ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿದೆ 8 ಕಾರಣಗಳು

First Published | May 15, 2024, 6:06 PM IST

ದಾಂಪತ್ಯ ದ್ರೋಹವೆಂಬುದು ಮೊದಲೆಲ್ಲ ಹೆಚ್ಚಾಗಿ ಪುರುಷರಿಂದ ಆಗುತ್ತಿತ್ತು. ಆದರೆ, ಈ ಶತಮಾನದ ಮಹಿಳೆಯರು ಇದರಲ್ಲೂ ಸಮಾನತೆಯತ್ತ ಸಾಗಿದ್ದಾರೆ. ಇಷ್ಟಕ್ಕೂ ಮಹಿಳೆ ತನ್ನ ಪತಿಗೆ ವಂಚಿಸಲು ಕಾರಣಗಳೇನು?

ದಾಂಪತ್ಯ ದ್ರೋಹವೆಂಬುದು ಮೊದಲೆಲ್ಲ ಹೆಚ್ಚಾಗಿ ಪುರುಷರಿಂದ ಆಗುತ್ತಿತ್ತು. ಆದರೆ, ಈ ಶತಮಾನದ ಮಹಿಳೆಯರು ಇದರಲ್ಲೂ ಸಮಾನತೆಯತ್ತ ಸಾಗಿದ್ದಾರೆ. ಪತಿಗೆ ವಂಚಿಸುವುದಕ್ಕೆ ಇಲ್ಲವೆನ್ನೋ ಮಹಿಳೆಯರ ಶೇಕಡಾವಾರು ಪ್ರಮಾಣವು ಕ್ಷೀಣಿಸುತ್ತಿದೆ. ಆತ ಏನು ಮಾಡಿದರೂ, ಹೇಗೆ ನಡೆಸಿಕೊಂಡರೂ ಪತಿಯೇ ಪರದೈವ ಎನ್ನುವ ಮಹಿಳೆಯರು ಈಗಿಲ್ಲ. ಈಗೇನಿದ್ದರೂ ಟಿಟ್ ಫಾರ್ ಟ್ಯಾಟ್. 

ಇಷ್ಟಕ್ಕೂ ಮಹಿಳೆ ತನ್ನ ಪತಿಗೆ ವಂಚಿಸಲು ಕಾರಣಗಳೇನು? ಮಹಿಳೆ ಮೋಸ ಮಾಡುವ ನಿರ್ಧಾರದ ಹಿಂದಿನ ಕಾರಣಗಳು ಸಂಕೀರ್ಣವಾಗಿರುತ್ತವೆ ಮತ್ತು ಹೆಚ್ಚು ಚರ್ಚೆಯಾಗದೆ ಉಳಿಯುತ್ತವೆ. 

Tap to resize

ಸ್ತ್ರೀ ದಾಂಪತ್ಯ ದ್ರೋಹದ ನಿಗೂಢತೆಯು ಸಾಂಪ್ರದಾಯಿಕ ತಿಳುವಳಿಕೆಯನ್ನು ಮೀರಿಸುತ್ತದೆ. ಸಾಮಾನ್ಯವಾಗಿ ಮಹಿಳೆ ಏಕೆ ಸಂಬಂಧದಲ್ಲಿ ವಂಚಿಸುತ್ತಾಳೆ?

1. ಅತಿಯಾದ ನಿರೀಕ್ಷೆ
ಪುರುಷರು ಮತ್ತು ಮಹಿಳೆಯರು ಇಬ್ಬರೂ ಈಗ ಸಂಬಂಧ ಅಥವಾ ಮದುವೆಯಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ.
ಇಂದು ಪತಿ ಪತ್ನಿ ಸಂಬಂಧಗಳಲ್ಲಿ ಸಂತೋಷ, ಉತ್ತಮ ಲೈಂಗಿಕತೆ, ಸ್ನೇಹ ಮತ್ತು ಹೆಚ್ಚಿನವುಗಳನ್ನು ಇಬ್ಬರೂ ಬಯಸುತ್ತಾರೆ. ಹಾಗಾಗಿ ಒತ್ತಡ ಹೆಚ್ಚು. ಚಲನಚಿತ್ರಗಳು ಕೂಡಾ ಸಂಬಂಧದಿಂದ ಬಯಸುವ ನಿರೀಕ್ಷೆ ಹೆಚ್ಚಿಸುತ್ತವೆ.
ವಿವಾಹದ ಬಳಿಕ ಅತೃಪ್ತಿ ಅಥವಾ ಭಾವನಾತ್ಮಕ ಸಂಪರ್ಕದ ಕೊರತೆಯಂತಹ ಕಾರಣಗಳು ವಿವಾಹೇತರ ಸಂಬಂಧಕ್ಕೆ ಪ್ರಾಥಮಿಕ ಕಾರಣಗಳಾಗಿವೆ. ಅಲ್ಲದೆ, ನಿರೀಕ್ಷೆಯನ್ನು ಆತ ತಲುಪದಿದ್ದಾಗ ಆಕೆ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಸಾಮಾನ್ಯವಾಗಿ ಮಾತನಾಡದ ಭಾವನೆಗಳು ಮೋಸಕ್ಕೆ ದಾರಿ ಮಾಡಿಕೊಡುತ್ತವೆ. 

2. ಗೌರವ ಮತ್ತು ಮೌಲ್ಯೀಕರಣ
ಮಹಿಳೆಗೆ ಭಾವನಾತ್ಮಕ ಸಂಬಂಧ ಹೆಚ್ಚು ಮುಖ್ಯ. ದೈಹಿಕ ಆಕರ್ಷಣೆಗಾಗಿ ಆಕೆ ಸೋಲುವುದು ಕಡಿಮೆಯೇ. ಸಾಮಾನ್ಯವಾಗಿ ಪೂರೈಸದ ಭಾವನಾತ್ಮಕ ಅಗತ್ಯಗಳು- ಪತಿಯು ಆಕೆಯ ಮೌಲ್ಯವನ್ನು ಕಡೆಗಣಿಸುವುದು, ತುಚ್ಚವಾಗಿ ನೋಡುವುದು ಮಾಡಿದಾಗ- ಗೌರವಕ್ಕಾಗಿ ಹಂಬಲಿಸುವ ಆಕೆ, 'ನನ್ನನ್ನು ಬಯಸುವ, ಗೌರವಿಸುವವರು ಹೊರಗಿದ್ದಾರೆ, ನಿನಗೆ ನನ್ನ ಮೌಲ್ಯ ತಿಳಿದಿಲ್ಲವಷ್ಟೇ' ಎಂದು ಅರ್ಥ ಮಾಡಿಸುವ ಹಂತಕ್ಕೆ ಹೋದಾಗ ವಂಚನೆಗಿಳಿಯಬಹುದು.
 

3. ಹೆಣ್ಣು ಹೀಗೇ ಇರಬೇಕೆಂಬ ನಿರೀಕ್ಷೆ
ಪತಿಗೆ ಪತ್ನಿಯು ಹೆಂಡತಿ, ಅತ್ತೆ, ಅಮ್ಮ ಅಥವಾ ಸೊಸೆಯಾಗಿ ಅದ್ಭುತವಾಗಿರಬೇಕು. ಆದರೆ, ಅದೇ ನಿರೀಕ್ಷೆಗಳ ಬೆಟ್ಟ ಪತಿಯ ಮೇಲಿರುವುದಿಲ್ಲ. ಆಕೆಯ ಮೇಲಿನ ಈ ನಿರೀಕ್ಷೆಗಳು ಅವಳಿಗೆ ಭಾರವಾಗಬಹುದು. ಮನೆಯಲ್ಲಿ ಅತ್ತೆಯೊಂದಿಗೆ ಹೊಂದಾಣಿಕೆ ಸಾಧ್ಯವಾಗದಾದಾಗ ಪತಿ ಆಕೆಯನ್ನು ಕಡೆಗಣಿಸಿದರೆ- ಅವಳದೇ ತಪ್ಪು ಎಂದರೆ- ದಾಂಪತ್ಯದಲ್ಲಿ ಆಕೆ ಕಮರಿ ಹೋಗುತ್ತಾಳೆ. ಆಗ ಮನಸ್ಸು ತನ್ನ ಮೇಲೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ನೋಡುವವರ ಕಡೆ ತಿರುಗಬಹುದು. 

4. ಪ್ರತೀಕಾರ
ಕೆಲವು ಮಹಿಳೆಯರಿಗೆ, ದಾಂಪತ್ಯ ದ್ರೋಹವು ಕೇವಲ ಪ್ರತೀಕಾರದ ಕ್ರಿಯೆಯಾಗಿದೆ. ಅವರು ತಮ್ಮ ಭಾವನೆಗಳನ್ನು ಪದೇ ಪದೇ ನೋಯಿಸುವ ತಮ್ಮ ಸಂಗಾತಿಗೆ ತಮ್ಮ ಬೆಲೆ ಅರ್ಥ ಮಾಡಿಸಿವ ಹಟಕ್ಕೆ ಬೀಳಬಹುದು. ಅಥವಾ, ತಿರುಗಿ ದೊಡ್ಡ ನೋವು ಕೊಡಲು ಬಯಸಬಹುದು, ಇದಕ್ಕಾಗಿ ಅವರು ವಿವಾಹೇತರ ಸಂಬಂಧದ ಮೊರೆ ಹೋಗಬಹುದು. 
ಕೆಲವೊಮ್ಮೆ ಗಂಡನಿಂದ ಆಕೆಗೆ ಸುರಕ್ಷತೆಯ ಬ್ಯಾಕಪ್ ಸಿಗದಿದ್ದಾಗ, ಸಂಬಂಧದಲ್ಲಿ ಆಕೆ ಸುರಕ್ಷತೆಯ ಭಾವನೆ ಅನುಭವಿಸದಿದ್ದಾಗ ಬ್ಯಾಕಪ್ ಅಗತ್ಯವಿದೆ ಎಂದು ಆಕೆಗೆ ಅನಿಸಬಹುದು. 

5. ಸ್ವಾಭಿಮಾನ
ಪಾಲುದಾರನು ಅವಳನ್ನು ಸಾಕಷ್ಟು ಹೊಗಳದಿದ್ದರೆ ಅಥವಾ ಆಕಸ್ಮಿಕವಾಗಿ ಅಜ್ಞಾನಿ ಎಂದು ಅರ್ಹತೆ ಪಡೆಯುವ ನಡವಳಿಕೆಯಲ್ಲಿ ತೊಡಗಿಸಿಕೊಂಡರೆ, ಅದು ಹೆಣ್ಣಿನ ಸ್ವಾಭಿಮಾನವನ್ನು ಕೆಣಕುತ್ತದೆ.
ಮೋಸ ಮಾಡುವ ಮಹಿಳೆ ತಾನು ಯೋಗ್ಯ, ಮತ್ತೊಬ್ಬರು ಬಯಸುವಂಥವಳು ಮತ್ತು ಅಪೇಕ್ಷಣೀಯ ಎಂದು ಸ್ವತಃ ಸಾಬೀತುಪಡಿಸಲು ಹೊರಗಿನ ಸಂಬಂಧ ಹುಡುಕಬಹುದು. 
 

6. ಹನಿಮೂನ್ ಫೇಸ್‌ಗಾಗಿ
ವಿವಾಹದ ಬಳಿಕ ಕೆಲ ವರ್ಷಗಳ ನಂತರ ಮೊದಲಿನ ಉತ್ಸಾಹ, ಸಂತೋಷ ಇರುವುದಿಲ್ಲ. ಕಿಡಿಯನ್ನು ಜೀವಂತವಾಗಿಡಲು ಪ್ರಯತ್ನಿಸಿ ಸೋತಾಗ ಆ ರೋಮಾಂಚನಕಾರಿ ಅನುಭವಕ್ಕಾಗಿ ಹೆಣ್ಣು ಮೋಸಕ್ಕೆ ಒಲವು ತೋರಬಹುದು.

7. ಒಂಟಿತನ
ಒಂಟಿತನ ಇಲ್ಲಿ ಇನ್ನೊಂದು ಅಂಶವಾಗಿರಬಹುದು. ಮೋಸ ಮಾಡುವ ಮಹಿಳೆಯು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವ ಪಾಲುದಾರರನ್ನು ಹೊಂದಿರಬಹುದು ಅಥವಾ ಆತ ಈಕೆಗೆ ಯಾವಾಗಲೂ ಲಭ್ಯವಾಗದೆ ಹೋಗುತ್ತಿರಬಹುದು. 

8. ವಾಸ್ತವವು ಕಠಿಣವಾಗಿದ್ದಾಗ
ಹಲವು ಬಾರಿ ಮಹಿಳೆಗೆ ವಿವಾಹ ಬಾಹಿರ ಸಂಬಂಧವು ವಾಸ್ತವದಿಂದ ತಪ್ಪಿಸಿಕೊಳ್ಳುವ ಅಂಶವಾಗಿ ಕೆಲಸ ಮಾಡಬಹುದು. ವಿಶೇಷವಾಗಿ ಪತಿಯು ಡ್ರಗ್ಸ್, ಮದ್ಯ ಮತ್ತಿತರೆ ಚಟ ಹೊಂದಿದ್ದಾಗ, ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾಗ, ಜೀವನದಲ್ಲಿ ಎಲ್ಲವೂ ತಲೆ ಕೆಳಗಾಗಿ ವರ್ತಿಸುತ್ತಿರುವಾಗ ಮೋಸವು ಅವರನ್ನು ಜೀವಂತವಾಗಿ ಅನುಭವಿಸುವಂತೆ ಮಾಡುತ್ತದೆ.
 

Latest Videos

click me!