ಮೊನಾಲಿಸಾ ಜೊತೆ ಮದುವೆಗೆ ಫರ್ಮಾನ್ ಖಾನ್ ಪೋಷಕರಿಂದಲೂ ವಿರೋಧ: ಅವರು ಹೇಳಿದ್ದೇನು?

Published : Mar 13, 2026, 08:11 AM IST

Monalisa Bhonsle interfaith marriage: ಕುಂಭ ಮೇಳದಿಂದ ಪ್ರಸಿದ್ಧರಾದ ಮೊನಾಲಿಸಾ ಕುಟುಂಬದ ವಿರೋಧದ ನಡುವೆಯೇ ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಮದುವೆಗೆ ಈಗ  ಫರ್ಮಾನ್ ಪೋಷಕರಿಂದಲೂ ವಿರೋಧ ವ್ಯಕ್ತವಾಗಿದೆ.

PREV
16
ಮೊನಾಲಿಸಾ ಜೊತೆ ಮದುವೆಗೆ ಫರ್ಮಾನ್ ಖಾನ್ ಪೋಷಕರು ಹೇಳುವುದೇನು?

ಕುಂಭ ಮೇಳದಿಂದಲೇ ಭಾರತದೆಲ್ಲೆಡೆ ಫೇಮಸ್ ಆಗಿರುವ ಮೊನಾಲಿಸಾ ಮುಸ್ಲಿಂ ಯುವಕ ಫರ್ಮಾನ್ ಖಾನ್‌ನನ್ನು ಮದುವೆಯಾಗುವ ಮೂಲಕ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದ್ದು, ದೊಡ್ಡ ಚರ್ಚೆಯ ವಿಚಾರವಾಗಿದೆ. ಆಕೆ ಮುಸ್ಲಿಂ ಯುವಕನನ್ನು ಮದುವೆಯಾಗಿರುವುದಕ್ಕೆ ಆಕೆಯ ತಂದೆ ಸೇರಿದಂತೆ ಅವರ ಸಮುದಾಯವೂ ಸೇರಿ ಇಡೀ ಕುಟುಂಬದ ವಿರೋಧವಿದೆ. ವಿರೋಧದ ನಡುವೆಯೇ ಮೊನಾಲಿಸಾ ಕೇರಳದ ಕೇರಳದ ಅರುಮನೂರ್‌ನ ನಯನಾರ್ ದೇವಾಲಯದಲ್ಲಿ ಮಾರ್ಚ್ 11 2025 ರಂದು ಫರ್ಮಾನ್ ಖಾನ್ ಅವರನ್ನು ಮದುವೆಯಾಗಿದ್ದರು.

ಇದನ್ನೂ ಓದಿ:

26
ಫರ್ಮಾನ್ ಖಾನ್ ಕುಟುಂಬದಿಂದಲೂ ಮದುವೆಗೆ ವಿರೋಧ

ಈ ಮದುವೆಗೆ ತನ್ನ ಕುಟಂಬದ ತೀವ್ರ ವಿರೋಧವಿದೆ. ನನ್ನ ಪೋಷಕರು ಬೇರೆ ಯುವಕನ ಜೊತೆ ನನ್ನ ಮದುವೆ ಮಾಡಲು ಬಯಸಿದ್ದಾರೆ. ಆದರೆ ನಾನು ಈಗ ಪ್ರಬುದ್ಧಳಾಗಿದ್ದೇನೆ. ನನ್ನಿಷ್ಟದಂತೆ ನನಗೆ ಜೀವಿಸುವ ಹಕ್ಕಿದೆ. ನಾನು ನನ್ನನ್ನು ಪ್ರೀತಿಸುವ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ಹೇಳುವ ಮೂಲಕ ಪೋಷಕರ ವಿರೋಧವನ್ನು ಧಿಕ್ಕರಿಸಿ ಮದುವೆಯಾಗಿದ್ದರು. ಮೊನಾಲಿಸಾ ಪೋಷಕರು ಈ ಮದುವೆಗೆ ತೀವ್ರವಾಗಿ ವಿರೋಧಿಸುತ್ತಿರುವುದರಿಂದ ಈ ಮದುವೆ ವಿಚಾರ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಇಂಟರ್‌ನೆಟ್‌ನಲ್ಲಿ ಮೊನಾಲಿಸಾ ಭೋಂಸ್ಲೆ ಟ್ರೆಂಡಿಂಗ್‌ನಲ್ಲಿದ್ದಾರೆ. ಹೀಗಿರುವಾಗ ಈ ಮದುವೆಗೆ ಕೇವಲ ಮೊನಾಲಿಸಾ ಪೋಷಕರು ಮಾತ್ರ ವಿರೋಧಿಸಿದ್ದ? ಖಂಡಿತ ಅಲ್ಲಾ, ಅತ್ತ ಫರ್ಮಾನ್ ಖಾನ್ ಪೋಷಕರು ಕೂಡ ಈ ಮದುವೆಗೆ ತೀವ್ರವಾಗಿ ವಿರೋಧಿಸಿದ್ದಾರೆ ಎಂಬ ವಿಚಾರ ವರದಿಯಾಗಿದೆ.

ಇದನ್ನೂ ಓದಿ: 

ಇರಾನ್‌ನಲ್ಲಿ 2.6 ರೂ.ಗೆ ಪೆಟ್ರೋಲ್: ತೈಲ ಸಂಪದ್ಭರಿತ ವೆನೆಜುವೆಲಾದಲ್ಲಿಯೂ ಪೆಟ್ರೋಲ್‌ಗೆ 5 ರೂ.ಗಿಂತ ಕಡಿಮೆ

36
ನಮಗೆ ಈ ಮದುವೆ ಇಷ್ಟವಿಲ್ಲ: ಫರ್ಮಾನ್ ತಂದೆ ಜಾಫರ್ ಅಲಿ

ಮೊನಾಲಿಸಾ ಮದುವೆಯಾಗಿರುವ ಫರ್ಮಾನ್ ಖಾನ್ ಅವರ ತಂದೆ ಈ ಮದುವೆಗೆ ಸಾರ್ವಜನಿಕವಾಗಿಯೇ ತಮ್ಮ ವಿರೋಧ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಭಾಗ್ಫತ್ ನಿವಾಸಿಯಾದ ಫರ್ಮಾನ್ ಖಾನ್ ಅವರ ಕುಟುಂಬದಲ್ಲಿ ಈ ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಮದುವೆಯ ಬಗ್ಗೆ ನಮಗೆ ತಿಳಿದಿಲ್ಲ, ಈ ಸಂಬಂಧವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಫರ್ಮಾನ್ ಅವರ ತಂದೆ ಜಾಫರ್ ಅಲಿ, ಮೊನಾಲಿಸಾ ಬೇರೆ ಧರ್ಮಕ್ಕೆ ಸೇರಿದವರಾಗಿರುವುದರಿಂದ ಈ ಮದುವೆ ಬಗ್ಗೆ ತಮಗೆ ಅಸಮಾಧಾನವಿದೆ ಎಂದು ಹೇಳಿದ್ದಾರೆ. ಈ ಜೋಡಿಯ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗಿದ್ದು, ಇದು ಭಾಗ್ಪತ್ ಜಿಲ್ಲೆಯಾದ್ಯಂತ ಗಮನ ಸೆಳೆದಿದೆ.

ಇದನ್ನೂ ಓದಿ: 683 ಕೋಟಿ ವೆಚ್ಚದಲ್ಲಿ 76 ಮೌಲಾನಾ, 41 ಉರ್ದು ಶಾಲೆ ಪಬ್ಲಿಕ್ ಶಾಲೆಗಳ ಉನ್ನತೀಕರಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

46
ನಾವು ಮುಸ್ಲಿಂ ಜಾಟ್‌ಗಳು, ಇದು ಸಮಸ್ಯೆ ತರುತ್ತದೆ.

ಈ ಮದುವೆಯಿಂದ ನನಗೆ ಸಂತೋಷವಿಲ್ಲ, ಅವಳು ಬೇರೆ ಧರ್ಮಕ್ಕೆ ಸೇರಿದವಳು, ಆದರೆ ನಾವು ಮುಸ್ಲಿಂ ಜಾಟ್‌ಗಳು ಇದು ಭವಿಷ್ಯದಲ್ಲಿ ಕುಟುಂಬದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಜಾಫರ್ ಅಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ಫಾರ್ಮಾನ್ ತನ್ನ ಮದುವೆ ಪ್ಲಾನ್‌ಗಳ ಬಗ್ಗೆ ಕುಟುಂಬಕ್ಕೆ ಎಂದಿಗೂ ತಿಳಿಸಿರಲಿಲ್ಲ. ಫಾರ್ಮನ್ ಸಾಂದರ್ಭಿಕವಾಗಿ ಹಳ್ಳಿಗೆ ಭೇಟಿ ನೀಡುತ್ತಿದ್ದರು, ಆದರೆ ಅವರು ಮದುವೆಯಾಗುವುದಾಗಿ ನಮಗೆ ಎಂದಿಗೂ ಹೇಳಲಿಲ್ಲ. ಇದು ಅವರ ಮೊದಲ ತಪ್ಪು. ನಾವು ಅದನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನ್ಯಾಯೋಚಿತವಲ್ಲದ ವ್ಯಾಪಾರ: ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ

56
ಮಾಧ್ಯಮಗಳಿಂದ ಮದುವೆಯ ಬಗ್ಗೆ ಮಾಹಿತಿ ಸಿಕ್ಕಿತು.

ಮೊನಾಲಿಸಾಳನ್ನು ಫರ್ಮಾನ್ ಮದುವೆಯಾಗಿರುವ ವಿಚಾರ ಮಾಧ್ಯಮ ವರದಿಗಳ ಮೂಲಕ ನಮ್ಮ ಕುಟುಂಬಕ್ಕೆ ತಿಳಿಯಿತು ಎಂದು ಫರ್ಮಾನ್ ಸಹೋದರ ಶಮದ್ ಹೇಳಿದ್ದಾರೆ. ಫರ್ಮಾನ್ ದೇವಸ್ಥಾನದಲ್ಲಿ ಮದುವೆಯಾದಾಗ ಮಾಧ್ಯಮಗಳ ಮೂಲಕ ಅವರ ಮದುವೆಯ ಬಗ್ಗೆ ನಮಗೆ ತಿಳಿದುಬಂತು. ಅವರು ಮೊನಾಲಿಸಾಳನ್ನು ಮದುವೆಯಾಗುವುದಾಗಿ ಎಂದಿಗೂ ನಮಗೆ ಹೇಳಲಿಲ್ಲ ಎಂದು ಅವರು ಹೇಳಿದರು. ಫರ್ಮಾನ್ ಜೊತೆಗಿನ ವೃತ್ತಿಪರ ಒಡನಾಟದಿಂದ ಮಾತ್ರ ನಮ್ಮ ಕುಟುಂಬಕ್ಕೆ ಮೊನಾಲಿಸಾಳ ಪರಿಚಯವಾಯಿತು ಎಂದು ಶಮದ್ ಹೇಳಿದ್ದಾರೆ.

ಇದನ್ನೂ ಓದಿ: ಗೋಯಿಂಗ್ ಡಾರ್ಕ್ ತಂತ್ರ ಬಳಕೆ: ಯುದ್ಧ ಆರಂಭವಾದ ಬಳಿಕ ಯಶಸ್ವಿಯಾಗಿ ಹರ್ಮುಜ್ ದಾಟಿ ಭಾರತಕ್ಕೆ ಬಂದ ಮೊದಲ ಕಚ್ಚಾತೈಲ ಹಡಗು

66
ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಮದುವೆ

ಅವಳು ಅವನ ಜೊತೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾಳೆಂದು ನಮಗೆ ತಿಳಿದಿದೆ. ಆದರೆ ಅವನು ಮಾಡಿದ್ದು ಸರಿಯಲ್ಲ. ನಾವು ಅದರಿಂದ ಸಂತೋಷವಾಗಿಲ್ಲ ಎಂದು ಶಮದ್ ಅವರು ಹೇಳಿದರು. ಕುಟುಂಬದ ಈ ಹೇಳಿಕೆಗಳ ನಂತರ, ಈ ವಿವಾಹವು ಪಲ್ರಾ ಗ್ರಾಮ ಮತ್ತು ಹತ್ತಿರದ ಪ್ರದೇಶಗಳಲ್ಲಿ ಚರ್ಚೆಯ ವಿಷಯವಾಗಿದೆ, ಸ್ಥಳೀಯರು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೇರಳದ ದೇಗುಲದಲ್ಲಿ ನಡೆದ ಈ ಮದುವೆಯೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೇರಳದ ರಾಜಕೀಯ ನಾಯಕರಾದ ವಿ ಶಿವನ್‌ಕುಟ್ಟಿ, ಎಂವಿ ಗೋವಿಂದನ್ ಮತ್ತು ಎಎ ರಹೀಮ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರಿಂದ ಇದು ಸಾಕಷ್ಟು ಗಮನ ಸೆಳೆಯಿತು.

ಇದನ್ನೂ ಓದಿ: ಕುಂಭ ಮೇಳದ ಬೆಡಗಿ ಮೊನಾಲಿಸಾಳನ್ನು ಮದುವೆಯಾದ ಈ ಫರ್ಮಾನ್ ಖಾನ್ ಯಾರು?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories