Amruthadhaare Serial: ರಿಯಲ್​ ಮದ್ವೆಗಾಗಿ ಜೈದೇವ್​ ಪ್ಲಾಸ್ಟಿಕ್​ ಸರ್ಜರಿ? ಹೊಸ ಅವತಾರದಲ್ಲಿ ಜೈ- ಯಾರೀ ನಟ

Published : Sep 16, 2026, 12:30 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಕೊಲೆಯಾಗಿದ್ದ ಜೈದೇವ ಸಮಾಧಿಯಿಂದ ಜೀವಂತವಾಗಿ ಹೊರಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟ ರಾಣವ್ ಗೌಡ ಮದುವೆಯಾಗುತ್ತಿರುವ ಕಾರಣ, ಜೈದೇವನ ಪಾತ್ರಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಬೇರೆ ನಟನನ್ನು ತರುವ ಸಾಧ್ಯತೆ ಇದೆ. ಇದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ.

PREV
16
ಕೊಲೆಯಾಗಿದ್ದ ಜೈದೇವ

ಅಮೃತಧಾರೆ ಸೀರಿಯಲ್​ನಲ್ಲಿ (Amruthadhaare Serial)ನಲ್ಲಿ ಸದ್ಯ ಜೈದೇವನ ಪಾತ್ರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಮಿಂಚುವನ್ನು ಕಿಡ್​ನ್ಯಾಪ್​ ಮಾಡಿದ್ದ ಜೈದೇವನನ್ನು ಅರಿಯದೇ ಕೊಲೆ ಮಾಡಿದ್ದ ಜೀವ. ಅಲ್ಲಿ ಭೂಮಿಕಾ ಮತ್ತು ಮಲ್ಲಿನೂ ಇದ್ದರು.

26
ಕೊಲೆಗೆ ಟ್ವಿಸ್ಟ್​

ಆದರೆ, ಇದೀಗ ಇದಕ್ಕೆ ಭಾರಿ ಟ್ವಿಸ್ಟ್​ ಸಿಕ್ಕಿದೆ. ಕೊಲೆ ಮಾಡಿರುವ ಪಶ್ಚಾತ್ತಾಪದಲ್ಲಿದ್ದ ಭೂಮಿಕಾ ಪೊಲೀಸರಿಗೆ ಶರಣಾಗುವ ನಿಟ್ಟಿನಲ್ಲಿ, ಜೈದೇವನ ಬಾಡಿಯನ್ನು ತೆಗೆದು ಪೊಲೀಸರಿಗೆ ತಿಳಿಸಲು ಹೋದರೆಅಲ್ಲಿ ಶವವೇ ಇರಲಿಲ್ಲ. ಅದನ್ನು ನೋಡಿ ಮಲ್ಲಿಗೆ ಎಲ್ಲಾ ವಿಷಯ ತಿಳಿಸಿದ್ದಾಳೆ ಭೂಮಿಕಾ. ಬಳಿಕ, ಅಲ್ಲಿಯ ಅಧಿಕಾರಿಗಳ ಮಾಹಿತಿ ಪಡೆದ ಮಲ್ಲಿ, ಸಿಸಿಟಿವಿ ಫುಟೇಜ್​ ಚೆಕ್​ ಮಾಡಿಸಿದ್ದಾಳೆ.

36
ಬದುಕಿರೋ ಜೈದೇವ

ಅಲ್ಲಿ ಭಯಾನಕ ದೃಶ್ಯ ಕಂಡುಬಂದಿದೆ. ಜೈದೇವನ ಸಮಾಧಿಯಲ್ಲಿ ಕೈ ಹೊರಕ್ಕೆ ಬಂದಿದ್ದು, ಕಾಪಾಡುವಂತೆ ಆತ ಕೇಳಿಕೊಂಡಿದ್ದಾನೆ. ಅಲ್ಲಿಗೆ ಆತ ಜೀವಂತ ಇರುವುದು ತಿಳಿದಿದೆ. ಆದರೆ ಆತನನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದು ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

46
ಪಾತ್ರ ಬದಲಾಗುತ್ತಾ?

ಆದರೆ,, ಇದರ ನಡುವೆಯೇ, ಜೈದೇವನ ಪಾತ್ರ ಬದಲಾಗತ್ತಾ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ, ಜೈದೇವ್​ ಪಾತ್ರಧಾರಿ ರಾಣವ್​ ಗೌಡ ಅವರ ಮದುವೆ. ಇವರು ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ಭಾರ್ಗವಿ ಹಾಗೂ ಈಮೊದಲಿಗೆ ಮಲ್ಲಿ ಪಾತ್ರ ನಿರ್ವಹಿಸುತ್ತಿದ್ದ ರಾಧಾ ಭಗವತಿ ಜೊತೆ ಮದುವೆಯಾಗಲಿದ್ದಾರೆ.

56
ರಾಣವ್​ ಗೌಡ ಮದುವೆ

ಇವರಿಬ್ಬರ ನಿಶ್ಚಿತಾರ್ಥ ಇದಾಗಲೇ ನಡೆದಿದ್ದು, ಮದುವೆ ಶೀಘ್ರದಲ್ಲಿ ಎಂದು ಘೋಷಿಸಲಾಗಿತ್ತು. ಇದಾಗಲೇ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ಮುಗಿದಿದೆ. ಅಲ್ಲಿಗೆ ಜೈದೇವನಿಗೆ ಸೀರಿಯಲ್​ನಲ್ಲಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದಂತೆ ಮಾಡಿ, ಜೈದೇವನನ್ನು ಹೊಸ ರೂಪದಲ್ಲಿ ತೋರಿಸಲಾಗುತ್ತಾ? ಬೇರೆ ನಟನ ಎಂಟ್ರಿ ಆಗುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಪಾತ್ರಕ್ಕೆ ಇನ್ನಾವ ನಟ ಬರಬಹುದು ಎನ್ನುವ ಚರ್ಚೆಯೂ ಶುರುವಾಗಿದೆ.

66
ವೀಕ್ಷಕರ ಬೇಸರ

ಈ ಬಗ್ಗೆ ಇದಾಗಲೇ ಹಲವರು ಗೆಸ್​​ ಮಾಡುತ್ತಿದ್ದಾರೆ. ಜೈದೇವನ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದಂತೆ ಮಾಡಿ, ಆತನ ಬದಲಿಗೆ ಬೇರೆ ನಟನ ಎಂಟ್ರಿ ಆಗಲಿದೆ. ಇದು ಇನ್ನಷ್ಟು ರೋಚಕತೆಯಿಂದ ಕೂಡಲಿದೆ ಎಂದು ಹೇಳಲಾಗುತ್ತಿದ್ದರೂ, ರಾಣವ್​ ಗೌಡ ಅವರ ಪಾತ್ರಕ್ಕೆ ಮನಸೋತಿರುವ ವೀಕ್ಷಕರು, ಜೈದೇವನ ಪಾತ್ರದಲ್ಲಿ ಬೇರೆ ನಟನನ್ನು ಕಲ್ಪಿಸಿಕೊಳ್ಳಲು ಆಗುವುದಿಲ್ಲ ಎಂದೂ ಹೇಳುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories