ಅಮೃತಾ ಜೊತೆ ಮದ್ವೆಯಾಗಲು ಮನೆ ಬಿಟ್ಟು ಓಡಿ ಹೋಗಿದ್ದ ಸೈಫ್‌: KWK 8 ಶೋನಲ್ಲಿ ಮಗನ ಕಿತಾಪತಿ ನೆನೆದ ಅಮ್ಮ

First Published | Dec 28, 2023, 3:56 PM IST

ಕಾಫಿ ವಿತ್ ಕರಣ್‌ ಶೋ 8ನೇ ಆವೃತ್ತಿಯಲ್ಲಿ ಈ ಬಾರಿ ಬಾಲಿವುಡ್‌ ಹಿರಿಯ ನಟಿ ಶರ್ಮಿಳಾ ಠಾಗೋರ್ ತಮ್ಮ ಪುತ್ರ ಬಾಲಿವುಡ್ ನಟ ಸೈಫ್‌ ಅಲಿಖಾನ್ ಜೊತೆ ಭಾಗಿಯಾಗಿದ್ದು, ಅಮ್ಮನಾಗಿ ಅವರು ಮಗ ಸೈಫ್ ಅಲಿಖಾನ್ ಬಗೆಗಿನ ಹಲವು ಸಿಕ್ರೇಟ್‌ಗಳನ್ನು ರಿವೀಲ್ ಮಾಡಿದ್ದಾರೆ. ಮಗ ಯೌವ್ವನದಲ್ಲಿ ಮಾಡಿದ ಹಲವು ಕಿತಾಪತಿಗಳ ಮೆಲುಕು ಹಾಕಿದ್ದಾರೆ. 
 

ನಟಿ ಸೈಫ್ ಅಲಿಖಾನ್ ಅವರು 1991ರಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. ಇವರ ದಾಂಪತ್ಯದಲ್ಲಿ ಇಬ್ಬರು ಮಕ್ಕಳಾಗಿದ್ದು, ಬಾಲಿವುಡ್ ನಟಿ ಸಾರಾ ಅಲಿಖಾನ್ ಹಾಗೂ ಸೋದರ ಇಬ್ರಾಹಿಂ ಅಲಿ ಖಾನ್ ಇವರ ಪುತ್ರ ಎಂಬುದು ಬಹುತೇಕರಿಗೆ ಗೊತ್ತು.

ಅಮೃತಾ ಜೊತೆ ಮದ್ವೆ ವೇಳೆ ಸೈಫ್‌ಗೆ ಕೇವಲ 20 ವರ್ಷ ವಯಸ್ಸು, ಅತ್ತ ಅಮೃತಾ ಸೈಫ್‌ಗಿಂತ ಬರೋಬ್ಬರಿ 12 ವರ್ಷ ದೊಡ್ಡವರಾಗಿದ್ದರು. ಹೀಗೆ ಪ್ರೀತಿಸಿ ಮದ್ವೆಯಾಗಿದ್ದರೂ 2004ರಲ್ಲಿ ಈ ಜೋಡಿ ದೂರಾಗಿದ್ದರು.

Tap to resize

ಈಗ ಸೈಫ್ ಅಮ್ಮ ಶರ್ಮಿಳಾ ಠಾಗೋರ್ ಅವರು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋದಲ್ಲಿ ಆ ಮದ್ವೆಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. 

ಶೋದಲ್ಲಿ ಕರಣ್ ಜೋಹರ್ ಅವರು ಸೈಫ್ ಅಲಿಖಾನ್‌ಗೆ 'ಹೇಗೆ ಆ ವಯಸ್ಸಿನಲ್ಲಿ ಸಡನ್ ಆಗಿ ಮದ್ವೆಯಾದ್ರಿ' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೈಫ್ ಅಲಿಖಾನ್, ಆ ವೇಳೆ ನನ್ನ ಬದುಕಿನಲ್ಲಿ ಬಹಳಷ್ಟು ಏನೇನೋ ಆಗುತ್ತಿತ್ತು. ಆ ವೇಳೆ ಇದ್ದ ಸಂಬಂಧವನ್ನೇ ಮನೆ ಮಾಡಿಕೊಳ್ಳುವುದು ಸುರಕ್ಷಿತ ಎನಿಸಿತು ಎಂದು ಹೇಳಿಕೊಂಡಿದ್ದಾರೆ. 

ಇದು ಒಂದರ್ಥದಲ್ಲಿ ಮನೆಯಿಂದ ಓಡಿ ಹೋಗುವಂತೆಯೇ ಇತ್ತು. ಆಗ ಏನೇನಾಗುತ್ತಿದ್ದವು ಎಂಬುದು ಈಗ ಸ್ಪಷ್ಟವಾಗಿ ನೆನಪಿಲ್ಲ, ಆ ಸಂಬಂಧದಲ್ಲಿ ನಾನು ಭದ್ರತೆಯನ್ನು ಕಂಡುಕೊಂಡೆ ಜೊತೆಗೆ ಅದು ಒಂದು ಅದ್ಭುತ ಎಂದು ಭಾವಿಸಿದೆ. ಹೀಗಾಗಿ ಈ ಸಂಬಂಧ ನಂಬಿ ಮನೆ ಮಾಡಬಹುದು ಎಂದು ಭಾವಿಸಿದೆ ಎಂದು ಸೈಫ್ ಆಲಿಖಾನ್ ಹೇಳಿದ್ದಾರೆ. 

ಇದೇ ವೇಳೆ ಅಮ್ಮ ಶರ್ಮಿಳಾ ಠಾಗೋರ್ ಕೂಡ ಮಾತನಾಡಿದ್ದು,  ಸೈಫ್ ಅಲಿಖಾನ್ ಹಾಗೂ ಅಮೃತಾ ಸಿಂಗ್ ಬಹಳ ಅನೋನ್ಯವಾಗಿದ್ದರು. ಜೊತೆಯಾಗಿ ಜೀವನವನ್ನು ಬಹಳ ಸಂಭ್ರಮಿಸುತ್ತಿದ್ದರು. ಒಬ್ಬರನ್ನೊಬ್ಬರು ಅಣಕು ಮಾಡುತ್ತಾ ನಗಿಸುತ್ತಾ ಕಾಲ ಕಳೆಯುತ್ತಿದ್ದರು. ಅವರಿಬ್ಬರ ಗುಣಗಳು ಸಾಕಷ್ಟು ಹೋಲುತ್ತಿದ್ದವು, ಇತರರ ಧ್ವನಿಯನ್ನು ಅಣಕು ಮಾಡುತ್ತಾ ಅವರು ಸಾಕಷ್ಟು ನಗುತ್ತಿದ್ದರು ಎಂಬುದನ್ನು ಶರ್ಮಿಳಾ ನೆನಪು ಮಾಡಿಕೊಂಡಿದ್ದಾರೆ. 

ಇನ್ನು ತಮ್ಮ ಮದುವೆ ಬಗ್ಗೆ ಅಮ್ಮನ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಕೂಡ ಈ ಶೋದಲ್ಲಿ ಸೈಫ್ ಅಲಿಖಾನ್ ಹೇಳಿದ್ದಾರೆ. ಅಮೃತ ಜೊತೆ ತಾನು ನಿಗೂಢವಾಗಿ ಮದುವೆಯಾಗಿದ್ದನ್ನು ತಿಳಿದು ಅಮ್ಮ ಶರ್ಮಿಳಾ ಠಾಗೋರ್ ಬಹಳ ಅಸಮಾಧಾನಗೊಂಡಿದ್ದರು. ಈ ಮದುವೆಯಿಂದ ಅವರಿಗೆ ನೋವಾಗಿತ್ತು.

ಮದುವೆಯ ನಂತರವಷ್ಟೇ ನಟ  ಸೈಫ್ ತಾನು ಮದುವೆಯಾಗಿರುವ ವಿಚಾರವನ್ನು ಅಮ್ಮನಿಗೆ ತಿಳಿಸಿದ್ದರು.  ವಿಚಾರ ತಿಳಿದ ನಂತರ ಅಮ್ಮ ನನ್ನನ್ನು ಬೆಂಬಲಿಸಿದ್ದರೂ ಕೂಡ ಅವರಿಗೆ ಮನಸ್ಸಿನಾಳದಲ್ಲಿ ಬಹಳ ನೋವಾಗಿತ್ತು ಎಂದು ಹೇಳಿಕೊಂಡಿದ್ದಾರೆ ಸೈಫ್. 

ನಾನು ಮೊದಲಿಗೆ ಈ ವಿಚಾರ ಅಮ್ಮನಿಗೆ ಹೇಳಿದಾಗ ಅವರು ನೀನು ಬೇರೆಯವರೊಂದಿಗೆ ವಾಸ ಮಾಡುತ್ತಿದ್ದೀಯಾ ಹಾಗೂ ನೀನು ಏನೋ ಮಾಡುತ್ತಿದ್ದೀಯಾ ಎಂದು ನನಗನಿಸುತ್ತಿದೆ ಎಂದು ಹೇಳಿದಾಗ ನಾನು ಹೌದು ಎಂದು ಹೇಳಿದೆ. ಅಷ್ಟರಲ್ಲೇ ಅವರು ಒಳ್ಳೆದು ಆದ್ರೆ ಮದ್ವೆ ಆಗ್ಬೇಡ ಎಂದಿದ್ದರು.

ಆ ವೇಳೆ ನಾನು ನಾನು ನಿನ್ನೆಯೇ ಮದ್ವೆ ಆಗ್ಬಿಟ್ಟೆ ಎಂದು ಹೇಳಿದೆ. ಈ ವೇಳೆ ಅವರ ಕಣ್ಣೀರು ಹನಿಯಾಗಿ ಹೊರಬಂತು ಅಲ್ಲದೇ ಅವರು ಅಳಲು ಶುರು ಮಾಡಿದರು. ನೀನು ನಿಜವಾಗಿಯೂ ನನಗೆ ನೋವು ಮಾಡಿದೆ. ಏಕೆ ಈ ವಿಚಾರ ನನಗೆ ತಿಳಿಸಲಿಲ್ಲ ಎಂದು ಕೇಳಿದರು ಎಂದು ಸೈಫ್ ಹೇಳಿಕೊಂಡಿದ್ದಾರೆ. 

ಇದೇ ವೇಳೆ ಸೊಸೆ ಅಮೃತಾ ಅವರ ಜೊತೆ ತಮ್ಮ ಮೊದಲ ಭೇಟಿಯನ್ನು ಶರ್ಮಿಳಾ ಠಾಗೋರ್ ನೆನಪು ಮಾಡಿಕೊಂಡಿದ್ದಾರೆ. ನಾನು ಯಾವುದೋ ಕಾರಣಕ್ಕಾಗಿ ಮುಂಬೈಗೆ ಬಂದಿದ್ದೆ. ಈ ವೇಳೆ ಸೈಫ್ ನನ್ನ ಬಳಿ ಬಂದು ನಿಮಗೇನೋ ಹೇಳಬೇಕು ಎಂದಿದ್ದ ಮತ್ತು ಹೇಳಿದ, ವಿಚಾರವನ್ನು ಹೇಳಿದ ಹಾಗೇ ಹೇಳಿದ ಕೂಡಲೇ ನಾನು ಟೈಗರ್(ಪತಿ ಮನ್ಸೂರ್ ಅಲಿ ಖಾನ್ ಪಟೌಡಿ) ಬಳಿ ಓಡಿದೆ. ಹಾಗೂ ಅವರಿಗೆ ವಿಚಾರ ತಿಳಿಸಿದೆ.  

ಅಲ್ಲದೇ ಮುಂದೆ ಅಮೃತಾಳನ್ನು ಭೇಟಿಯಾಗಬೇಕು ಎಂದು ಹೇಳಿದೆ. ನಂತರ ಮಾರನೇ ದಿನವೇ ನಾವು ಅಮೃತಾ ಅವರನ್ನು ಭೇಟಿಯಾಗಿ ಜೊತೆಯಾಗಿ ಟೀ ಕುಡಿದೆವು. ಆಕೆಯನ್ನು ನಾನೂ ಇಷ್ಟಪಟ್ಟೆ ಎಂದು ಹೇಳಿಕೊಂಡಿದ್ದಾರೆ ಶರ್ಮಿಳಾ ಠಾಗೋರ್.

Latest Videos

click me!