ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ರಕ್ಷಿತ್ ಶೆಟ್ಟಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸ್ವೀಕರಿಸುವಾಗ, ಕಪ್ಪು ಹುಡುಗಿ ಬಗ್ಗೆ ಮಾತನಾಡಿದ್ದಾರೆ. ನಟ ಹೇಳಿದ್ದೇನು?
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Mandanna and Vijaya Devarakonda) ಇದಾಗಲೇ ಸಪ್ತಪದಿ ತುಳಿದಾಗಿದೆ. ಇಬ್ಬರೂ ಅಧಿಕೃತವಾಗಿ ಗಂಡ-ಹೆಂಡತಿ ಆಗಿದ್ದಾರೆ. ಅವರ ಮದುವೆಯಾದರೂ ಯಾಕೋ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮಾತ್ರ, ರಶ್ಮಿಕಾ ಮತ್ತು ರಕ್ಷಿತ್ ಅವರ ಸಂಬಂಧವನ್ನು ಬಿಡುವಂತೆ ಕಾಣಿಸುತ್ತಿಲ್ಲ.
26
ರಶ್ಮಿಕಾ-ರಕ್ಷಿತ್ ಬ್ರೇಕಪ್
ಅಷ್ಟಕ್ಕೂ ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಕಾರಣವಾಗಿರೋ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಕೊನೆಗೆ ಸಕತ್ ಫೇಮಸ್ ಆದ ಮೇಲೆ ಮದುವೆ ಮುರಿದಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ಆದರೆ ಇವರಿಬ್ಬರ ನಡುವೆ ನಿಜವಾಗಿಯೂ ಆಗಿದ್ದೇನು ಎನ್ನುವುದು ಮಾತ್ರ ನಿಗೂಢ.
36
ರಕ್ಷಿತ್ ಹಳೆಯ ವಿಡಿಯೋ
2018ರಲ್ಲಿ ನಡೆದಿರುವ ಈ ಘಟನೆಯನ್ನು ರಕ್ಷಿತ್ ಶೆಟ್ಟಿ (Rakshit Shetty and Rashmika Mandannas engagement) ಮರೆತಿದ್ದರೂ, ಮೊದಲ ಪ್ರೀತಿಯನ್ನು ಮರೆಯುವುದು ಅಷ್ಟು ಸುಲಭವಲ್ಲ ಎನ್ನುವುದು ಬ್ರೇಕಪ್ ಆಗಿರೋರಿಗೆ ತಿಳಿದಿರುವ ಕಾರಣದಿಂದ ರಕ್ಷಿತ್ ಅವರ ಹಳೆಯ ವಿಡಿಯೋಗಳನ್ನು ಹುಡುಕಿ ಹುಡುಕಿ ಹಾಕುತ್ತಿದ್ದಾರೆ.
ಇದೀಗ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ. ಫಿಲ್ಮ್‌ಫೇರ್ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ರಕ್ಷಿತ್ ಶೆಟ್ಟಿ ಅವರಿಗೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಕ್ಕಾಗಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಬಂದ ಸಂದರ್ಭದ ವಿಡಿಯೋ ಇದಾಗಿದೆ.
56
ಅಮ್ಮನಿಗೆ ಖುಷಿ
ಸಾಮಾನ್ಯವಾಗಿ ಫಿಲ್ಮ್ ಫೇರ್ ಪ್ರಶಸ್ತಿಗಳಲ್ಲಿ ಕಪ್ಪು ಬಣ್ಣದ ಹುಡುಗಿಯ ಶೀಲ್ಡ್ ನೀಡಲಾಗುತ್ತದೆ. ಆ ಸಮಯದಲ್ಲಿ ಆ ಪದಕವನ್ನು ಹಿಡಿದು ರಕ್ಷಿತ್ ಶೆಟ್ಟಿ ಅವರು, ಈ ಕಪ್ಪು ಹುಡುಗಿಯನ್ನು ಕರೆದುಕೊಂಡು ಹೋದಾಗಲೆಲ್ಲಾ ನನ್ನ ಅಮ್ಮನಿಗೆ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.
66
ಬ್ಲ್ಯಾಕ್ ಹುಡುಗಿ ಇಷ್ಟ
ಇದೇ ಕಾರಣಕ್ಕೆ ಈ ಬ್ಲ್ಯಾಕ್ ಹುಡುಗಿ ನನಗೆ ತುಂಬಾ ಇಷ್ಟ. ಅಮ್ಮನಿಗಂತೂ ತುಂಬಾ ಇಷ್ಟ. ಆದ್ದರಿಂದ ಅವಾರ್ಡ್ ಕೊಟ್ಟವರಿಗೆ ತುಂಬಾ ಧನ್ಯವಾದ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.