Srusthi Deshmukh: ಕರ್ನಾಟಕ - ಭೋಪಾಲ್‌ಗೆ ನಂಟು ಬೆಸೆದ IAS ಲವ್ ಸ್ಟೋರಿ

First Published | Sep 29, 2023, 4:33 PM IST

ಐಎಎಸ್ ಪ್ರೇಮಕಥೆ ಪ್ರತಿದಿನ ವೈರಲ್ ಆಗುತ್ತಲೇ ಇದೆ. ಅನೇಕ ಯುವಕರು ತಮ್ಮ ಜೀವನದಿಂದ ಸ್ಫೂರ್ತಿ ಪಡೆಯುತ್ತಾರೆ ಮತ್ತು ಯಶಸ್ಸಿನ ಏಣಿಯನ್ನು ಏರುತ್ತಾರೆ. ಆದ್ದರಿಂದ ಐಎಎಸ್ ಸೃಷ್ಟಿ ದೇಶಮುಖ್ ಮತ್ತು ಐಎಎಸ್ ನಾಗಾರ್ಜುನ ಗೌರ್ ಅವರ ಪ್ರೇಮಕಥೆಯನ್ನು ಹೇಳೋಣ.

ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಫೇಮಸ್ IAS ಸೃಷ್ಟಿ ದೇಶ್ ಮುಖ್: IAS ಸೃಷ್ಟಿ ಜಯಂತ್ ದೇಶ್ ಮುಖ್ (Jayant Deshmukh) ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಲ್ಲಿರುವ ಅಧಿಕಾರಿಯಾಗಿದ್ದಾರೆ. ಅವರ ಪರ್ಸನಲ್ ಲೈಫ್ ನಿಂದ ಹಿಡಿದು, ಅವರ ಕೆಲಸದವರೆಗೆ ಇವರು ಭಾರಿ ಚರ್ಚೆಯಲ್ಲಿದ್ದಾರೆ. ಸದ್ಯ ಅವರ ರಿಲೇಶಿನ್ ಶಿಪ್ ಬಗ್ಗೆ ಒಂದೆರಡು ಮಾತುಗಳನ್ನಾಡೋಣ. 

IAS ಸೃಷ್ಟಿಯ ಲವ್ ಸ್ಟೋರಿ: ಸೃಷ್ಟಿ ಜಯಂತ್ ದೇಶ್ ಮುಕ್ ಅವರ ಮದುವೆ 2022 ರ ಏಪ್ರಿಲ್ ನಲ್ಲಿ ಬಹಳ ಅದ್ಧೂರಿಯಾಗಿ ನಡೆದಿತ್ತು. ಇವರ ಪತಿ ನಾಗಾರ್ಜುನ ಗೌಡ ಸಹ ಐಎಎಸ್ ಆಫೀಸರ್. ಈ ಇಬ್ಬರು IAS ಅಧಿಕಾರಿಗಳ ಲವ್ ಸ್ಟೋರಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. 

Tap to resize

IAS ಟ್ರೈನಿಂಗ್ ಸಮಯದಲ್ಲಿ ಆರಂಭವಾದ ಲವ್ ಸ್ಟೋರಿ: 2019 ರಲ್ಲಿ ಭೋಪಾಲ್ ನ ಸೃಷ್ಟಿ ಜಯಂತ್ ಯುಪಿಎಸ್ ಸಿ ಪರೀಕ್ಷೆ (UPSC exam) ಪಾಸ್ ಆಗಿದ್ದರು. ಮಸೂರಿಯಲ್ಲಿ ಟ್ರೈನಿಂಗ್ ಸಮಯದಲ್ಲಿ ಇವರು ನಾಗಾರ್ಜುನ ಗೌಡ ಅವರನ್ನು ಭೇಟಿಯಾಗಿದ್ದರು.

ಕರ್ನಾಟಕದ ಹುಡುಗ ನಾಗಾರ್ಜುನ್: ಕರ್ನಾಟಕದವರಾದ ನಾಗಾರ್ಜುನ್ ಮೊದಲಿಗೆ ವೈದ್ಯಕೀಯ ಪದವಿ ಪಡೆದಿದ್ದರು. ಇದಾದ ನಂತರ ಯುಪಿಎಸ್’ಸಿ ಕ್ಲಿಯರ್ ಮಾಡಿ ಐಎಎಸ್ ಅಧಿಕಾರಿಯಾದರು. ಇವರು ಸಹ ಮಸೂರಿಯಲ್ಲಿ ಟ್ರೈನಿಂಗ್ ಗೆ ಸೇರ್ಪಡೆಯಾಗಿದ್ದರು. 
 

ಟ್ರೈನಿಂಗ್ ಜೊತೆಗೆ ರೊಮ್ಯಾನ್ಸ್: ಐಎಎಸ್ ಟ್ರೈನಿಂಗ್ (IAS Training) ಸಮಯದಲ್ಲಿ ಸೃಷ್ಟಿ ಮತ್ತು ನಾಗಾರ್ಜುನ್ ಇಬ್ಬರೂ ಸ್ನೇಹಿತರಾಗಿದ್ದರು. ಬಳಿಕ ಸ್ನೇಹವು ಪ್ರೀತಿಗೆ ತಿರುಗಿತು. ಒಬ್ಬರಿಗೊಬ್ಬರು ಪ್ರೀತಿಯನ್ನು ಹೇಳಿ, ಒಪ್ಪಿಕೊಂಡಿದ್ದು ಆಯ್ತು. 

ಒಂದೂವರೆ ವರ್ಷ ಲವ್, ಬಳಿಕ ಮದುವೆ: ಸೃಷ್ಟಿ ಮತ್ತು ನಾಗಾರ್ಜುನ್ ಇಬ್ಬರೂ ಸುಮಾರು ಒಂದೂವರೆ ವರ್ಷ ಡೇಟಿಂಗ್ ಮಾಡಿದ್ದರು. ಇದಾದ ನಂತರ ಇಬ್ಬರೂ 2021 ರಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡರು. ಆ ಮೂಲಕ ಭೋಪಾಲ್ ನ ಹುಡುಗಿ ಕರ್ನಾಟಕದ ಸೊಸೆಯಾದರು. 

ಅದ್ದೂರಿ ಮದುವೆ: ಸೃಷ್ಟಿ ಮತ್ತು ನಾಗಾರ್ಜುನ್ ಇಬ್ಬರೂ ಏಪ್ರಿಲ್ 2022 ರಲ್ಲಿ ಅದ್ಧೂರಿಯಾಗಿ ಮದುವೆಯಾದರು. ತಮ್ಮ ಮದುವೆಯಲ್ಲಿ ನಾಗಾರ್ಜುನ್ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದರು. ಅದರ ವಿಡಿಯೋವನ್ನು ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. 
 

ಮದುವೆ ನಂತರದ ಜೀವನ ಹೀಗಿತ್ತು: ಬೇರೆ ಬೇರೆ ರಾಜ್ಯದವರಾದ ಇಬ್ಬರದ್ದೂ ಬೇರೆ ಬೇರೆ ಸಂಪ್ರದಾಯವಾಗಿದ್ದರೂ ಸಹ ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳನ್ನು ಸಹ ಕಾಣಬಹುದು. 

Latest Videos

click me!