ವಿವಾದದ ನಡುವೆ ಶೋಯೆಬ್‌ ಮಲೀಕ್‌ ವಿವಾಹವಾಗಿದ್ದ ಸಾನಿಯಾ, 14 ವರ್ಷದ ದಾಂಪತ್ಯದಲ್ಲಿ ಆಗಿದ್ದೇನು?

First Published | Jan 20, 2024, 1:29 PM IST

2010ರ ಏಪ್ರಿಲ್‌ 12 ರಂದು ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್‌ ಮಲೀಕ್‌ ಅವರನ್ನು ವಿವಾಹವಾಗಿದ್ದರು. ಆದರೆ, ವಿವಾಹಕ್ಕೂ ಮುನ್ನ ಆದ ವಿವಾದಗಳು ಒಂದೆರಡಲ್ಲ..

ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲೀಕ್‌ ಅವರ ವಿವಾಹ ಅಧಿಕೃತವಾಗಿ ಕೊನೆಯಾಗಿದೆ. ಶನಿವಾರ ಶೋಯೆಬ್‌ ಮಲೀಕ್‌ ಇನ್ನೊಂದು ಮದುವೆಯಾಗಿದ್ದಾರೆ.

2010ರ ಏಪ್ರಿಲ್‌ 12 ರಂದು ಹೈದರಾಬಾದ್‌ನಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲೀಕ್‌ ವಿವಾಹವಾಗಿದ್ದರು. ಆದರೆ, ಈ ವಿವಾಹಕ್ಕೆ ಎದುರಾದ ವಿಘ್ನಗಳು ಒಂದೆರಡಲ್ಲ.

Tap to resize

ಪಾಕಿಸ್ತಾನಿ ಆಟಗಾರನನ್ನು ಭಾರತದ ಪ್ರಖ್ಯಾತ ಟೆನಿಸ್‌ ಆಟಗಾರ್ತಿ ವಿವಾಹವಾಗುತ್ತಾರೆ ಎನ್ನುವ ಸುದ್ದಿ ಹೊರಬಿದ್ದಾಗ, ಹಿಂದು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಯಾವುದೇ ಕಾರಣಕ್ಕೂ ಸಾನಿಯಾ ಮಿರ್ಜಾ-ಶೋಯೆಬ್‌ ಮಲೀಕ್‌ ವಿವಾಹವಾಗಲು ಬಿಡೋದಿಲ್ಲ ಎಂದಿದ್ದರು. ಇದಕ್ಕಾಗಿ ಸಣ್ಣಪುಟ್ಟ ಪ್ರತಿಭಟನೆಗಳೂ ನಡೆದಿದ್ದವು.

ಇದರ ನಡುವೆ ಆಯೆಷಾ ಸಿದ್ದಿಕಿ ಎನ್ನುವ ಹೈದರಾಬಾದ್‌ ಹುಡುಗಿ, ಶೋಯೆಬ್‌ ಮಲೀಕ್‌ ತನ್ನ ಗಂಡ ಎಂದು ಹೇಳಿದ್ದಳು. ತನಗೆ ಗೊತ್ತಿಲ್ಲದೆ ಆತ ಸಾನಿಯಾ ಮಿರ್ಜಾರನ್ನು ಮದುವೆಯಾಗುತ್ತಿದ್ದಾನೆ ಎಂದು ಹೇಳಿದ್ದಳು.

ಕೊನೆಗೆ ಈಕೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಳು. 8 ವರ್ಷಗಳ ಹಿಂದೆ ಶೋಯೆಬ್‌ ಮಲೀಕ್‌ ಫೋನ್‌ ಮೂಲಕ ತನ್ನ ವಿವಾಹವಾಗಿದ್ದ ಎಂದಿದ್ದಳು.

ಈ ಹಿನ್ನಲೆಯಲ್ಲಿ ಸಾನಿಯಾ-ಶೋಯೆಬ್‌ ಮದುವೆಯಾಗುವ ಮುನ್ನ ಪೊಲೀಸರು ಕೂಡ ಹೈದರಾಬಾದ್‌ನಲ್ಲಿದ್ದ ಸಾನಿಯಾ ಮಿರ್ಜಾ ಮನೆಗೆ ಭೇಟಿ ನೀಡಿ ವಿಚಾರಿಸಿದ್ದರು.

ಮದುವೆಯಾದ ಬಳಿಕ ಚೆನ್ನಾಗಿಯೇ ಇದ್ದ ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲೀಕ್‌ ದುಬೈನಲ್ಲಿ ವಾಸವಾಗಿದ್ದರು. ಇದು ಮಲೀಕ್‌ ಕುಟುಂಬಕ್ಕೆ ಇಷ್ಟವಿದ್ದಿರಲಿಲ್ಲ.

ಇನ್ನು 2018ರಲ್ಲಿ ಪುತ್ರ ಇಝಾನ್‌ ಹುಟ್ಟಿದ ಬಳಿಕ ಇವರಿಬ್ಬರ ದಾಂಪತ್ಯದಲ್ಲಿನ ವಿರಸ ಇನ್ನಷ್ಟು ಹೆಚ್ಚಾಗತೊಡಗಿತು. ಈ ವೇಳೆ ಮೊದಲ ಬಾರಿಗೆ ಡಿವೋರ್ಸ್‌ ರೂಮರ್‌ಗಳು ಬಂದಿದ್ದವು.

ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಲ್ಲಿ ಸಾನಿಯಾ ಹಾಗೂ ಶೋಯೆಬ್‌ ಮಲೀಕ್‌ ಎಲ್ಲಿಯೂ ಒಂದಾಗಿ ಕಾಣಿಸಿಕೊಳ್ಳುತ್ತಲೇ ಇದ್ದಿರಲಿಲ್ಲ.

ಸಾನಿಯಾ ಮಿರ್ಜಾ ಮಾತ್ರವಲ್ಲ ಆಕೆಯ ತಂಗಿ ಅನಾಮ್‌ ಮಿರ್ಜಾ ಕೂಡ ಮೊದಲ ಮದುವೆಯಿಂದ ನೆಮ್ಮದಿ ಕಂಡಿರಲಿಲ್ಲ. ಪ್ರಸ್ತುತ ಆಕೆ ಮೊಹಮದ್‌ ಅಜರುದ್ದೀನ್‌ ಪುತ್ರನನ್ನು ವಿವಾಹವಾಗಿದ್ದಾರೆ.

Breaking: ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲೀಕ್‌, ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

ಸಾನಿಯಾ ಮಿರ್ಜಾ-ಶೋಯೆಬ್‌ ಮಲೀಕ್‌ ಮದುವೆಯ ಆರತಕ್ಷತೆ 2010ರ ಏಪ್ರಿಲ್‌ 15ರಂದು ನಡೆದಿತ್ತು. ಅಂದು ಸಹರಾ ಗ್ರೂಪ್‌ನ ಅಧ್ಯಕ್ಷ ಸುಬ್ರತೋ ರಾಯ್‌ ಸೇರಿಂದತೆ ವಿವಿಧ ಗಣ್ಯರು ಆಗಮಿಸಿದ್ದರು.

ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯಕ್ಕೆ ಹುಳಿ ಹಿಂಡಿದ ಆಯೆಷಾ ಒಮರ್ ಯಾರು ಗೊತ್ತಾ..?

Latest Videos

click me!