ಪ್ರಪೋಸ್ ಡೇ ಅನ್ನು ಪ್ರೇಮಿಗಳ ವಾರದ ಎರಡನೇ ದಿನದಂದು ಅಂದರೆ ಫೆಬ್ರವರಿ 8ರಂದು ಆಚರಿಸಲಾಗುತ್ತದೆ. ಈ ದಿನದಂದು ನೀವು ಕೂಡ ನಿಮ್ಮ ಪ್ರೀತಿಯನ್ನು ಪ್ರಸ್ತಾಪಿಸಲು ಹೊರಟಿದ್ದರೆ, ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ.
ಯಾವುದೇ ಹುಡುಗಿಗೆ ಪ್ರಪೋಸ್ ಮಾಡುವ ಮೊದಲು, ನೀವು ಪ್ರೇಮ ನಿವೇದನೆ ಮಾಡಿಕೊಳ್ಳಲು ಹೊರಟಿರುವುದು ಭಾರತೀಯ ಹುಡುಗಿಗೆ ಎಂಬುದನ್ನು ನೆನಪಿನಲ್ಲಿಡಿ. ಆಕೆ ಎಷ್ಟು ಮಾಡರ್ನ್ ಆಗಿದ್ದರೂ ಹೃದಯದಲ್ಲಿ ಭಾರತೀಯಳು.
ಪ್ರಪೋಸ್ ಮಾಡುವ ಸಮಯದಲ್ಲಿ ತೀರಾ ಗಡಿಬಿಡಿ ಮಾಡಿಕೊಳ್ಳದೆ ತಾಳ್ಮೆಯಿಂದಿರುವುದು ಉತ್ತಮ. ಜೊತೆಗೆ, ಪ್ರೀತಿ ನಿವೇದನೆ ಮಾಡುವಾಗ ಪ್ರೀತಿಯ ಹೊರತಾಗಿ ದೈಹಿಕ ಅಭಿಲಾಶೆಗಳನ್ನು ವ್ಯಕ್ತಪಡಿಸಬಾರದು.
ಪ್ರಪೋಸ್ ಮಾಡುವ ಮುನ್ನ ಹುಡುಗಿಯ ಇಷ್ಟ-ಕಷ್ಟಗಳ ಬಗ್ಗೆ ತಿಳಿದಿರಬೇಕು. ಇದನ್ನು ತಿಳಿದಿದ್ದರೆ ಅವರ ನೆಚ್ಚಿನ ರೀತಿಯಲ್ಲಿ ಪ್ರಪೋಸ್ ಮಾಡುವ ವಿಧಾನ ತಾನಾಗಿಯೇ ತಿಳಿಯುತ್ತದೆ.
ನೀವು ಪ್ರಸ್ತಾಪಿಸಲು ಬಯಸುವ ವ್ಯಕ್ತಿಯ ಕುಟುಂಬದ ಬಗ್ಗೆ ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿರುವುದನ್ನು ಅವರಿಗೆ ತೋರಿಸಬೇಕು. ಅವರ ಕುಟುಂಬದ ಪ್ರತಿಯೊಬ್ಬರ ಕಾಳಜಿ ನಿಮ್ಮ ಮನದಲ್ಲಿರುವುದನ್ನು ಮಾತುಗಳಲ್ಲಿ ವ್ಯಕ್ತಪಡಿಸಿ.
Image: Getty Images
ಯಾವುದೇ ಹುಡುಗಿಗೆ ಪ್ರಪೋಸ್ ಮಾಡುವ ಮೊದಲು, ಅವಳು ಈಗಾಗಲೇ ಯಾರನ್ನಾದರೂ ಪ್ರೀತಿಸುತ್ತಿದ್ದಾಳೆಯೇ ಎಂದು ತಿಳಿದುಕೊಳ್ಳಿ. ಹಾಗಿದ್ದಲ್ಲಿ ಆ ಹುಡುಗಿಯಿಂದ ಅಂತರ ಕಾಯ್ದುಕೊಳ್ಳಿ.
ನಿಮ್ಮ ಸಂಗಾತಿಯ ಸ್ನೇಹಿತರೊಂದಿಗೆ ಸ್ನೇಹವನ್ನು ಹೆಚ್ಚಿಸಿ ಮತ್ತು ನಿಮ್ಮ ಸಂಗಾತಿ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳಲು ಪ್ರಯತ್ನಿಸಿ.
ನಿಮ್ಮ ಸಂಗಾತಿಗೆ ನೀವು ಪ್ರಪೋಸ್ ಮಾಡುವಾಗ ಅದರಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರದಂತೆ ನೋಡಿಕೊಳ್ಳಿ. ನೀವು ನೇರವಾಗಿ ಪ್ರೀತಿ ಹೇಳಿಕೊಂಡಾಗಲೇ ಅದು ಫಲಿಸುವ ಸಾಧ್ಯತೆ ಹೆಚ್ಚು.