ಬಾಲಿವುಡ್ ಸೂಪರ್‌ಸ್ಟಾರ್‌ ಆಗಿದ್ದ ಈ ನಟಿಯ ಮದುವೆ 6 ಬಾರಿ ಮುರಿದು ಬಿದ್ದಿತ್ತು!

Published : Nov 02, 2023, 10:24 AM ISTUpdated : Nov 02, 2023, 10:32 AM IST

ಬಾಲಿವುಡ್ ತಾರೆಯರ ಜೀವನ ರೀಲ್‌ ಲೈಫ್‌ನಷ್ಟು ಸರಳವಲ್ಲ. ರೀಲ್‌ನಲ್ಲಿ ಸೂಪರ್‌ಸ್ಟಾರ್‌ ಆಗಿದ್ದು ರಿಯಲ್‌ ಲೈಫ್‌ನಲ್ಲಿ ಕಷ್ಟವನ್ನು ಅನುಭವಿಸಿದ ಹಲವು ನಟ-ನಟಿಯರಿದ್ದಾರೆ. ಹಾಗೆಯೇ ಈ ನಟಿ ನಟನೆಯಲ್ಲಿ ಸೂಪರ್‌ಸ್ಟಾರ್ ಆಗಿದ್ದರೂ ವೈವಾಹಿಕ ಜೀವನದಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದರು. ಬರೋಬ್ಬರಿ ಆರು ಬಾರಿ ಇವರ ಮದುವೆ ಮುರಿದು ಬಿದ್ದಿತ್ತು.

PREV
18
ಬಾಲಿವುಡ್ ಸೂಪರ್‌ಸ್ಟಾರ್‌ ಆಗಿದ್ದ ಈ ನಟಿಯ ಮದುವೆ 6 ಬಾರಿ ಮುರಿದು ಬಿದ್ದಿತ್ತು!

ಬಾಲಿವುಡ್ ತಾರೆಯರ ಜೀವನ ರೀಲ್‌ ಲೈಫ್‌ನಷ್ಟು ಸರಳವಲ್ಲ. ಅದು ಕಂಪ್ಲೀಟ್ ಕಲರ್‌ಫುಲ್ ಆಗಿರುವುದಿಲ್ಲ. ಬದಲಿಗೆ ಬ್ಲ್ಯಾಕ್‌ ಅಂಡ್ ವೈಟ್‌ ಸಹ ಆಗಿರುತ್ತದೆ. ತಮ್ಮ ಜೀವನದಲ್ಲಿ ಕಷ್ಟವನ್ನು ಅನುಭವಿಸಿದ ಹಲವು ನಟ-ನಟಿಯರಿದ್ದಾರೆ. ಹಾಗೆಯೇ ಈ ನಟಿ ನಟನೆಯಲ್ಲಿ ಸೂಪರ್‌ಸ್ಟಾರ್ ಆಗಿದ್ದರೂ ವೈವಾಹಿಕ ಜೀವನದಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದರು. ಬರೋಬ್ಬರಿ ಆರು ಬಾರಿ ಇವರ ಮದುವೆ ಮುರಿದು ಬಿದ್ದಿತ್ತು.

28

ರಾಮ್ ಲಖನ್ ಚಿತ್ರದಲ್ಲಿ ಕೆಲಸ ಮಾಡಿದ ನಟಿ ಸೋನಿಕಾ ಗಿಲ್. ಹಲವಾರು ಸೂಪರ್‌ಸ್ಟಾರ್‌ ನಟರೊಂದಿಗೆ ಕೆಲಸ ಮಾಡಿದ್ದಾರೆ.ರಾಮ್ ಲಖನ್, ತೂ ಮ್ಯಾಗಿನ್ ಮೈನ್ ಸಪೇರಾ, ಕೌನ್ ಕರೇ ಕುರ್ವಾನಿ, ಮೈ ಔರ್ ತುಮ್ ಮತ್ತು ಕಚ್ಚಿ ಕಲಿ ಮುಂತಾದ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಲಖನ್ ಚಿತ್ರದಲ್ಲಿ ವಿವಿಯಾ ಪಾತ್ರವನ್ನು ನಿರ್ವಹಿಸಿದ ಸೋನಿಕಾ ವೈವಾಹಿಕ ಜೀವನದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.

38

ಸೋನಿಕಾ ಗಿಲ್ ದೆಹಲಿಯ ನಿವಾಸಿ. ಬಾಲ್ಯದಿಂದಲೂ ತಾಯಿ ಕೆಲಸ ಮಾಡುವುದನ್ನು ನೋಡಿದ್ದೆ. ಹೀಗಾಗಿ ತಾಯಿಗಾಗಿ ಏನಾದರೂ ಮಾಡಬೇಕೆಂದು ಬಯಸಿದ್ದೆ ಎಂದು ನಟಿ ಹೇಳಿದ್ದರು.  ಹಾಗಾಗಿ ನನ್ನ ಹೆಸರಿನ ಮುಂದೆ ನನ್ನ ತಾಯಿಯ ಹೆಸರನ್ನೇ ಇಟ್ಟಿದ್ದೆ ಹೊರತು ಅಪ್ಪನ ಹೆಸರಲ್ಲ ಎಂದು ಸೋನಿಕಾ ಗಿಲ್ ಹೇಳಿದ್ದರು.

48

ಬಾಲಿವುಡ್ ನಟಿಯಾಗುವುದು ಸೋನಿಕಾ ಗಿಲ್ ಪಾಲಿಗೆ ಸುಲಭವಾಗಿರಲ್ಲಿಲ್ಲ. ಆ ಕಾಲದಲ್ಲಿ ಕೇವಲ ಸೌಂದರ್ಯದಿಂದ ನಾಯಕಿಯಾಗಲು ಸಾಧ್ಯವಿರಲಿಲ್ಲ ಬ್ಬ ನಟಿ ಅಂದವಾಗಿ ಕಾಣುವುದರ ಜೊತೆಗೆ ನೃತ್ಯ, ನಟನೆಯಂತಹ ಕಲೆಗಳಲ್ಲಿಯೂ ಪ್ರಾವೀಣ್ಯತೆ ಹೊಂದಿರಬೇಕಿತ್ತು. ಸಾವನ್ ಕುಮಾರ್ ಒಮ್ಮೆ ಲೈಲಾ ಚಿತ್ರದ ಕಾಸ್ಟಿಂಗ್ ಸಮಯದಲ್ಲಿ ದೆಹಲಿಗೆ ಬಂದರು, ಅವರು ಸೋನಿಕಾ ಗಿಲ್ ಅವರನ್ನು ಗುರುತಿಸಿದರು, ನಂತರ ಅವರು ಆಡಿಷನ್ ತೆಗೆದುಕೊಂಡರು. ಆದರೆ ಸೋನಿಕಾ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ.

58

ಆ ನಂತರ ಸೋನಿಕಾ ಗಿಲ್ ಅವರು ಸುಭಾಷ್ ಘಾಯ್ ಅವರ ಚಿತ್ರವನ್ನು ಪಡೆದ ಅನುಭವವನ್ನು ಹಂಚಿಕೊಂಡಿದ್ದಾರೆ. ಸುಭಾಷ್‌ ಗಾಯ್‌, 5 ದಿನಗಳ ನಂತರ ನನ್ನ ಮನೆಯಲ್ಲಿ ನನ್ನನ್ನು ಭೇಟಿಯಾಗಲು ಹೇಳಿದರು. ಇದನ್ನು ಕೇಳಿದ ನಂತರ ನಾನು ತುಂಬಾ ಉತ್ಸುಕಳಾದೆ. 5 ದಿನಗಳು 5 ತಿಂಗಳುಗಳು ಅನಿಸಿತು. ಐದು ದಿನಗಳು ಕಳೆದ ನಂತರ ನಾನು ಸುಭಾಷ್ ಘಾಯ್ ಅವರ ಮನೆಗೆ ಹೋಗಿ ಆ ದಿನ ಮೂರು ಚಿತ್ರಗಳಿಗೆ ಸಹಿ ಹಾಕಿದೆ' ಎಂದು ಸೋನಿಕಾ ಗಿಲ್ ಹೇಳಿದರು. 

68

6 ಬಾರಿ ಪ್ರೀತಿಯಲ್ಲಿ ನಿರಾಕರಣೆ ಎದುರಿಸಿದ್ದೇನೆ ಎಂದು ಸೋನಿಕಾ ಗಿಲ್ ತನ್ನ ಮದುವೆಯ ಬಗ್ಗೆ ಹೇಳಿದ್ದಾರೆ. ಮದುವೆಯನ್ನು 6 ಬಾರಿ ನಿಶ್ಚಯಿಸಲಾಯಿತು, ಆದರೆ ಕೆಲವು ಕಾರಣಗಳಿಂದ ಅದು ಮುರಿದುಹೋಯಿತು. 7ನೇ ಮದುವೆ ಸರಿಯಾಗಬಹುದು ಎಂದು ಪಂಡಿತರು ಹೇಳಿದ್ದರು. ಆದರೆ ನಾನು ಆ ಆಸೆಯನ್ನು ಬಿಟ್ಟು ಬಿಟ್ಟಿದ್ದೆ ಎಂದು ಸೋನಿಕಾ ತಿಳಿಸಿದ್ದಾರೆ.

78

ಆ ನಂತರ ಸೋನಿಕಾ ಗಿಲ್, ಬಿಲ್ಡರ್ ಮತ್ತು ಉದ್ಯಮಿಯಾಗಿರುವ ಮಿತೇಶ್ ರುಗಾನಿ ಅವರನ್ನು ವಿವಾಹವಾದರು. 'ನನಗೆ ಮದುವೆಯಾಗುವುದಿಲ್ಲ ಎಂದು ನಾನು ಭಾವಿಸಿದ್ದೆ.

88

ಆದರೆ ನನ್ನ ತಾಯಿ ಸತ್ತ ಒಂದು ವರ್ಷದ ನಂತರ ಈ ಮದುವೆ ನಡೆಯಿತು. ಎಂದು ಸೋನಿಕಾ ತಿಳಿಸಿದ್ದಾರೆ. ಇಂದು ಸೋನಿಕಾ ಗಿಲ್‌ ಸುಖಮಯವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

Read more Photos on
click me!

Recommended Stories