ಕೆಟ್ಟ ವೈವಾಹಿಕ ಜೀವನ ಕೊನೆಗೊಳಿಸಲು ಜನರು 4 ವರ್ಷ ಕಾಯೋದ್ಯಾಕೆ?

First Published Jan 3, 2023, 2:21 PM IST

ಸಂಬಂಧವು ನಿಮಗೆ ಹೊರೆಯಾದರೆ, ಅದನ್ನು ಕೊನೆಗೊಳಿಸುವುದು ಉತ್ತಮ. ಆದರೆ ಅಂತಹ ಸಂಬಂಧವನ್ನು ಕೊನೆಗೊಳಿಸಲು ಜನರು 4 ವರ್ಷಗಳವರೆಗೆ ಕಾಯುತ್ತಾರೆ. ಕೆಟ್ಟ ಸಂಬಂಧದಿಂದ ಹೊರ ಬರಲು ಜನರು ನಾಲ್ಕು ವರ್ಷ ಕಾಯೋದು ಯಾಕೆ? ಅನ್ನೋದನ್ನು ನೋಡೋಣ. 
 

ಯಾವುದೇ ಸಂಬಂಧವೂ ಪರ್ಫೆಕ್ಟ್ ಅಲ್ಲ, ಅದರಲ್ಲಿ ಸುಧಾರಣೆಗೆ ಯಾವಾಗಲೂ ಅವಕಾಶವಿರುತ್ತದೆ. ಆದರೆ ನಿಮ್ಮ ಸಂಬಂಧದಲ್ಲಿ ಯಾವುದೇ ಭರವಸೆ ಉಳಿದಿಲ್ಲದಿದ್ದರೆ, ನೀವು ನಿಮ್ಮ ಸಂಗಾತಿಯೊಂದಿಗೆ ಇರಬೇಕೇ? ಇದಕ್ಕೆ ಉತ್ತರ ಖಂಡಿತಾ ಅವರ ಜೊತೆ ಬಾಳಬೇಕಾಗಿಲ್ಲ. ಆದರೆ ನೀವು ಮಾತ್ರ ಅದನ್ನು ಮಾಡುವುದಿಲ್ಲ. ವಾಸ್ತವವಾಗಿ, ಒಬ್ಬ ವ್ಯಕ್ತಿಯು ಕೆಟ್ಟ ಸಂಬಂಧವನ್ನು (bad relationship) ಮುರಿಯುವ ಮೊದಲು ಸುಮಾರು ನಾಲ್ಕು ವರ್ಷಗಳವರೆಗೆ ಕಾಯುತ್ತಾರಂತೆ. ಇದರ ಹಿಂದಿನ ದೊಡ್ಡ ಕಾರಣವೆಂದರೆ ಅವರು ತನ್ನ ಜೀವನವನ್ನು ಏಕಾಂಗಿಯಾಗಿ ಕಳೆಯಲು ಹೆದರುತ್ತಾರೆ.

ಅಂತಾರಾಷ್ಟ್ರೀಯ ಸಂಬಂಧ ತಾಣದ ಸಂಶೋಧನೆಯ ಪ್ರಕಾರ, ಎರಡು ಮಿಲಿಯನ್ ಜನರು ತುಂಬಾ ಕೆಟ್ಟದಾದ ಸಂಬಂಧದಲ್ಲಿ ಕಷ್ಟಪಟ್ಟು ಜೀವಿಸುತ್ತಿದ್ದಾರೆ. ಇದರ ಹೊರತಾಗಿಯೂ, 4 ರಲ್ಲಿ ಒಬ್ಬರು ಮಾತ್ರ ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಬಯಸುತ್ತಾರೆ. ಅದರಲ್ಲೂ ಹೆಚ್ಚಿನ ಜನರು ಒಬ್ಬಂಟಿಯಾಗಿರಲು ಹೆದರಿ ನಾಲ್ಕು ವರ್ಷ ಕಷ್ಟಪಟ್ಟು ಸಂಬಂಧವನ್ನು ಸಹಿಸಿಕೊಂಡು ಬಳಿಕವಷ್ಟೆ ಅದರಿಂದ ಹೊರಬರುತ್ತಾರೆ. 

ಹೆಚ್ಚಿನ ಜನರು ಕೆಟ್ಟ ಸಂಬಂಧದಲ್ಲೇ ಮುಂದುವರೆದುಕೊಂಡು ಹೋಗಲು ಮುಖ್ಯ ಕಾರಣಗಳೆಂದರೆ ಒಬ್ಬಂಟಿಯಾಗಿರುವುದರ ಭಯ, ಕುಟುಂಬ ಸದಸ್ಯರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಭಯ ಮತ್ತು ಸಂಗಾತಿ (life partner) ಮೇಲಿನ ದಯೆ ಈ ಎಲ್ಲಾ ಕಾರಣದಿಂದಾಗಿ ಇಷ್ಟವಿಲ್ಲದಿದ್ದರೂ ಸಹ ಸಂಗಾತಿ ಜೊತೆ ಬಾಳುತ್ತಾರೆ. 

ಸಂಶೋಧನೆ ಏನು ಹೇಳುತ್ತೆ?

ಸಂಶೋಧನೆಯಲ್ಲಿ ಭಾಗವಹಿಸಿದವರಲ್ಲಿ ಸುಮಾರು ಅರ್ಧದಷ್ಟು ಜನರು ಭವಿಷ್ಯದಲ್ಲಿ ತಮ್ಮ ಸಂಗಾತಿಯೊಂದಿಗೆ ತಮ್ಮನ್ನು ತಾವು ನೋಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವು ಜನರು ತಮ್ಮ ವೈವಾಹಿಕ ಜೀವನದಿಂದ (married life) ಇನ್ನೂ ಹೆಚ್ಚಿನದನ್ನು ಬಯಸುತ್ತಾರೆ ಎಂದು ಹೇಳಿದರು. ಉಳಿದ 20 ಪ್ರತಿಶತದಷ್ಟು ಜನರು ಇನ್ನು ಮುಂದೆ ತಮ್ಮ ಸಂಗಾತಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಮತ್ತೊಂದು ಸಂಬಂಧ ಬೆಳೆಸಲು ಆತುರ

ತಮ್ಮ ಸಂಗಾತಿ ತಮಗೆ ಸೂಕ್ತವಲ್ಲ ಎಂದು ತಿಳಿದ ನಂತರವೂ ಅನೇಕ ಜನರು ಸಂಬಂಧದಲ್ಲಿ ಬಲವಂತವಾಗಿ ಉಳಿಯುತ್ತಾರೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಇದು ಅವರ ಆತ್ಮವಿಶ್ವಾಸದ ಮೇಲೆ ನಕಾರಾತ್ಮಕ ಪರಿಣಾಮ(negative effect)  ಬೀರುವುದಲ್ಲದೆ, ಅವರು ಎಂದಿಗೂ ಒಟ್ಟಿಗೆ ಸಂತೋಷವಾಗಿರುವುದಿಲ್ಲ. 

ಮೊದಲ ಸಂಗಾತಿಯಿಂದ ಕೆಟ್ಟ ಅನುಭವವನ್ನು ಪಡೆದಂತಹ ಜನರು ಮೊದಲ ಸಂಬಂಧದ ದುಃಖವನ್ನು ಮರೆತು ಹೊಸ ಸಂಬಂಧವನ್ನು ಬಹಳ ಬೇಗನೆ ಸೇರುತ್ತಾರೆ. ಆದರೆ ಅಂತಹ ಜನರು ಒಂದು ಸಂಬಂಧದಿಂದ ಇನ್ನೊಂದಕ್ಕೆ ಹೋಗುವ ಆತುರಪಡುವುದನ್ನು ತಪ್ಪಿಸಬೇಕು ಮತ್ತು ಅವರ ಸಂತೋಷದ ಬಗ್ಗೆ ಯೋಚಿಸಬೇಕು. ಆತುರದಿಂದ ತೆಗೆದುಕೊಂಡ ನಿರ್ಧಾರ ಮತ್ತೆ ಸಮಸ್ಯೆಯನ್ನು ಉಂಟು ಮಾಡಬಹುದು.

ಬ್ರೇಕಪ್ ಮಾಡುವುದು ಕಷ್ಟ

ದೀರ್ಘಕಾಲದವರೆಗೆ ಸಂಬಂಧದಲ್ಲಿ ಉಳಿಯುವ ಜನರು ಬೇರ್ಪಡುವುದು (breaking up) ಕಷ್ಟ. ಆದರೆ ನೀವು ಉತ್ತಮ ಭಾವನೆಯನ್ನು ಉಂಟುಮಾಡದ ಸಂಬಂಧದಲ್ಲಿ ಬಂಧಿಸಲ್ಪಟ್ಟಿದ್ದರೆ, ಅದರಿಂದ ಬೇರ್ಪಡುವುದರಲ್ಲಿ ಯಾವುದೇ ಹಾನಿಯಿಲ್ಲ. ಅಂತಹ ಸಂಬಂಧದಲ್ಲಿ ಕಷ್ಟಪಟ್ಟು ಜೀವಿಸೋದಕ್ಕಿಂತ ಬೇರೆಯಾಗೋದೆ ಉತ್ತಮ. 

ಕೆಟ್ಟ ಸಂಬಂಧದಿಂದ ಹೊರ ಬಂದು ಹೊಸ ಸಂಬಂಧವನ್ನು ಹೊಂದಿದ ಅನೇಕ ಜನರು ನಮ್ಮ ಜೊತೆ ಇದ್ದಾರೆ.. ಅಂತಹ ಜನರು ಹಿಂದಿನ ಸಂಬಂಧಕ್ಕಿಂತ ಹೆಚ್ಚು ಸಂತೋಷವಾಗಿದ್ದಾರೆ ಎಂದು ಕಂಡುಬಂದಿದೆ. ಆದರೆ ಎರಡನೆ ಬಾರಿ ಸಂಗಾತಿಯನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಮತ್ತು ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ಬೇಕು. ಹಾಗಾದಾಗ ಮಾತ್ರ ನಿಮ್ಮ ಸಂಬಂಧ ಉತ್ತಮವಾಗಿರುತ್ತೆ.

click me!