ಸೂರ್ಯವಂಶದ ಚೆಲುವೆ ಬಾಳಲ್ಲಿ ಬಿರುಗಾಳಿ: ದಾಂಪತ್ಯಕ್ಕೆ ಗುಡ್‌ಬಾಯ್ ಹೇಳಿದ ಇಶಾ ಕೊಪ್ಪಿಕರ್

First Published | Dec 29, 2023, 12:45 PM IST

ಸೂರ್ಯವಂಶದ ಪದ್ಮ ಬಾಳಲ್ಲಿ ಬಿರುಗಾಳಿ ಎದ್ದಿದ್ದು ಈ ನಟಿ ಇಶಾ ಕೊಪ್ಪಿಕರ್ ಪತಿಯಿಂದ ದೂರವಾಗಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವಿಚಾರ ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಬಾಲಿವುಡ್ ನಟಿ, ಸೂರ್ಯವಂಶ ಸಿನಿಮಾದಲ್ಲಿ ವಿಷ್ಣುವರ್ಧನ್‌ ಜೊತೆ ನಟಿಸಿದ ಇಶಾ ಕೊಪ್ಪಿಕರ್ ಯಾರಿಗೆ ಗೊತ್ತಿಲ್ಲ, ವಿವಾಹದ ನಂತರ ಸಿನಿಮಾ ಕ್ಷೇತ್ರದಿಂದ ಸ್ವಲ್ಪ ಬ್ರೇಕ್ ತೆಗದುಕೊಂಡು ಮತ್ತೆ ಬಂದಿದ್ದ ಈ ನಟಿ ಈಗ ವೈಯಕ್ತಿಕ ಕಾರಣದಿಂದ ಮುನ್ನೆಲೆಗೆ ಬಂದಿದ್ದಾರೆ. 

ಸೂರ್ಯವಂಶದ ಪದ್ಮ ಬಾಳಲ್ಲಿ ಬಿರುಗಾಳಿ ಎದ್ದಿದ್ದು ಈ ನಟಿ ಪತಿಯಿಂದ ದೂರವಾಗಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವಿಚಾರ ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

Tap to resize

ಗಂಡ ಹೆಂಡತಿ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣಕ್ಕೆ ಇಶಾ ಹಾಗೂ ಪತಿ ಟಿಮ್ಮಿ ನಾರಂಗ್ ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಇಶಾ ಕೊಪ್ಪಿಕರ್ ಅವರು 2009ರಲ್ಲಿ ಉದ್ಯಮಿ ಟಿಮ್ಮಿ ನಾರಂಗ್ ಅವರನ್ನು ವಿವಾಹವಾಗಿದ್ದರು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ರಿಯಾನಾ ಎಂಬ ಹೆಣ್ಣು ಮಗುವೂ ಇದೆ. 

ಜಿಮ್ಮೊಂದರಲ್ಲಿ ಪರಸ್ಪರ ಮೊದಲಿಗೆ ಭೇಟಿಯಾಗಿದ್ದ ಜೋಡಿ ನಂತರ ಪ್ರೀತಿಸಿ ಮದುವೆಯಾಗಿದ್ದರು. ಡೇಟಿಂಗ್ ಆರಂಭಿಸುವುದಕ್ಕೂ ಮೊದಲು ಮೂರು ವರ್ಷಗಳ ಕಾಲ ಇಬ್ಬರಿಗೆ ಪರಸ್ಪರ ಪರಿಚಯ ಇತ್ತು. ನಂತರ 2009ರಲ್ಲಿ ಮದುವೆಯಾದ ಈ ಜೋಡಿ 2014ರಲ್ಲಿ  ರಿಯಾನಾ ಎಂಬ ಮಗುವಿಗೆ ಪೋಷಕರಾಗಿದ್ದರು.

ಇತ್ತೀಚೆಗೆ ಇಶಾ ಕೊಪ್ಪಿಕರ್ ತನ್ನ 9 ವರ್ಷದ ಮಗಳು ರಿಯಾನಾ ಜೊತೆ  ಗಂಡನ ಮನೆಯಿಂದ ಹೊರಬಂದು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರು ಕಳೆದ ತಿಂಗಳೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಮೂಲವೊಂದು ವರದಿ ಮಾಡಿದೆ. ಹೊಂದಾಣಿಕೆಯ ಕೊರತೆಯಿಂದ ಇಬ್ಬರೂ ದೂರಾಗುತ್ತಿದ್ದಾರೆ. 

ಈ ಮದುವೆಯನ್ನು ಉಳಿಸಿಕೊಳ್ಳಲು ಇಬ್ಬರು ಬಹಳಷ್ಟು ಪ್ರಯತ್ನ ಮಾಡಿದರು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಇಶಾ ಕೊಪ್ಪಿಕರ್ ಆಪ್ತರೊಬ್ಬರು ಹೇಳಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಈ ವಿಚಾರವಾಗಿ ಮಾಧ್ಯಮವೊಂದು ಈ ವಿಚಾರವಾಗಿ ಇಶಾ ಅವರನ್ನು ಸಂಪರ್ಕಿಸಿದಾಗ ಅವರು ನಾನು ಈ ವಿಚಾರವಾಗಿ ಏನನ್ನು ಹೇಳಲು ಇಷ್ಟಪಡುವುದಿಲ್ಲ, ನನಗೆ ಪ್ರೈವೆಸಿ ಬೇಕು ಎಂದು ಹೇಳಿದರು ಎಂದು ವರದಿಯಾಗಿದೆ.

ಇಶಾ ಕೊಪ್ಪಿಕರ್ ಸಿನಿಮಾ ವಿಚಾರಗಳಿಗೆ ಬರುವುದಾದರೆ ಇಶಾ ಅವರು ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ ಡಾನ್‌ನಲ್ಲಿ ಶಾರುಖ್ ಜೊತೆ ನಟಿಸಿದ್ದರು.

ಇದರ ಜೊತೆಗೆ ಪಿಂಜರ್, ದಿಲ್ ಕಾ ರಿಸ್ತಾ, ಡರ್ನಾ ಮನಾ ಹೈ, ರುದ್ರಾಕ್ಷ, ಕೃಷ್ಣ ಕಾಟೇಜ್, ಕ್ಯಾ ಕೂಲ್ ಹೈ ಹಮ್, ಸಲಾಂ ಇ- ಇಷ್ಕ್ ಮುಂತಾದ ಹಿಂದಿ ಸಿನಿಮಾಗಳು ಸೇರಿದಂತೆ ಕನ್ನಡದ ಸೂರ್ಯವಂಶಿ ಹಾಗೂ ತಮಿಳು, ಮರಾಠಿಗಳನ್ನು ನಟಿಸಿದ್ದಾರೆ. 

ಫಿಕ್ಸರ್‌, ಧಹನಮ್, ಸುರಂಗ ಮುಂತಾದ ವೆಬ್ ಸಿರೀಸ್‌ಗಳಲ್ಲಿಯೂ ನಟಿಸಿದ್ದಾರೆ. ಪ್ರಸ್ತುತ ತಮಿಳಿನ ವಿಜ್ಞಾನ ಕತೆ ಆಧರಿತ ಅಯಲಾನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಆರ್ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ. ಕೆಜೆಆರ್ ಸ್ಟುಡಿಯೋದಡಿ ಕೊಟಪಡಿ ಜೆ ರಾಜೇಶ್ ಎಂಬುವವರು ನಿರ್ಮಾಣಮಾಡುತ್ತಿದ್ದಾರೆ. 

ಈ ಸಿನಿಮಾದಲ್ಲಿ ಇಶಾ ಕೊಪ್ಪಿಕರ್‌ ಜೊತೆ ನಟ ಶಿವಕಾರ್ತಿಕೇಯನ್, ರಾಕುಲ್ ಪ್ರೀತ್ ಸಿಂಗ್, ಶರದ್‌ ಕೆಲ್ಕರ್, ಭಾನುಪ್ರಿಯ, ಯೋಗಿಬಾಬ, ಕರುಣಾಕರನ್, ಬಾಲ ಶರವಣನ್ ನಟಿಸುತ್ತಿದ್ದಾರೆ. 

Latest Videos

click me!