ಮ ಹಾರ್ಮೋನುಗಳು ಬದಲಾಗುತ್ತಿರಬಹುದು.

ಸ್ಟೀರಾಯ್ಡ್ ಬಳಕೆ (using steroid)
ಮಹಿಳೆಯರಲ್ಲಿ, ಅಂಡೋತ್ಪತ್ತಿ ಮಾಡುವ ಮೊದಲು ಮತ್ತು ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟ ಹೆಚ್ಚಾಗುತ್ತದೆ, ಇದು ಸೆಕ್ಸ್ ಡ್ರೈವ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪುರುಷರಲ್ಲಿ ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟವು ಹೆಚ್ಚಿನ ಕಾಮಾಸಕ್ತಿಗೆ ಸಂಬಂಧಿಸಿದೆ. ಸ್ಟೀರಾಯ್ಡ್ಗಳನ್ನು ಬಳಸುವ ಯುವಕರು ಮತ್ತು ಕ್ರೀಡಾಪಟುಗಳಲ್ಲಿ ಹೆಚ್ಚಿನ ಮಟ್ಟದ ಟೆಸ್ಟೋಸ್ಟೆರಾನ್ ಸಾಮಾನ್ಯ.

ಅಂಡೋತ್ಪತ್ತಿ ಸಮಯದಲ್ಲಿ (fertility period)
ಋತುಚಕ್ರದ ಮೊದಲ ಕೆಲವು ದಿನಗಳಲ್ಲಿ, ಹಾರ್ಮೋನ್ ಮಟ್ಟವು ಕಡಿಮೆ ಇರುತ್ತದೆ, ಈಸ್ಟ್ರೊಜೆನ್ ಮಟ್ಟವು ಸುಮಾರು 4 ಅಥವಾ 5 ನೇ ದಿನದಿಂದ ಹೆಚ್ಚಾಗಲು ಪ್ರಾರಂಭಿಸುತ್ತದೆ, ಏಕೆಂದರೆ ಅಂಡಾಶಯವು ಅಂಡಾಣು ಬಿಡುಗಡೆಗೆ ಸಿದ್ಧವಾಗಲು ಪ್ರಾರಂಭಿಸುತ್ತದೆ. 10 ನೇ ದಿನದ ಸುಮಾರಿಗೆ, ಈಸ್ಟ್ರೊಜೆನ್ ಮಟ್ಟವು ವೇಗವಾಗಿ ಏರಲು ಪ್ರಾರಂಭಿಸುತ್ತದೆ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಸಹ ಏರಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ಸೆಕ್ಸ್ ಡ್ರೈವ್ ವಿಶೇಷವಾಗಿ ಹೆಚ್ಚಾಗಿರುವುದನ್ನು ನೀವು ಅನುಭವಿಸಬಹುದು.
 

Latest Videos

click me!