ನೀನೆ ನನ್ನ ಪ್ರಾಣ ಅಂತಿದ್ದೋರು…. ಇಂದು ಪ್ರೀತಿನೆ ಇಲ್ಲ ಅನ್ನೋಕೆ ಹೇಗೆ ಸಾಧ್ಯ?

First Published | Nov 2, 2023, 3:51 PM IST

ನಿನ್ನೆಯವರೆಗೆ ನಿಮ್ಮನ್ನು ತನ್ನ ಜೀವನ ಎಂದು ಕರೆಯುತ್ತಿದ್ದ ವ್ಯಕ್ತಿ ಇಂದು ನಿಮ್ಮನ್ನು ನೋಡಲು ಇಷ್ಟಪಡುವುದಿಲ್ಲ ಎಂದು ನಂಬುವುದು ತುಂಬಾ ಕಷ್ಟ. ಯಾಕೆ ಹೀಗೆಲ್ಲ ಆಗುತ್ತೆ ಅನ್ನೋದು  ನಿಮಗೆ ತಿಳಿದಿದೆಯೇ? ಇಲ್ಲ ಅಂದ್ರೆ ಇದನ್ನ ಓದಿ…
 

ದೀರ್ಘಕಾಲದವರೆಗೆ ಒಟ್ಟಿಗಿದ್ದ ನಂತರವೂ, ಕಪಲ್ಸ್ ಪರಸ್ಪರ ಬೇರ್ಪಡುತ್ತಾರೆ (Breakups), ಇಬ್ಬರೂ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಅರೇಂಜ್ ಮ್ಯಾರೇಜ್ ಗಳಿಗಿಂತ ಪ್ರೇಮ ವಿವಾಹಗಳಲ್ಲಿ (love marriage) ವಿಚ್ಛೇದನ ಹೆಚ್ಚು ಸಾಮಾನ್ಯ. ಆದರೆ ಯಾಕೆ ಹೀಗೆಲ್ಲಾ ಆಗುತ್ತೆ?  ಕಾಲಾನಂತರದಲ್ಲಿ, ಆ ಇಬ್ಬರು ವ್ಯಕ್ತಿಗಳ ನಡುವೆ ಪ್ರೀತಿಯ ಬೆಂಕಿ ಏಕೆ ಕಡಿಮೆಯಾಗೋದಕ್ಕೆ ಆರಂಭವಾಗುತ್ತೆ? 
 

ಸದ್ಗುರು ಈ ಬಗ್ಗೆ ಒಂದು ವಿಡೀಯೋದಲ್ಲಿ ತಿಳಿಸಿದ್ದಾರೆ. ನೀವು ಸೆಲ್ಫ್ ಸ್ಟಾರ್ಟ್ ಮಷೀನ್ ಆಗಬೇಕಾಗಿರೋದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ. ಇಲ್ಲದಿದ್ದರೆ, ಸ್ವಲ್ಪ ಸಮಯದ ನಂತರ ನೀವು ನಿಮ್ಮ ಸಂತೋಷಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸಲು ಪ್ರಾರಂಭಿಸುತ್ತೀರಿ, ಅವನಿಂದ ಸಂತೋಷವನ್ನು ಪಡೆಯಲು ಪ್ರಯತ್ನಿಸುತ್ತೀರಿ. ಈ ಪ್ರೇಮ ಸಂಬಂಧಗಳು (love relationship) ಬೇಸರ ಮತ್ತು ಭಯಾನಕವಾಗುವ ಸಾಧ್ಯತೆಯೂ ಇದೆ. ಇದಲ್ಲದೆ,ಪ್ರೀತಿ ಇಲ್ಲವಾಗಲು ಕೆಲವು ಕಾರಣಗಳು ಇಲ್ಲಿವೆ. 
 

Tap to resize

ಆಸೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು
ಅದು ಸಂತೋಷವೋ ಅಥವಾ ದುಃಖವೋ, ಮೂಲವು ನಿಮ್ಮೊಳಗೇ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಸದ್ಗುರು ಹೇಳುತ್ತಾರೆ. ನೀವು ಏನಾಗಬೇಕೆಂದು ನಿರ್ಧರಿಸುವುದು ನಿಮಗೆ ಬಿಟ್ಟದ್ದು.

ನೀವು ಸಂತೋಷದ ವ್ಯಕ್ತಿ, ಸ್ವತಂತ್ರರಾಗಿದ್ದರೆ ನಿಮ್ಮ ಸಂಗಾತಿ ನಿಮ್ಮೊಂದಿಗೆ ಇರಲು ಬಯಸುತ್ತಾರೆ. ನೀವು ದುಃಖಿತರಾಗಿದ್ದರೆ, ಅವರು ನಿಮ್ಮನ್ನು ಸ್ವಲ್ಪ ಸಮಯದವರೆಗೆ ಸಹಿಸಿಕೊಳ್ಳುತ್ತಾರೆ. ನಿಮ್ಮ ಆಕಾಂಕ್ಷೆಗಳನ್ನು ಹೇರುವ ಮೂಲಕ ನೀವು ಯಾರಿಂದಲೂ ಪ್ರೀತಿಯನ್ನು ನಿರೀಕ್ಷಿಸಬಾರದು.
 

ಹೊಂದಾಣಿಕೆಯಲ್ಲಿ ಬದಲಾವಣೆ
ಇಬ್ಬರು ವ್ಯಕ್ತಿಗಳು ಒಂದೇ ಆಸಕ್ತಿ, ಮೌಲ್ಯಗಳು ಮತ್ತು ಗುರಿಗಳನ್ನು ಹಂಚಿಕೊಂಡಾಗ ಪ್ರೀತಿ ಹೆಚ್ಚಾಗಿ ಪ್ರಾರಂಭವಾಗುತ್ತದೆ. ಆದರೆ ಈ ಇಬ್ಬರು ವ್ಯಕ್ತಿಗಳು ಕಾಲಾನಂತರದಲ್ಲಿ ವಿಭಿನ್ನ ದಿಕ್ಕುಗಳಲ್ಲಿ ಚಲಿಸಲು ಮತ್ತು ಬದಲಾಗಲು ಪ್ರಾರಂಭಿಸಿದಾಗ, ಇಬ್ಬರ ನಡುವಿನ ಕಂಪ್ಯಾಟಿಬಿಲಿಟಿ (Compatibility) ಅಥವಾ ಹೊಂದಾಣಿಕೆ ದೂರವಾಗುತ್ತದೆ.  ಅಂತಹ ಪರಿಸ್ಥಿತಿಯಲ್ಲಿ, ಭಾವನಾತ್ಮಕ ಸಂಬಂಧ ಮತ್ತು ಪರಸ್ಪರರ ಬಗ್ಗೆ ಉತ್ಸಾಹವನ್ನು ಕಾಪಾಡಿಕೊಳ್ಳುವುದು ಕಷ್ಟ. ಇದರಿಂದ ಜೋಡಿಗಳು ದೂರವಾಗುತ್ತಾರೆ.

ಮನಸು ಬಿಚ್ಚಿ ಮಾತನಾಡದೇ ಇರೋದು
ಮಾತುಕತೆ ಪ್ರತಿಯೊಂದು ಸಂಬಂಧವನ್ನು ಬಲಪಡಿಸಲು ಆಧಾರ. ಅಂತಹ ಪರಿಸ್ಥಿತಿಯಲ್ಲಿ, ದಂಪತಿಗಳು ತಮ್ಮ ಭಾವನೆಗಳು, ಅಗತ್ಯಗಳು ಮತ್ತು ಕಾಳಜಿಗಳನ್ನು ಪರಸ್ಪರ ಹಂಚಿಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸಲು ಪ್ರಾರಂಭಿಸಿದಾಗ, ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇದು ಇಬ್ಬರ ನಡುವೆ ತಪ್ಪು ತಿಳುವಳಿಕೆ, ಹತಾಶೆ ಮತ್ತು ಭಾವನಾತ್ಮಕ ನಿರ್ಲಿಪ್ತತೆಗೆ ಕಾರಣವಾಗುತ್ತದೆ.

ಸಂಘರ್ಷಗಳ ನಿರ್ಲಕ್ಷ್ಯ
ದಂಪತಿಗಳ ನಡುವೆ ಜಗಳಗಳು ಸಾಮಾನ್ಯ, ಮತ್ತು ಇದರ ಅಗತ್ಯ ಕೂಡ ಸ್ವಲ್ಪ ಮಟ್ಟಿಗೆ ಇದೆ. ಆದರೆ ಅನೇಕ ಬಾರಿ ದಂಪತಿಗಳು ಅದನ್ನು ನಿರ್ಲಕ್ಷಿಸುತ್ತಾರೆ ಮತ್ತು ಸಾಮರಸ್ಯವಿಲ್ಲದೆ ಮುಂದುವರಿಯುತ್ತಾರೆ. ಆದರೆ ಗಂಭೀರ ವಿಷಯದ ಬಗ್ಗೆ ಭಿನ್ನಾಭಿಪ್ರಾಯವಿದ್ದಾಗ (missunderstandings), ಅದನ್ನು ಪರಿಹರಿಸದೆ ಬಿಡುವುದು ಸಂಬಂಧ ಕೊನೆಗೊಳ್ಳಲು ಕಾರಣವಾಗುತ್ತದೆ.  ಅದು ಒಂದು ಕಾಲದಲ್ಲಿ ಇಬ್ಬರ ಮಧ್ಯೆ ಇದ್ದ ಪ್ರೀತಿಯನ್ನು ಸಹ ಅಳಿಸಿಹಾಕುತ್ತದೆ.

ವಿಶ್ವಾಸ ದ್ರೋಹ ಮಾಡುವುದು
ಇಬ್ಬರು ವ್ಯಕ್ತಿಗಳು ಪ್ರೇಮ ಸಂಬಂಧದಲ್ಲಿ ಪರಸ್ಪರ ಬದ್ಧರಾಗಿದ್ದರೆ, ಅವರ ನಡುವೆ ಪರಸ್ಪರರ ಬಗ್ಗೆ ಆಳವಾದ ನಂಬಿಕೆ ಇರುತ್ತದೆ. ಪ್ರೀತಿ ದುರ್ಬಲಗೊಳ್ಳಲು ಪ್ರಾರಂಭಿಸುವ ಪರಿಸ್ಥಿತಿಯಲ್ಲಿಯೂ ಇದು ಸಂಬಂಧವನ್ನು ಉಳಿಸಿಕೊಳ್ಳುತ್ತದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯಿಂದ ಮೋಸಹೋದಾಗ, ಅದನ್ನು ಸಹಿಸುವುದು ಕಷ್ಟ. ಈ ವಿಷಯವು ಅವನ ಮನಸ್ಸನ್ನು ಗಾಯಗೊಳಿಸುತ್ತದೆ, ಇದರಿಂದಾಗಿಯೇ ಸಂಗಾತಿಯಿಂದ ದೂರವಾಗ್ತಾರೆ.

Latest Videos

click me!