ಲೈಂಗಿಕ ಕ್ರಿಯೆಯ ನಂತರ ಮಹಿಳೆಯರೇ ನಿಮ್ಮ ದೇಹದಲ್ಲೂ ಈ ಬದಲಾವಣೆಯಾಗುತ್ತಿದೆಯೇ?

First Published | Feb 9, 2024, 12:19 PM IST

ಲೈಂಗಿಕ ಕ್ರಿಯೆಯ ನಂತರ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳಾಗಬಹುದು. ಇವುಗಳನ್ನು ಆಫ್ಟರ್ ಸೆಕ್ಸ್ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಲೈಂಗಿಕ ಕ್ರಿಯೆಯ ನಂತರ ದೇಹದಲ್ಲಿ ಅನುಭವಿಸಬಹುದಾದ ಬದಲಾವಣೆಗಳು ಯಾವುವು ಅನ್ನೋದನ್ನು ತಿಳಿಯಿರಿ 

ಲೈಂಗಿಕ ಕ್ರಿಯೆಯ ನಂತರ (after sex), ಕೆಲವರಿಗೆ ಒಂದೊಂದು ರೀತಿಯ ಅನುಭವ ಉಂಟಾಗುತ್ತದೆ. ಕೆಲವರಿಗೆ ಬರ್ನಿಂಗ್ ಸೆನ್ಸೇಶನ್ ಆದರೆ , ಇನ್ನು ಕೆಲವರಿಗೆ ತುರಿಕೆ, ಮತ್ತೆ ಕೆಲವರಿಗೆ ಬ್ಲಡ್ ಕಲೆ ಕೂಡ ಉಂಟಾಗುತ್ತೆ.  ನಿಮಗೂ ಈ ರೀತಿ ಆಗುತ್ತಿದ್ದರೆ, ಭಯಪಡಬೇಡಿ, ಇದು ಸಾಮಾನ್ಯ. ಆದರೆ ಲೈಂಗಿಕ ಕ್ರಿಯೆಯ ನಂತರ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಏಕೆ ಕಂಡುಬರುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು ಮುಖ್ಯ.
 

ಕೆಲವರು ಸೆಕ್ಸ್ ನಂತರ ಉಂಟಾಗುವ ಬದಲಾವಣೆಯ ಚಿಹ್ನೆಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ತಮ್ಮ ದೈನಂದಿನ ಕಾರ್ಯದಲ್ಲಿ ಬ್ಯುಸಿಯಾಗುತ್ತಾರೆ. ಆದರೆ ನೀವು ಇವುಗಳನ್ನು ನಿರ್ಲಕ್ಷಿಸುವ ಬದಲಾಗಿ, ಅವು ಯಾಕೆ ಉಂಟಾಗುತ್ತವೆ? ಮತ್ತು ಅದರಿಂದ ಉಂಟಾಗುವ ಪರಿಣಾಮಗಳು ಯಾವುವು ಅನ್ನೋದನ್ನು ತಿಳಿಯೋಣ. 
 

Tap to resize

"ಲೈಂಗಿಕ ಶಿಕ್ಷಣದ ಕೊರತೆ, ಲೈಂಗಿಕತೆಯ ಬಗ್ಗೆ ಮಾತನಾಡದೇ ಇರುವುದು ಮತ್ತು ಅಸುರಕ್ಷಿತ ಲೈಂಗಿಕ ಅಭ್ಯಾಸಗಳು ಯಾರಿಗಾದರೂ ಹಾನಿಕಾರಕವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಮಹಿಳೆ ಅಥವಾ ಪುರುಷ ಲೈಂಗಿಕ ಸೋಂಕಿಗೆ (sexual infection) ಬಲಿಯಾಗಬಹುದು. ಆದ್ದರಿಂದ, ಸರಿಯಾದ ತಿಳುವಳಿಕೆಯೊಂದಿಗೆ ಸುರಕ್ಷಿತ ಲೈಂಗಿಕತೆಯನ್ನು ಯಾವಾಗಲೂ ಅಭ್ಯಾಸ ಮಾಡುವುದು ಮುಖ್ಯ. "

ನಿಮ್ಮ ಸುರಕ್ಷತೆ ಮತ್ತು ನೈರ್ಮಲ್ಯದಲ್ಲಿ ನೀವು ರಾಜಿ ಮಾಡಿಕೊಂಡಾಗ, ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಲೈಂಗಿಕ ಕ್ರಿಯೆಯ ನಂತರ ಮಹಿಳೆ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದು ಯೋನಿ ಸೋಂಕಿಗೆ (vaginal infection) ಸಂಬಂಧಿಸಿರಬಹುದು. ಸಂಭೋಗದ ನಂತರ ಮಹಿಳೆಯರು ಆರಾಮವಾಗಿದ್ದರೆ ಸರಿ ಆದರೆ ಕೆಲವೊಮ್ಮೆ ಸ್ನಾಯುಗಳ ಹಿಗ್ಗುವಿಕೆಯು ಸೆಳೆತಕ್ಕೆ ಕಾರಣವಾಗಬಹುದು. ಇದಲ್ಲದೆ, ಕಲೆ, ತುರಿಕೆ ಮತ್ತು ಯೋನಿ ಕಿರಿಕಿರಿ ಉಂಟಾದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಬಹುದು.

ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ ಪ್ರಕಾರ, ಲೈಂಗಿಕವಾಗಿ ಹರಡುವ ರೋಗಗಳು ಲೈಂಗಿಕ ಕ್ರಿಯೆಯ  ನಂತರ ರಕ್ತಸ್ರಾವ ಮತ್ತು ಕಲೆಗಳಿಗೆ ಕಾರಣವಾಗುತ್ತವೆ. ಗುಹ್ಯ ಹೇನುಗಳು ಮತ್ತು ಜನನಾಂಗದ ಹರ್ಪಿಸ್ ನಿಂದಾಗಿ ತುರಿಕೆ ಎದುರಾದರೆ, ಕಲೆಯು ಕ್ಲಮೈಡಿಯಾ ರೋಗಲಕ್ಷಣಗಳನ್ನು ತೋರಿಸುತ್ತದೆ. ಎಸ್ಟಿಐಗಳ (STI) ರೋಗಲಕ್ಷಣಗಳು ದೇಹದಲ್ಲಿ ನಿಧಾನವಾಗಿ ಮುಂದುವರಿಯುತ್ತವೆ, ಇದು ಕೆಲವು ದಿನಗಳು, ವಾರಗಳು ಅಥವಾ ತಿಂಗಳುಗಳವರೆಗೆ ಇರುತ್ತದೆ.
 

ಯೋನಿ ಕಿರಿಕಿರಿ (Vaginal Infection): ಲೈಂಗಿಕ ಕ್ರಿಯೆಯ ನಂತರ ಯೋನಿಯಲ್ಲಿ ಬರ್ನಿಂಗ್ ಸೆನ್ಸೇಶನ್ (burning sensation)ಉಂಟಾಗುವುದು ಸೋಂಕು ಅಥವಾ ಡಿಸ್ಪರೇನಿಯಾದ ಸಂಕೇತವಾಗಿರಬಹುದು. ವಾಸ್ತವವಾಗಿ, ಲೂಬ್ರಿಕೇಶನ್ ಕೊರತೆಯು ಇದಕ್ಕೆ ಕಾರಣವಾಗುತ್ತದೆ. ಯೋನಿ ಅಂಗಾಂಶಗಳ ಹಿಗ್ಗುವಿಕೆಯು ಕಿರಿಕಿರಿಗೆ ಕಾರಣವೆಂದು ತಿಳಿದು ಬಂದಿದೆ, ಇದನ್ನು ನೋವಿನ ಲೈಂಗಿಕತೆ ಎಂದೂ ಕರೆಯಲಾಗುತ್ತದೆ. ಈ ರೀತಿಯ ಸಮಸ್ಯೆ ದೀರ್ಘಕಾಲದಿಂದ ಕಾಡುತ್ತಿದ್ದರೆ, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ.
 

ಸ್ನಾಯು ಸೆಳೆತ: ಕೆಲವು ಮಹಿಳೆಯರು ಲೈಂಗಿಕ ಕ್ರಿಯೆಯ ನಂತರ ಹೆಚ್ಚಿದ ಸ್ನಾಯು ಸೆಳೆತವನ್ನು ಅನುಭವಿಸುತ್ತಾರೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೆಚ್ಚಿದ ಸ್ನಾಯುವಿನ ಒತ್ತಡವು ಕೈಗಳು, ಪಾದಗಳು, ಕರುವಿನ ಸ್ನಾಯುಗಳು ಮತ್ತು ಸೊಂಟದಲ್ಲಿ ಸೆಳೆತವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲೈಂಗಿಕ ಕ್ರಿಯೆಗೆ ಮೊದಲು ನೀರು ಕುಡಿಯುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು. ಇದಲ್ಲದೆ, ಕೆಲವು ಯೋಗ ಆಸನಗಳನ್ನು (Yogasan) ಅಭ್ಯಾಸ ಮಾಡುವುದರಿಂದ ಸ್ನಾಯು ಸೆಳೆತದ ಅಪಾಯವನ್ನು ಕಡಿಮೆ ಮಾಡಬಹುದು.

ಯೋನಿ ತುರಿಕೆ (Vaginal Itching): ಲೈಂಗಿಕ ಕ್ರಿಯೆಯ ಸಮಯದಲ್ಲಿ ಯೀಸ್ಟ್ ಸೋಂಕುಗಳು ಮತ್ತು ಎಸ್ಟಿಐ ಸೋಂಕುಗಳು ಯೋನಿ ತುರಿಕೆಗೆ ಕಾರಣವಾಗುತ್ತವೆ. ಇದಲ್ಲದೆ, ಚರ್ಮದ ಸೂಕ್ಷ್ಮತೆ ಮತ್ತು ಕಾಂಡೋಮ್ ಬಳಕೆಯು ತುರಿಕೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅಂತಹ ಸಮಸ್ಯೆಯನ್ನು ನಿವಾರಿಸಲು, ಲೈಂಗಿಕ ಕ್ರಿಯೆಯ ನಂತರ ಯೋನಿಯನ್ನು ಸ್ವಚ್ಛಗೊಳಿಸಿ.

ಸ್ಪಾಟಿಂಗ್ (Spotting): ಲೈಂಗಿಕ ಕ್ರಿಯೆಯ ಸಮಯದಲ್ಲಿ ಕಲೆಗಳು ಸಾಮಾನ್ಯ ಲಕ್ಷಣವಲ್ಲ. ಯೋನಿ ಅಂಗಾಂಶ ಒಡೆದರೆ ಅಥವಾ ಯಾವುದೇ ರೀತಿಯ ಸೋಂಕಿನಿಂದ ಬಳಲುತ್ತಿರುವುದರಿಂದ ಈ ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ನೀವು ಪ್ರತಿ ಬಾರಿಯೂ ಈ ಸಮಸ್ಯೆಯನ್ನು ಎದುರಿಸಬೇಕಾದರೆ, ಖಂಡಿತವಾಗಿಯೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ.
 

Latest Videos

click me!