ಈ ವ್ಯಾಲೆಂಟೈನ್ ವೀಕ್ ಸ್ಪೆಷಲ್ ಆಗಿರಬೇಕಂದ್ರೆ ಈ ರೀತಿ ಸ್ಪೆಷಲ್ ಪ್ಲ್ಯಾನ್ ಮಾಡಿ

First Published | Feb 7, 2024, 5:32 PM IST

ವ್ಯಾಲೆಂಟೈನ್ಸ್ ವೀಕ್ ರೋಸ್ ಡೇಯೊಂದಿಗೆ ಪ್ರಾರಂಭವಾಗಿದೆ. ಪ್ರೇಮಿಗಳಿಗೆ ಫೆಬ್ರವರಿ ತಿಂಗಳು ತುಂಬಾ ವಿಶೇಷವಾಗಿದೆ. ಫೆಬ್ರವರಿ 7 ರಂದು ಪ್ರಾರಂಭವಾಗುವ ಈ ರೊಮ್ಯಾಂಟಿಕ್ ವಾರವು ಫೆಬ್ರವರಿ 14 ರಂದು ಪ್ರೇಮಿಗಳ ದಿನದೊಂದಿಗೆ ಕೊನೆಗೊಳ್ಳುತ್ತದೆ. ಈ ದಿನಗಳನ್ನು ವಿಶೇಷವಾಗಿಸಲು ನಿಮಗಾಗಿ ಟಿಪ್ಸ್. 

ಫೆಬ್ರವರಿ ಬಂದ ಕೂಡಲೇ ವ್ಯಾಲೆಂಟೈನ್ಸ್ ವೀಕ್ ಗಾಗಿ (Valentine Week) ಸಿದ್ಧತೆಗಳು ಪ್ರಾರಂಭವಾಗುತ್ತವೆ. ಈ ರೊಮ್ಯಾಂಟಿಕ್ ವಾರವು ಫೆಬ್ರವರಿ 7 ರಂದು ರೋಸ್ ಡೇಯೊಂದಿಗೆ ಪ್ರಾರಂಭವಾಗುತ್ತದೆ, ಇದು ಫೆಬ್ರವರಿ 14 ರವರೆಗೆ ಮುಂದುವರಿಯುತ್ತದೆ. ಮೂಲತಃ ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ಆಚರಿಸಲಾಗುವ ಈ ಲವ್ ವೀಕ್ ಟ್ರೆಂಡ್ ಈಗ ಭಾರತದಲ್ಲೂ ಗಮನಾರ್ಹವಾಗಿ ಹೆಚ್ಚಾಗಿದೆ. 
 

ಹೆಚ್ಚಾಗಿ ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ ಅಥವಾ ಅವರ ಬ್ಯುಸಿ ಲೈಫ್ ನಿಂದಾಗಿ ಪರಸ್ಪರ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪರಸ್ಪರ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ವಾರ ಬೆಸ್ಟ್ ಅಂತಾನೆ ಹೇಳಬಹುದು. 
 

Tap to resize

ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ಸರ್ ಪ್ರೈಸ್ (surprise)ನೀಡಿ, ಅವರನ್ನು ಡೇಟಿಂಗ್ ಗೆ ಕರೆದೊಯ್ಯಿರಿ ಮತ್ತು ಅವರನ್ನು ಸಾಧ್ಯವಾದಷ್ಟು ಸಂತೋಷವಾಗಿರಿಸಿ. ಉತ್ತಮ ವ್ಯಾಲೆಂಟೈನ್ಸ್ ವೀಕ್ ಎಂದರೆ ಇದೇ. ವ್ಯಾಲೆಂಟೈನ್ಸ್ ವೀಕ್ ಈಗ ಪ್ರಾರಂಭವಾಗಿರುವುದರಿಂದ, ನೀವು ಈಗಿನಿಂದಲೇ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ವ್ಯಾಲೆಂಟೈನ್ಸ್ ವೀಕ್ ಗಾಗಿ ಹೇಗೆ ತಯಾರಿ ನಡೆಸಬೇಕು ಎಂದು ತಿಳಿಯೋಣ.
 

ಸಂಗಾತಿಗೆ ಉಡುಗೊರೆ ನೀಡಿ: ನಿಮ್ಮ ಸಂಗಾತಿಗೆ ಅವರ ಆಯ್ಕೆಯ ಉಡುಗೊರೆಯನ್ನು(gifts) ನೀಡಿ. ಆನ್ ಲೈನ್ ನಲ್ಲಿ ಹುಡುಕಿ ಮತ್ತು ಈಗ ಆರ್ಡರ್ ಮಾಡಿ. ಅವರ ಇಷ್ಟಾನಿಷ್ಟಗಳು ಅಥವಾ ಅಗತ್ಯಗಳನ್ನು ನೋಡಿಕೊಳ್ಳುವ ಉಡುಗೊರೆಗಳನ್ನು ಖರೀದಿಸಿ. ಅವರು ಅನೇಕ ದಿನಗಳಿಂದ ಏನನ್ನಾದರೂ ಖರೀದಿಸುವ ಬಗ್ಗೆ ಚಿಂತಿತರಾಗಿದ್ದರೆ, ಆದರೆ ಕೆಲವು ಕಾರಣಗಳಿಂದಾಗಿ ಅವರು ಅದನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಆ ವಸ್ತುವನ್ನು ಖರೀದಿಸಿ ಅವರಿಗೆ ಗಿಫ್ಟ್ ಆಗಿ ನೀಡೋದು ಅವರಿಗೆ ಇನ್ನಷ್ಟು ಸಂತೋಷವನ್ನು ನೀಡುತ್ತದೆ.

ಡೇಟ್ ಪ್ಲ್ಯಾನ್ ಮಾಡಿ: ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಡೇಟ್ ಪ್ಲ್ಯಾನ್ (romantic date plan)ಮಾಡಿ. ಅವರ ನೆಚ್ಚಿನ ರೆಸ್ಟೋರೆಂಟ್ ನಲ್ಲಿ ಟೇಬಲ್ ಬುಕ್ ಮಾಡಿ ಅಥವಾ ಅವರು ಎಂದಿಗೂ ಹೋಗದ ಹೊಸ ಸುಂದರ ಸ್ಥಳಕ್ಕೆ ಅವರನ್ನು ಕರೆದೊಯ್ಯಿರಿ.

ನಿಮ್ಮ ಲುಕ್ ಬಗ್ಗೆ ವಿಶೇಷ ಕಾಳಜಿ ವಹಿಸಿ:  ಪ್ರೇಮಿಗಳ ದಿನದಂದು ನಿಮ್ಮ ಲುಕ್ ಬದಲಾಯಿಸಿ. ನಿಮಗಾಗಿ ಉತ್ತಮ ಬಟ್ಟೆಗಳನ್ನು ಆರಿಸಿ ಏಕೆಂದರೆ ಡೈಲಿ ಒಂದೇ ರೀತಿ ಡ್ರೆಸ್ ಮಾಡೋದು ಬೋರಿಂಗ್ ಅನಿಸುತ್ತೆ. ಆದ್ದರಿಂದ ನಿಮ್ಮ ಲುಕ್ ಬದಲಾಯಿಸಿ (change your look), ಉತ್ತಮ ಬಟ್ಟೆಗಳನ್ನು ಧರಿಸಿ, ಕೇಶವಿನ್ಯಾಸವನ್ನು ಬದಲಿಸಿ ಅಥವಾ ನಿಮ್ಮ ಸಂಗಾತಿಗೆ ಸರ್ ಪ್ರೈಸ್ ಮತ್ತು ಸಂತೋಷವನ್ನುಂಟು ಮಾಡುವ ಯಾವುದೇ ಸಕಾರಾತ್ಮಕ ಬದಲಾವಣೆಯನ್ನು ಮಾಡಿ.
 

ಲವ್ ಟೋಕನ್ ಇರಿಸಿ
ನೀವು ದುಬಾರಿ ಉಡುಗೊರೆಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ ಅಥವಾ ದುಬಾರಿ ಡೇಟ್ ಪ್ಲ್ಯಾನ್ ಮಾಡದಿದ್ದರೆ ಪರವಾಗಿಲ್ಲ, ಚಾಕೊಲೇಟ್ ಜೊತೆಗೆ ಸಣ್ಣ ಲವ್ ಟೋಕನ್ ಗಳನ್ನು (love token) ಮನೆಯಾದ್ಯಂತ ಅಡಗಿಸಿ. ನಿಮ್ಮ ಸಂಗಾತಿ ಎಲ್ಲಿಗೆ ಹೋದರೂ, ಅವರಿಗೆ ನಿಮ್ಮ ಪ್ರೀತಿಯ ಬರಹ, ಪುಟ್ಟ ಗಿಫ್ಟ್ ನೋಡಿದಾಗ ತುಂಬಾನೆ ಸಂತೋಷವಾಗುತ್ತೆ. 

Latest Videos

click me!