Yes Its LOVE : ಅವ್ರನ್ನ ನೋಡ್ತಿದ್ದಂಗೆ ಹೀಗೆಲ್ಲಾ ಆಗ್ತಿದೆ ಅಂದ್ರೆ ನಿಮಗೆ LOVE ಆಗಿದೆ

First Published | Nov 21, 2021, 2:34 PM IST

ಪ್ರೀತಿ (love) ಅನ್ನೋದೇ ಹಾಗೆ ಯಾವಾಗ, ಯಾರ ಮೇಲೆ ಆಗುತ್ತೆ ಅನ್ನೋದೇ ಗೊತ್ತಾಗಲ್ಲ. ನಮ್ಮಲ್ಲಿ ಬದಲಾವಣೆ ಆಗಲು ಆರಂಭವಾದಾಗ ನಂಗೂ ಲವ್ ಆಗಿದೆ ಅನ್ನೋದು ತಿಳಿಯುತ್ತೆ. ಈ ಪ್ರೀತಿ ಆದಾಗ ಏನೆಲ್ಲಾ ಬದಲಾವಣೆ ಆಗುತ್ತೆ, ಯಾವ ಅನುಭವ ಆಗುತ್ತೆ ಗೊತ್ತಾ ನಿಮಗೆ? ಇಲ್ಲಾಂದ್ರೆ ನಾವು ಹೇಳ್ತಿವಿ ಕೇಳಿ  
 

ಯಾರನ್ನಾದರೂ ನೋಡಿದ ತಕ್ಷಣ ಅಟ್ರಾಕ್ಟ್ (attract) ಆಗಿದ್ದೀರಿ ಅಂದ್ರೆ ನೀವು ಆ ವ್ಯಕ್ತಿಯನ್ನು ಮತ್ತೆ ಮತ್ತೆ ನೋಡುವಂತಹ  ಒಂದು ನಿರ್ದಿಷ್ಟ ಅಕ್ರರ್ಷಣೆಯನ್ನು ನೀವು ಅನುಭವಿಸುತ್ತೀರಿ. ಈ ಭಾವನಾತ್ಮಕ ಮತ್ತು ಮಾನಸಿಕ ಸೆಳೆತವು ಮಾಜಿಕಲ್ ಅನುಭವ ನೀಡುತ್ತೆ ಮತ್ತು ಆ ವ್ಯಕ್ತಿಯ ಜೊತೆ ನಿಜವಾಗಿಯೂ ಸಂಪರ್ಕ ಹೊಂದಿರುವಂತೆ ಮಾಡುತ್ತದೆ. ಈ ತ್ವರಿತ ಆಕರ್ಷಣೆಯು ಮೊದಲ ನೋಟದಲ್ಲೇ ಸಂಭವಿಸುತ್ತದೆ.  ನೀವು ಅವರತ್ತ ತುಂಬಾನೇ ಆಕರ್ಷಿತರಾಗಿದ್ದೀರಿ ಎಂದು ಸೂಚಿಸುವ ಚಿಹ್ನೆಗಳಿವು... 

ಯಾವ ವ್ಯಕ್ತಿಯತ್ತ ನೀವು ಆಕರ್ಷಿತರಾಗಿದ್ದೀರೋ, ಅವರ ಜೊತೆ ಕಣ್ಣು ಬೆಸೆದಾಗ (eye contact) ಏನೋ ಒಂದು ರೀತಿಯ ರೋಮಾಚನದ ಅನುಭವ ಉಂಟಾಗುತ್ತೆ.  ಮತ್ತೆ ಮತ್ತೆ ಆ ಕಣ್ಣುಗಳನ್ನು ನೋಡಬೇಕೆಂಬ ತವಕ ಉಂಟಾಗುವುದು. ನೀವು ಆ ವ್ಯಕ್ತಿಯನ್ನು ಪದೇ ಪದೇ ನೋಡಬಹುದು ಅಥವಾ ನಿಮ್ಮ ಕಣ್ಣಿನ ಭಾವನೆಗಳ ಮೂಲಕ ನೀವು ಆ ವ್ಯಕ್ತಿಯೊಂದಿಗೆ 'ಮೌನವಾಗಿ' ಮಾತನಾಡುತ್ತಿದ್ದೀರಿ ಎಂದು ನೀವು ಭಾವಿಸಬಹುದು.

Tap to resize

ನಿಮ್ಮ ಜೀವನದಲ್ಲಿ ನೀವು ಈ ಮೊದಲು ಆ ವ್ಯಕ್ತಿಯನ್ನು ಭೇಟಿಯಾಗಿದ್ದೀರಿ ಎಂಬ ಭಾವನೆ ಇದ್ದಾಗ, ಇದು ಪ್ರೀತಿಯಲ್ಲಿ ಬಿದ್ದಿರೋ ಆರಂಭದ ಸೂಚನೆ. ಮತ್ತು ಆ ಸಮಯದಲ್ಲಿ, ನೀವು ನಂಬಲಾಗದಷ್ಟು ನಿರಾಳವಾಗಿರಬಹುದು. ಸುಮ್ ಸುಮ್ನೆ ಮುಗುಳ್ನಗುತ್ತೀರಿ, ಅವರ ಜೊತೆ ಮಾತನಾಡಬೇಕೆಂಬ ತವಕ ಹೆಚ್ಚುತ್ತದೆ. ಮಾತನಾಡಲು ಕಾರಣ ಹುಡುಕುವಿರಿ. 

ಈ ಸಂದರ್ಭದಲ್ಲಿ ಕೆಲವೊಮ್ಮೆ ಸಂಭಾಷಣೆಗಳು (conversation) ಸುಲಭವಾಗಿ ಹರಿಯುತ್ತವೆ ಮತ್ತು ಆ ವ್ಯಕ್ತಿಯೊಂದಿಗೆ ಮಾತನಾಡುವುದು ತುಂಬಾ ನೈಸರ್ಗಿಕ ಪ್ರಕ್ರಿಯೆಯಂತೆ ಭಾಸವಾಗುತ್ತದೆ. ಅವರ ಗಮನವನ್ನು ಸೆಳೆಯಲು ಹೆಚ್ಚಿನ ಪ್ರಯತ್ನ ಅಥವಾ ಒತ್ತಡವನ್ನು ಹಾಕಲು ನೀವು ಭಾವಿಸುವುದಿಲ್ಲ. ಬದಲಾಗಿ ನಿಮ್ಮಲ್ಲಿರುವ ತವಕವೇ ಅವರೊಂದಿಗೆ ಮನಸು ಬಿಚ್ಚಿ ಮಾತನಾಡುವಂತೆ ಮಾಡುತ್ತೆ. 

ಲವ್ ಈಸ್ ಇನ್  ಏರ್ (Love is in Air) ಎನ್ನುತ್ತಾರೆ. ಹಾಗೆ ಲವ್ ಆಗಿ ಬಿಡುತ್ತೆ , ನಿಮಗೆ ಲವ್ ಆಗಿದ್ದೆ ಆದರೆ  ನಿಮ್ಮ ಬಾಡಿ ಲಾಂಗ್ವೇಜ್ ಎಲ್ಲವನ್ನೂ ಹೇಳುತ್ತದೆ. ನೀವು ಆ ವ್ಯಕ್ತಿಯ ಕಡೆಗೆ ಆಸಕ್ತಿಯನ್ನು ಪ್ರದರ್ಶಿಸಿದಾಗ, ನಿಮ್ಮ ದೇಹವು ಸ್ವಲ್ಪ ಮುಂದಕ್ಕೆ ವಾಲುವ ಮೂಲಕ, ಚೆಲ್ಲಾಟವಾಡುವ ಮೂಲಕ ಅಥವಾ ಕೂದಲನ್ನು  ಕಿವಿಗಳ ಹಿಂದೆ ಸಿಕ್ಕಿಸಿಕೊಳ್ಳುವ ಮೂಲಕ  ಭಾವನೆಗಳನ್ನು ತಿಳಿಸುತ್ತದೆ.  

ಈ ವ್ಯಕ್ತಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನೀವು ಏನೇನೋ ಉಪಾಯಗಳನ್ನು ಮಾಡಲು ಆರಂಭಿಸುತ್ತೀರಿ. ಅದು ಕರೆಗಳು, ಟೆಕ್ಸ್ಟ್ ಅಥವಾ ಡೇಟ್ ಮೂಲಕವಾಗಿರಲಿ, ನೀವು ಸಾಧ್ಯವಾದಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ಪರಿಸ್ಥಿತಿಯನ್ನು ಹೆಚ್ಚು ಬಳಸಿಕೊಳ್ಳಲು ಪ್ರಯತ್ನಿಸುತ್ತೀರಿ. ನೀವು ಆ ವ್ಯಕ್ತಿಯ ಬಗ್ಗೆ ತುಂಬಾ ಆಸಕ್ತಿ ಹೊಂದಿರದ ಹೊರತು ಇದೆಲ್ಲಾ ಸಾಮಾನ್ಯವಾಗಿ ಸಂಭವಿಸೋದು ಸಾಧ್ಯವಿಲ್ಲ. 

ನೀವು ಆ ವ್ಯಕ್ತಿಯನ್ನು ಇಷ್ಟಪಡುತ್ತಿದ್ದರೆ, ನೀವು ನಾಚಿಕೆಪಡುತ್ತಿದ್ದರೂ ಸಹ, ಖಂಡಿತವಾಗಿಯೂ, ನೀವು ಅವರೊಂದಿಗೆ ಫ್ಲರ್ಟ್(flirt) ಮಾಡುತ್ತೀರಿ.  ಅವರು ನಿಮ್ಮ ಜೊತೆ ಮಾತನಾಡಲು ಪ್ರಾರಂಭಿಸಿದರೆ, ಆ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತೀರಿ. ಇದನ್ನು ಪ್ರೀತಿಯ ಮೊದಲ ಹೆಜ್ಜೆಯ ಗುರುತುಗಳು ಎಂದು ಹೇಳಬಹುದು. ಅಂದ್ರೆ ನಿಮಗೆ ಲವ್ ಆಗಿದೆ ಎಂದು ಅರ್ಥ. 

Latest Videos

click me!