ಹಲವು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದು ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ರಶ್ಮಿಕಾ ಧರಿಸಿದ್ದ ಟೆಂಪಲ್ ಡಿಸೈನ್ ಆಭರಣಗಳು ಎಲ್ಲರ ಗಮನ ಸೆಳೆದಿವೆ. ಇವುಗಳ ತೂಕ, ದರ ಇಲ್ಲಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ (Rashmika Mandanna and Vijaya Devarakonda marriage) ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಹಲವಾರು ವರ್ಷಗಳಿಂದ ಇದ್ದ ಈ ಜೋಡಿಯ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ.
26
ವಿರೋಶ್ ಜೋಡಿ
ಕೊನೆಯವರೆಗೂ ಮದುವೆಯನ್ನು ಗುಟ್ಟಾಗಿ ಇಟ್ಟಿದ್ದ ಜೋಡಿ ಇದೀಗ ಗಾಳಿ ಸುದ್ದಿಗಳು ಬರಿ ಗಾಳಿಸುದ್ದಿಗಳಲ್ಲ, ನಿಜವೇ ಎನ್ನುವುದನ್ನು ತೋರಿಸಿದೆ. ವಿರೋಶ್ ಜೋಡಿಯ ಮದುವೆಯಲ್ಲಿ ಗಮನ ಸೆಳೆದದ್ದು ರಶ್ಮಿಕಾ ಧರಿಸಿದ್ದ ಚಿನ್ನಾಭರಣಗಳು.
36
ಟೆಂಪಲ್ ಡಿಸೈನ್
ಹಳೆಯ ಕಾಲ ಶೈಲಿಯಲ್ಲಿ ವರ್ಷಗಟ್ಟಲೆ ಡಿಸೈನ್ ಮಾಡಿ ಈ ಆಭರಣಗಳನ್ನು ರೆಡಿ ಮಾಡಲಾಗಿದೆ. ಅಡಿಯಿಂದ ಮುಡಿಯವರೆಗೂ ಆಭರಣಗಳಲ್ಲಿ ರಶ್ಮಿಕಾ ಮುಳುಗಿ ದೇವತೆ ರೀತಿ ಕಾಣಿಸುತ್ತಿದ್ದರು. ಕೆಂಪು ಉಡುಗೆಯಲ್ಲಿ ಅವರ ಶೋಭೆಯೂ ಹೆಚ್ಚಿತ್ತು.
ರಶ್ಮಿಕಾ ಮದುವೆಯಲ್ಲಿ ಚೋಕರ್, ಉದ್ದನೆಯ ಸರ, ಸೊಂಟದ ಪಟ್ಟಿ (waist belt), ಮಾಂಗಲ್ಯಸೂತ್ರ, ಭಾರೀ ಬಳೆಗಳು, ಕಿವಿಯೋಲೆ ಮತ್ತು ಮಾಂಗ್ ಟಿಕಾಗಳನ್ನು ಧರಿಸಿದ್ದರು. ಈ ಆಭರಣಗಳು ದಕ್ಷಿಣ ಭಾರತದ ಕರಕುಶಲತೆ ಮತ್ತು ದೇವಸ್ಥಾನದ ಶೈಲಿಯ (temple jewellery) ವಿನ್ಯಾಸವನ್ನು ಹೊಂದಿವೆ, ಇವುಗಳನ್ನು ತಯಾರಿಸಲು 10 ತಿಂಗಳು ತಗುಲಿದೆ.
56
ಚಿನ್ನಕ್ಕೆ ಮಾತ್ರ ಅವಕಾಶ
ಇದೀಗ, ರಶ್ಮಿಕಾ ಮಂದಣ್ಣ ಒಟ್ಟೂ ಧರಿಸಿರುವ ಆಭರಣಗಳ ಬೆಲೆ ಎಷ್ಟು ಎಂದು ಹಲವರು ತಮ್ಮದೇ ಆದ ಲೆಕ್ಕಾಚಾರ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಬೇರೆ ಸೆಲೆಬ್ರಿಟಿಗಳ ರೀತಿಯಲ್ಲಿ, ಈ ಮದುವೆಯಲ್ಲಿ ವಜ್ರಾಭರಣಕ್ಕೆ ಅವಕಾಶ ಇರಲಿಲ್ಲ. ಅದು ನೆಗೆಟಿವ್ ಶಕ್ತಿ ಹಾಗೂ ಶೀತಲ ಶಕ್ತಿಯನ್ನು ಹೊಂದಿರುವ ಕಾರಣದಿಂದಾಗಿ ವಿರೋಶ್ ಜೋಡಿ ಇದನ್ನು ಬಳಸಿಲ್ಲ ಎನ್ನಲಾಗಿದೆ.
66
ಬೆಲೆ ಎಷ್ಟು, ತೂಕವೆಷ್ಟು?
ಹಾಗಿದ್ದರೆ ರಶ್ಮಿಕಾ ಒಬ್ಬರೇ ಧರಿಸಿರುವ ಚಿನ್ನದ ಬೆಲೆ ಕೇಳಿದ್ರೆ ದಂಗಾದ್ರೂ, ಅಚ್ಚರಿ ಏನೂ ಪಡಲ್ಲ ಬಿಡಿ. ಏಕೆಂದರೆ ಇದು ನ್ಯಾಷನಲ್ ಕ್ರಷ್ ಮದ್ವೆ ಅಲ್ವಾ? ಅಂದ ಹಾಗೆ ರಶ್ಮಿಕಾ ಒಬ್ಬರೇ ಧರಿಸಿದ್ದ ಚಿನ್ನಾಭರಣಗಳ ಬೆಲೆ ಏಳು ಕೋಟಿ ರೂಪಾಯಿಗೂ ಅಧಿಕ ಎನ್ನಲಾಗಿದೆ. ಇವರು ಧರಿಸಿದ್ದು 3 ಕೆಜಿಗೂ ಹೆಚ್ಚು ತೂಕದ ಆಭರಣ ಎನ್ನಲಾಗಿದೆ. ಅದನ್ನು ಬಿಟ್ಟು ಅಷ್ಟೇ ತೂಕದ ಆಭರಣಗಳನ್ನು ವಿಜಯ ದೇವರಕೊಂಡ ಅವರು ಧರಿಸಿದ್ದು ಕೂಡ ವಿಶೇಷವಾಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.