ಸ್ನೇಹಿತೆ ಬೇಕೆಂಬ ಹಂಬಲ
ಬಹುತೇಕ ಎಲ್ಲಾ ಪುರುಷರು, ಮನೆಯಲ್ಲಿ ಸುಂದರವಾದ ಹೆಂಡತಿಯನ್ನು ಹೊಂದಿದ್ದರೂ ಸಹ, ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಳ್ಳಲು ಹಂಬಲಿಸುತ್ತಾರೆ. ಯಾಕೆಂದರೆ ಅವರಿಗೆ ಉತ್ತಮ ಸ್ನೇಹಿತೆಯ ಅಗತ್ಯವಿರುತ್ತದೆ. ಯಾಕೆಂದರೆ ಅವರು ಹೆಂಡತಿಗೆ ಎಲ್ಲಾ ವಿಷಯವನ್ನು ಹೇಳಲು ಸಾಧ್ಯವಾಗುವುದಿಲ್ಲ. ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಲು ಅವರಿಗೆ ಸ್ನೇಹಿತೆಯ ಅಗತ್ಯವಿರುತ್ತದೆ. ಹೀಗಾಗಿ ಸಂಬಂಧದಲ್ಲಿ ಯಾವತ್ತೂ ಪ್ರೀತಿಯ ಜೊತೆ ಸ್ನೇಹವನ್ನು ಕಾಪಾಡಿಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗುವ ಅಪಾಯವಿದೆ.
ಪ್ರಬುದ್ಧತೆಯ ಕೊರತೆ
ಕೆಲವು ಪುರುಷರಿಗೆ ಪ್ರಬುದ್ಧತೆಯ ಕೊರತೆಯಿದೆ. ಸಂಸಾರಸ್ಥರಾದೂ ಸಹ ತಮ್ಮ ಜೀವನದಲ್ಲಿ ಒಮ್ಮೆ ಸಂಬಂಧವನ್ನು ಹೇಗೆ ಬದ್ಧಗೊಳಿಸಬೇಕೆಂದು ಅವರಿಗೆ ತಿಳಿದಿಲ್ಲ. ಅಂತಹವರು ತಮ್ಮ ಹೆಂಡತಿಯನ್ನು ಬಿಟ್ಟು ಬೇರೆ ಮಹಿಳೆಯೊಂದಿಗೆ ಸಂಬಂಧವನ್ನು ಪ್ರಾರಂಭಿಸಲು ನೋಡುತ್ತಾರೆ. ಈ ಮೂಲಕ ಮನೆಯಿಂದ ಹೊರಗೆ ಖುಷಿಯನ್ನು ಕಂಡುಕೊಳ್ಳಲು ಯತ್ನಿಸುತ್ತಾರೆ.
ಹೆಂಡತಿ ಬಗ್ಗೆ ನಿರಾಸಕ್ತಿ
ಅನೇಕ ಪುರುಷರಿಗೆ ಮದುವೆಯಾಗವ ವರೆಗೆ ಮಾತ್ರ ಹೆಂಡತಿಯ ಬಗ್ಗೆ ಆಸಕ್ತಿಯಿರುತ್ತದೆ. ಮದುವೆಯ ನಂತರ ಆಕೆಯ ಮೇಲಿನ ಆಸಕ್ತಿ ಹೊರಟು ಹೋಗುತ್ತದೆ. ಅನೇಕ ಪುರುಷರಿಗೆ ಈ ಅಭ್ಯಾಸವಿದೆ. ಒಮ್ಮೆ ಅವರು ಬಯಸಿದ್ದನ್ನು ಕಂಡುಕೊಂಡ ನಂತರ ಅವರು ಬೇಸರಗೊಳ್ಳುತ್ತಾರೆ. ಹಾಗೆ ಬೇಜಾರಾದಾಗ ಹೆಂಡತಿಯ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ಇದರ ಜೊತೆಯಲ್ಲೇ ಇನ್ನೊಬ್ಬ ಮಹಿಳೆಯ ಸಂಪರ್ಕ ಬೇಕು ಅನಿಸುತ್ತೆ. ಹೀಗಾದಾಗ ಪುರುಷರು ಮನೆಯಿಂದ ಹೊರಗೆ ಬೇರೆ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಳ್ಳಲು ಉತ್ಸುಕರಾಗುತ್ತಾರೆ.
ದಾಂಪತ್ಯದಲ್ಲಿ ಜಗಳ
ವೈವಾಹಿಕ ಜೀವನ ಚೆನ್ನಾಗಿದ್ದರಷ್ಟೇ ಪುರುಷರಿಗೆ ಮತ್ತೊಬ್ಬರ ನೆನಪು ಬರುವುದಿಲ್ಲ. ಅದರ ಬದಲು ದಾಂಪತ್ಯದಲ್ಲಿ ಆಗಾಗ ಜಗಳವಾಗುತ್ತಿದ್ದರೆ ಮ್ಯಾರೀಡ್ ಲೈಫ್ ಬೋರೆನಿಸಲು ಶುರುವಾಗುತ್ತದೆ. ಇಂಥಾ ಸಂದರ್ಭದಲ್ಲಿ ಮತ್ತೊಬ್ಬಳಲ್ಲಿ ಪ್ರೀತಿ ಹುಡುಕಲು ಶುರು ಮಾಡುತ್ತಾರೆ. ಮದುವೆಯಾದ ನಂತರ ದಂಪತಿಗಳ ನಡುವೆ ಸಣ್ಣ-ದೊಡ್ಡ ಜಗಳ ನಡೆಯುವುದು ಸಹಜ. ಆದರೆ, ಆ ಜಗಳಗಳಿಂದ ತಮ್ಮ ನಡುವೆ ಪಾಸಿಟಿವಿಟಿ ಕಡಿಮೆಯಾಗಿದೆ, ನೆಗೆಟಿವಿಟಿ ಬಂದಿದೆ ಎಂದು ಹಲವರು ಭಾವಿಸುತ್ತಾರೆ. ಇದರೊಂದಿಗೆ ಹೆಂಡತಿ ಯಾವಾಗಲೂ ನೆಗೆಟಿವ್ ಎಂಬ ಭಾವನೆಗೆ ಬರುತ್ತಾರೆ. ಪರಿಣಾಮವಾಗಿ ಅವರು ಧನಾತ್ಮಕವಾಗಿ ಕಾಣುವ ಹೊರನೋಟಕ್ಕೆ ಆಕರ್ಷಿತರಾಗುತ್ತಾರೆ.
ಲೈಂಗಿಕ ಜೀವನದಲ್ಲಿ ಸಮಸ್ಯೆ
ವೈವಾಹಿಕ ಸಂಬಂಧ ಸಲೀಸಾಗಿ ನಡೆಯುತ್ತಿದ್ದರೂ.. ದಿನವೂ ಏಕಾತನತೆ ಪುರುಷರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಉತ್ಸಾಹ ಬಯಸಿದಾಗಲೂ ಬೇರೊಬ್ಬ ಹೆಣ್ಣಿನ ಜೊತೆ ಸಂಬಂಧ ಹೊಂದಲು ನೋಡುತ್ತಾರೆ. ಪುರುಷರು ತಮ್ಮ ಲೈಂಗಿಕ ಜೀವನ ಉತ್ತಮವಾಗಿಲ್ಲ ಎಂದು ಭಾವಿಸಿದಾಗಲೂ, ಅವರು ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧವನ್ನು ಪ್ರಾರಂಭಿಸುತ್ತಾರೆ. ಇದು ಎಲ್ಲಕ್ಕಿಂತ ದೊಡ್ಡ ಕಾರಣ. ಅನೇಕ ಜನರು ಈ ಕಾರಣಕ್ಕಾಗಿ ಬೇರೆಯವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ.
ಹಣಕಾಸಿನ ಸಮಸ್ಯೆ
ಆರ್ಥಿಕ ಸಮಸ್ಯೆ ಎಲ್ಲರ ಜೀವನದಲ್ಲಿಯೂ ಇರುತ್ತದೆ. ಸಾಧ್ಯವಾದಷ್ಟೂ ಇದನ್ನು ಬಗೆಹರಿಸುತ್ತಾ ಸಾಗಬೇಕು. ಆದರೆ ಪುರುಷರು ಹೀಗೆ ಮಾಡುವುದಿಲ್ಲ. ಹಣಕಾಸಿನ ಸಮಸ್ಯೆ ಎದುರಾದಾಗ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಅಂಥಾ ಸಂದರ್ಭದಲ್ಲಿ ಜವಾಬ್ದಾರಿಯಿಂದ ವಿಮುಖರಾಗಿ ಮತ್ತೊಬ್ಬ ಹೆಣ್ಣಿನತ್ತ ಸಾಗುತ್ತಾರೆ. ಇನ್ನು ಕೆಲವರು ಎಲ್ಲಾ ಸಮಸ್ಯೆಯನ್ನು ಬಗೆಹರಿಸಿ ಮನಸ್ಸಿಗೆ ರಿಲ್ಯಾಕ್ಸ್ ಬೇಕೆಂಬ ನೆಪದಲ್ಲಿ ಇನ್ನೊಬ್ಬಳ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾರೆ.
ಹೆಣ್ಣಿನ ಚಪಲ
ಕೆಲ ಪುರುಷರಿಗೆ ಪತ್ನಿಯಲ್ಲದೆ ಬೇರೆ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಳ್ಲಲು ಕಾರಣವೇ ಬೇಕಿಲ್ಲ. ಬರೀ ಹೆಣ್ಣಿನ ಮೇಲಿನ ಚಪಲದಿಂದಷ್ಟೇ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಳ್ಳೋಕೆ ಶುರು ಮಾಡುತ್ತಾರೆ. ಇದರಿಂದ ದಾಂಪತ್ಯ ಜೀವನವೂ ಹಾಳಾಗುತ್ತದೆ.