Valentines Day: ಬೆಂಗಳೂರಲ್ಲಿ ಪ್ರೇಮಿಗಳು ವಿಸಿಟ್ ಮಾಡಬಹುದಾದ ರೋಮ್ಯಾಂಟಿಕ್ ರೆಸ್ಟೋರೆಂಟ್‌

Published : Feb 13, 2024, 03:59 PM IST

ವ್ಯಾಲೆಂಟೈನ್ಸ್ ಡೇ ಅಂದ್ರೆ ಪ್ರೇಮಿಗಳು ಆ ದಿನವನ್ನು ಸ್ಪೆಷಲ್ ಆಗಿ ಕಳೆಯಬೇಕೆಂದು ಬಯಸ್ತಾರೆ. ಅದಕ್ಕಾಗಿ ಆ ದಿನ ಸ್ಪೆಷಲ್ ಡೇಟ್‌, ಡಿನ್ನರ್‌ನ್ನು ಆರೇಂಜ್ ಮಾಡಿರ್ತಾರೆ. ಬೆಂಗಳೂರಿನಲ್ಲಿ ಪ್ರೇಮಿಗಳು ವಿಸಿಟ್ ಮಾಡಬಹುದಾದ ರೋಮ್ಯಾಂಟಿಕ್ ರೆಸ್ಟೋರೆಂಟ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.  

PREV
17
Valentines Day: ಬೆಂಗಳೂರಲ್ಲಿ ಪ್ರೇಮಿಗಳು ವಿಸಿಟ್ ಮಾಡಬಹುದಾದ ರೋಮ್ಯಾಂಟಿಕ್ ರೆಸ್ಟೋರೆಂಟ್‌

ಓಲಿವ್ ಬೀಚ್
ಸುಂದರವಾದ ಈ ರೆಸ್ಟೋರೆಂಟ್ ಕ್ಯಾಂಡಲ್‌ ಲೈಟ್ ಟೇಬಲ್‌ಗಳನ್ನು ಒಳಗೊಂಡಿರುತ್ತದೆ. ಸುಂದರವಾದ ಆಂಬಿಯನ್ಸ್‌ನೊಂದಿಗೆ ಔಟ್‌ಡೋರ್ ಸೀಟಿಂಗ್ ಈ ಸ್ಥಳವನ್ನು ಇನ್ನಷ್ಟು ರೋಮ್ಯಾಂಟಿಕ್ ಆಗಿಸಿದೆ. ಇಲ್ಲಿ ಎಲ್ಲಾ ರೀತಿಯ ಟೇಸ್ಟೀ ಆಹಾರಗಳು ಲಭ್ಯವಿದೆ.

27

ಫಾವಾ
ಯುರೋಪಿಯನ್ ತಿನಿಸುಗಳಿಗೆ ಫಾವಾ ರೆಸ್ಟೋರೆಂಟ್ ಹೆಚ್ಚು ಹೆಸರುವಾಸಿಯಾಗಿದೆ. ಸುಂದರವಾದ ಹಸಿರು ಪರಿಸರದಲ್ಲಿ ಇಲ್ಲಿ ಔಟ್‌ಡೋರ್‌ನಲ್ಲಿ ಕುಳಿತು ಡಿನ್ನರ್‌ ಸವಿಯಬಹುದು. ಪ್ರೇಮಿಗಳ ಜೊತೆಗೆ ಸಮಯ ಕಳೆಯಲು ಹೇಳಿ ಮಾಡಿಸಿದ ಜಾಗ.

37

ದಿ ಟಾವೊ ಟೆರೇಸಸ್‌
ಬೆಂಗಳೂರಿನ ಹೃದಯಭಾಗದಲ್ಲಿರುವ ದಿ ಟಾವೊ ಟೆರೇಸಸ್‌ ರೂಫ್‌ ಟಾಪ್‌ ಡೈನಿಂಗ್‌ ಎಕ್ಸ್‌ಪಿರೀಯನ್ಸ್ ಪಡೆಯಲು ಉತ್ತಮ ಸ್ಥಳ. ನಗರದ ಸುಂದರವಾದ ವ್ಯೂ ನೋಡುತ್ತಾ ಇಲ್ಲಿ ಫುಡ್ ಎಂಜಾಯ್ ಮಾಡಬಹುದು. ಪಾನ್‌-ಏಷ್ಯನ್ ಆಹಾರಕ್ಕೆ ಈ ರೆಸ್ಟೋರೆಂಟ್ ಫೇಮಸ್ ಆಗಿದೆ.

47

ಗ್ರಾಸ್ ಹೋಪರ್
ಇದು ನಗರದಲ್ಲಿರುವ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ. ಮಲ್ಟಿ ಕೋರ್ಸ್‌ ಮೆನುವಿನಲ್ಲಿ ಎಲ್ಲಾ ರೀತಿಯ ಆಹಾರಗಳು ಇಲ್ಲಿ ಲಭ್ಯವಿರುತ್ತದೆ.

57

ಇಬೋನಿ
ಬಾರ್ಟನ್‌ ಸೆಂಟರ್‌ನ ಹದಿಮೂರನೇ ಫ್ಲೋರ್‌ನಲ್ಲಿ ಇಬೋನಿ ಹೊಟೇಲ್‌ ಇದ್ದು, ಪ್ರೇಮಿಗಳ ಡಿನ್ನರ್‌ ಡೇಟ್‌ಗೆ ಹೇಳಿ ಮಾಡಿಸಿದ ಜಾಗ. ನಗರದ ಪನೋರೋಮಿಕ್‌ ವ್ಯೂವನ್ನು ಈ ಹೊಟೇಲ್ ನೀಡುತ್ತದೆ. ಕಾಂಟಿನೇಟಲ್ ಡಿಶಸ್‌ ಇಲ್ಲಿ ಲಭ್ಯವಿದೆ. 

67

ದಿ ಓನ್ಲಿ ಪ್ಲೇಸ್
ರೋಮ್ಯಾಂಟಿಕ್ ಆಂಬಿಯನ್ಸ್‌ನ್ನು ಹೊಂದಿರುವ ಅತ್ಯುತ್ತಮ ಹೊಟೇಲ್‌ಗಳಲ್ಲಿ ಒಂದು ದಿ ಓನ್ಲಿ ಪ್ಲೇಸ್. ಇದು ಪ್ರೇಮಿಗಳ ಡಿನ್ನರ್‌ಗೆ ಸೂಕ್ತವಾದ ಪ್ರಣಯಭರಿತವಾದ ವಾತಾವರಣವನ್ನು ಹೊಂದಿದೆ.

77

ದಿ ಓಬೆರಾಯ್‌
ದಿ ಓಬೆರಾಯ್ ಹೊಟೇಲ್‌ನಲ್ಲಿರುವ 'ರಿಮ್‌ ನಾಮ್‌', ಗಾರ್ಡನ್‌, ವಾಟರ್‌ ಫೌಂಟೇನ್‌ನ್ನು ಒಳಗೊಂಡು ಸುಂದರವಾದ ವಾತಾವರಣವನ್ನು ಹೊಂದಿದೆ. ಇಲ್ಲಿ ಥಾಯ್‌ ಶೈಲಿಯ ಅಡುಗೆಗಳು ಲಭ್ಯವಿರುತ್ತವೆ.

Read more Photos on
click me!

Recommended Stories